Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸರಿ ತೀರ್ಪನ್ನು ಸಂಭ್ರಮಿಸಿದ ಅಂಪೈರ್ ಅಲೀಮ್ ದಾರ್: ವಿಡಿಯೋ

PSL 2021: Umpire Aleem Dar Celebrates His Correct Decision

ಕರಾಚಿ: ಕರಾಚಿಯ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್‌ (ಪಿಎಸ್‌ಎಲ್) ಪಂದ್ಯದಲ್ಲಿ ಒಂದು ಗಮ್ಮತ್ತಿನ ದೃಶ್ಯ ಕಾಣಸಿಕ್ಕಿದೆ. ಪಂದ್ಯವೊಂದರ ವೇಳೆ ಮೈದಾನದಲ್ಲಿ ಅಂಪೈರ್ ಒಬ್ಬರು ತಾವಿತ್ತ ತೀರ್ಪನ್ನು ಸಂಭ್ರಮಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾವು ಮೈದಾನದಲ್ಲಿ ಆಟಗಾರರು ಸಂಭ್ರಮಿಸೋದನ್ನು ನೋಡಿದ್ದೇವೆ. ಆದರೆ ಅಂಪೈರ್ ಸಂಭ್ರಮಿಸಿದ್ದು ವಿಶೇಷವಲ್ಲವೆ?

ಪಿಎಸ್‌ಎಲ್ 6ನೇ ಪಂದ್ಯದಲ್ಲಿ ಕರಾಚಿ ಕಿಂಗ್ಸ್ ಮತ್ತು ಇಸ್ಲಮಾಬಾದ್ ಯುನೈಟೆಡ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಇಸ್ಲಮಾಬಾದ್ ಯುನೈಟೆಡ್ ತಂಡ 5 ವಿಕೆಟ್‌ ಗೆಲುವನ್ನಾಚರಿಸಿತ್ತು. ಪಂದ್ಯದ ಕೊನೇ ಕ್ಷಣದಲ್ಲಿ ಆನ್ ಫೀಲ್ಡ್ ಅಂಪೈರ್ ಅಲೀಮ್ ದಾರ್ ಸಂಭ್ರಮಿಸಿದ್ದು ಕಾಣಸಿಕ್ಕಿತ್ತು.

ಪಂದ್ಯದ ಕೊನೇ ಕ್ಷಣದಲ್ಲಿ ಇಸ್ಲಮಾಬಾದ್‌ನ ಬ್ಯಾಟ್ಸ್‌ಮನ್‌ ಆಸಿಫ್ ಅಲಿ ಸಿಂಗಲ್‌ ರನ್‌ಗೆ ಯತ್ನಿಸುವಾಗ ಪ್ಯಾಡ್‌ಗೆ ಬ್ಯಾಟ್ ಹೊಡೆದು ಸಿಂಗಲ್ ಓಡಿದ್ದರು. ಕರಾಚಿ ಕಿಂಗ್ಸ್ ಅಪೀಲ್ ಮಾಡಿದಾಗ ಅಲೀಮ್ ಅವರು ನಾಟ್ ಔಟ್ ತೀರ್ಪು ನೀಡಿದರು. ಇಸ್ಲಮಾಬಾದ್ ಗೆಲುವಿನ ಸಂಭ್ರಮಾಚರಿಸುತ್ತಿರುವಾಗಲೇ ಕರಾಚಿ ಕಿಂಗ್ಸ್ ಡಿಆರ್‌ಎಸ್‌ಗೆ ಕೋರಿಕೊಂಡಿತು.

ಡಿಆರ್‌ಎಸ್ ವೇಳೆ ಆಸಿಫ್‌ಗೆ ಅಲೀಮ್ ನೀಡಿದ್ದ ನಾಟ್‌ಔಟ್ ತೀರ್ಪು ಸರಿಯೆಂದು ನಿರ್ಧರಿಸಲಾಯ್ತು. ಹೀಗಾಗಿ ತಾನಿತ್ತ ತೀರ್ಪು ಸರಿಯೆಂದು ಕಂಡು ಬರುತ್ತಲೇ ದಾರ್ ಅವರು ಸಂಭ್ರಮಾಚರಿಸಿದ್ದರು. ಇತ್ತ ಇಸ್ಲಮಾಬಾದ್ ತಂಡ ಕೂಡ ಪಂದ್ಯ ಗೆದ್ದ ಖುಷಿಯಲ್ಲಿತ್ತು. ಅಂದ್ಹಾಗೆ ದಾರ್ ಇದೇ ಟೂರ್ನಿಯಲ್ಲಿ ಅಂಪೈರಿಂಗ್‌ನಲ್ಲಿ ಎಡವಿದ್ದರು. ಹೀಗಾಗಿ ಈ ಬಾರಿ ತೀರ್ಪು ಸರಿಯಾಗಿದ್ದು ಅವರಿಗೆ ಹೆಚ್ಚು ಖುಷಿ ನೀಡಿತ್ತು.

Story first published: Friday, February 26, 2021, 16:14 [IST]
Other articles published on Feb 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+