ಪಾಕಿಸ್ತಾನ್ ಸೂಪರ್ ಲೀಗ್‌ಗೆ ಭಾರತ, ದಕ್ಷಿಣ ಆಫ್ರಿಕಾದಿಂದ ವಿಮಾನ!

ಕರಾಚಿ: ಕೋವಿಡ್-19 ಕಾರಣದಿಂದಾಗಿ ನಿಲ್ಲಿಸಲಾಗಿರುವ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಇನ್ನುಳಿದ ಪಂದ್ಯಗಳನ್ನು ಮುಂದಿನ ತಿಂಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ನಡೆಸಿದೆ. ಭಾರತದ ಮುಂಬೈ ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಯುಎಇಯಲ್ಲಿ ಚಾರ್ಟರ್ಡ್ ಫ್ಲೈಟ್ ಇಳಿಸಲು ಅನುಮತಿ ದೊರೆತ ಬಳಿಕ ಪಿಸಿಬಿ ನಿರಾಳವಾಗಿದೆ.
ಮೇ 27ರ ಗುರುವಾರದ ವರೆಗೂ ಪಾಕಿಸ್ತಾನ್ ಸೂಪರ್ ಲೀಗ್ ಪಂದ್ಯಗಳು ನಡೆಯೋದು ಅನುಮಾನವಾಗಿತ್ತು. ಯಾಕೆಂದರೆ ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಚಾರ್ಟರ್ಡ್ ಫ್ಲೈಟ್‌ಗಳನ್ನು ಇಳಿಸಲು ಪಿಸಿಬಿಗೆ ಯುಎಇ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ.

ಅನುಮತಿ ನೀಡಲು ಪತ್ರ
'ಭಾರತದ ಮುಂಬೈ ಮತ್ತು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ಚಾರ್ಟರ್ಡ್ ವಿಮಾನಗಳನ್ನು ಇಳಿಯಲು ಅನುಮತಿ ನೀಡುವಂತೆ ಅಬುಧಾಬಿ ಕ್ರೀಡಾ ಮಂಡಳಿ ಈಗ ತನ್ನ ವಲಸೆ ಪ್ರಾಧಿಕಾರಕ್ಕೆ ಪತ್ರ ಬರೆದಿದೆ,' ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದಿಂದ ತಡವಾಗಿ ವೀಸಾ
ಪಿಸಿಬಿಗೆ ಟೂರ್ನಿಯ ಬಗ್ಗೆ ದೊಡ್ಡ ತಲೆನೋವು ಎದುರಾಗಿತ್ತು. ಯಾಕೆಂದರೆ ಪಿಎಸ್‌ಎಲ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಸಾರ (Broadcasting) ತಂಡಕ್ಕೆ ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ವೀಸಾ ದೊರೆತಿರಲಿಲ್ಲ. ಕೊನೆಗೆ ವೀಸಾ ದೊರೆಯಿತು. ಹೀಗಾಗಿ ಪ್ರಸಾರಕರು, ಆಟಗಾರರು ಮತ್ತು ಅಧಿಕಾರಿಗಳು ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಪಿಎಸ್‌ಎಲ್ ಸಲುವಾಗಿ ಯುಎಇಗೆ ತೆರಳಲಿದ್ದಾರೆ.

250 ಮಂದಿ ಯುಎಇಯಲ್ಲಿ
ಗುರುವಾರ (ಮೇ 27) ಕರಾಚಿ ಮತ್ತು ಲಾಹೋರ್‌ನಿಂದ ಪಿಎಸ್‌ಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸುಮಾರು 250 ಮಂದಿಯನ್ನೊಳಗೊಂಡ ಆಟಗಾರರು, ಅಧಿಕಾರಿಗಳು ಮತ್ತು ಪಿಸಿಬಿ ಉದ್ಯೋಗಿಗಳು ಎರಡು ವಿಮಾನಗಳಲ್ಲಿ ಅಬುಧಾಬಿ ತಲುಪಿದ್ದಾರೆ. ಜೂನ್ 7ರಿಂದ ಪಾಕ್ ಸೂಪರ್ ಲೀಗ್ ಪಂದ್ಯಗಳು ಮರುಚಾಲನೆಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications