PSL 2023: ಉಮ್ರಾನ್ ಮಲಿಕ್ ವೇಗದ ಬೌಲಿಂಗ್ ದಾಖಲೆ ಮುರಿಯುತ್ತೇನೆ ಎಂದ ಪಾಕ್ ಬೌಲರ್

ಉಮ್ರಾನ್ ಮಲಿಕ್ 2022 ಐಪಿಎಲ್‌ನಲ್ಲಿ ಆಡಿದಾಗಿನಿಂದ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ 14 ಪಂದ್ಯಗಳನ್ನಾಡಿದ್ದ ಅವರು 22 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರು. ತಮ್ಮ ವೇಗದ ಬೌಲಿಂಗ್‌ನಿಂದ ಸಾಕಷ್ಟು ಹೆಸರು ಮಾಡಿದ್ದ ಉಮ್ರಾನ್ ಮಲಿಕ್ ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡರು.
ಜನವರಿ ತಿಂಗಳಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಉಮ್ರಾನ್ ಮಲಿಕ್ ಮಿಂಚಿದ್ದರು. 156 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ದಾಖಲೆ ಬರೆದರು. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಪರವಾಗಿ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡಿದ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಉಮ್ರಾನ್ ಮಲಿಕ್ ಬಗ್ಗೆ ಪಾಕಿಸ್ತಾನದ ಕೆಲವು ಕ್ರಿಕೆಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪಾಕಿಸ್ತಾನ ಹೆಚ್ಚಿನ ವೇಗದ ಬೌಲರ್ ಗಳಿಗೆ ಪ್ರಸಿದ್ಧವಾದ ತಂಡವಾಗಿದೆ. ಈಗ ಪಾಕಿಸ್ತಾನದ ಯುವ ಬೌಲರ್ ಒಬ್ಬ ಉಮ್ರಾನ್ ಮಲಿಕ್‌ಗೆ ಸವಾಲಾಕಲು ಸಿದ್ಧವಾಗಿದ್ದಾನೆ.
ಫೆಬ್ರವರಿ 13 ರಿಂದ ಆರಂಭವಾಗಲಿರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್)ನಲ್ಲಿ ಉಮ್ರಾನ್ ಮಲಿಕ್ ವೇಗದ ದಾಖಲೆಯನ್ನು ಮುರಿಯುತ್ತೇನೆ ಎಂದು ಪಾಕಿಸ್ತಾನ ಬೌಲರ್ ವಿಶ್ವಾಸ ವ್ಯಕ್ತಪಡಿಸಿದ್ದಾನೆ. ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಲಾಹೋರ್ ಖಲಂದರ್ಸ್‌ಗಾಗಿ ಆಡುವ ಜಮಾನ್ ಖಾನ್ ಈ ಸವಾಲು ಮಾಡಿದ್ದಾರೆ.

ಉಮ್ರಾನ್ ದಾಖಲೆ ಮುರಿಯುತ್ತೇನೆ !
2023ರ ಪಿಎಸ್‌ಎಲ್ ಆವೃತ್ತಿಯಲ್ಲಿ ಉಮ್ರಾನ್ ಮಲಿಕ್ ಅವರ ಗಂಟೆಗೆ 156 ಕಿಲೋಮೀಟರ್‌ಗಳ ದಾಖಲೆಯನ್ನು ಮುರಿಯುವುದಾಗಿ ತಿಳಿಸಿದ್ದಾರೆ.
"ಈ ಬಾರಿಯ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉಮ್ರಾನ್ ಮಲಿಕ್ ವೇಗದ ಬೌಲಿಂಗ್ ದಾಖಲೆಯನ್ನು ನಾನು ಮುರಿಯುತ್ತೇನೆ" ಎಂದು ಜಮಾನ್ ಖಾನ್ ಪಾಕ್‌ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
"ನಾನು ಉತ್ತಮ ಪ್ರದರ್ಶನ ನೀಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತೇನೆ. ಕಾರ್ಯಕ್ಷಮತೆ ಉತ್ತಮವಾಗಿದ್ದರೆ ಬೌಲಿಂಗ್‌ನಲ್ಲಿ ವೇಗವನ್ನು ಕಾಪಾಡಿಕೊಳ್ಳಬಹುದು" ಎಂದು ಜಮಾನ್ ಖಾನ್ ತಿಳಿಸಿದ್ದಾರೆ.
ಉಮ್ರಾನ್ ಮಲಿಕ್ ಭಾರತದ ಪರವಾಗಿ 8 ಏಕದಿನ ಮತ್ತು 8 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದರೆ, ಟಿ20 ಪಂದ್ಯಗಳಲ್ಲಿ 11 ವಿಕೆಟ್ ಪಡೆದುಕೊಂಡಿದ್ದಾರೆ.
ಉಮ್ರಾನ್ ಮಲಿಕ್ ಸದ್ಯ ಶೋಯೆಬ್ ಅಖ್ತರ್ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ. ಹಲವು ಮಾಜಿ ಕ್ರಿಕೆಟಿಗರು ಕೂಡ ಉಮ್ರಾನ್ ಮಲಿಕ್ ಮುಂದಿನಗಳಲ್ಲಿ ಶೋಯೆಬ್ ಅಖ್ತರ್ ದಾಖಲೆಯನ್ನು ಮುರಿಯುತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications