PSL 2023: ಶಾಹೀನ್ ಅಫ್ರಿದಿ ಮೊದಲ ಎಸೆತದಲ್ಲೇ ಮುರಿಯಿತು ಮೊಹಮ್ಮದ್ ಹ್ಯಾರಿಸ್ ಬ್ಯಾಟ್!

2022ರ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಗಾಯಗೊಂಡಿದ್ದ ಶಾಹೀನ್ ಅಫ್ರಿದಿ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವಾಪಸಾಗಿದ್ದಾರೆ. ಹಲವು ತಿಂಗಳ ವಿಶ್ರಾಂತಿ ಬಳಿಕ ಕ್ರಿಕೆಟ್‌ಗೆ ಮರಳಿರುವ ಅವರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.
ನಡೆಯುತ್ತಿರುವ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶಾಹೀನ್ ಅಫ್ರಿದಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಲಾಹೋರ್ ಖಲಂದರ್ಸ್ ತಂಡದ ನಾಯಕರಾಗಿರುವ ಅಫ್ರಿದಿ ಭಾನುವಾರ ನಡೆದ ಪೇಶಾವರ್ ಝಲ್ಮಿ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದರು.
ಲಾಹೋರ್‌ನ ಗಡಾಫಿ ಸ್ಟೇಡಿಯಂನಲ್ಲಿ ಭಾನುವಾರ, ಫೆಬ್ರವರಿ 26 ರಂದು ನಡೆದ ಪಂದ್ಯದಲ್ಲಿ ನಾಯಕ ಶಾಹೀನ್ ಅಫ್ರಿದಿ ಮೊಹಮ್ಮದ್ ಹ್ಯಾರಿಸ್ ಬ್ಯಾಟ್ ಮುರಿದಿದ್ದಾರೆ. ಇನ್ನಿಂಗ್ಸ್‌ನ ಮೊದಲನೇ ಎಸೆತದಲ್ಲೇ ಶಾಹಿನ್ ಅಫ್ರಿದಿ ವೇಗದ ಎಸೆತವನ್ನು ಆಡಲು ಹೋದ ಹ್ಯಾರಿಸ್ ಬ್ಯಾಟ್ ಮುರಿದು ಬಿದ್ದಿತು.
ಮೊದಲು ಬ್ಯಾಟಿಂಗ್ ಮಾಡಿದ ಲಾಹೋರ್ ಖಲಂದರ್ಸ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 241 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಫಖಾರ್ ಜಮಾನ್ 45 ಎಸೆತಗಳಲ್ಲಿ 96 ರನ್ ಗಳಿಸಿದರೆ, ಅಬ್ದುಲ್ಲಾ ಶಫೀಕ್ 41 ಎಸೆತಗಳಲ್ಲಿ 75 ರನ್ ಗಳಿಸಿದರು. ಸ್ಯಾಮ್ ಬಿಲ್ಲಿಂಗ್ಸ್ 23 ಎಸೆತಗಳಲ್ಲಿ 47 ರನ್ ಗಳಿಸುವ ಮೂಲಕ ಬೃಹತ್ ಕಲೆಹಾಕಲು ಕಾರಣವಾದರು.
ಇದು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಗಳಿಸಿದ ಮೂರನೇ ಅತ್ಯಂತ ಗರಿಷ್ಠ ಮೊತ್ತವಾಗಿದೆ. ಲಾಹೋರ್ ಅಂಗಳದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.
ಮೊದಲ ಎಸೆತದಲ್ಲೇ ಮುರಿದ ಬ್ಯಾಟ್
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಪೇಶಾವರ್ ಝಲ್ಮಿಗೆ ಶಾಹೀನ್ ಅಫ್ರಿದಿ ಆರಂಭದಲ್ಲೇ ಆಘಾತ ನೀಡಿದರು. ಮೊದಲ ಎಸೆತದಲ್ಲೇ ಶಾಹೀನ್ ಬೌಲಿಂಗ್ ಆಡಲು ಹೋದ ಮೊಹಮ್ಮದ್ ಹ್ಯಾರಿಸ್ ಬ್ಯಾಟ್ ಮುರಿಯಿತು. ನಂತರ ಎರಡನೇ ಎಸೆತದಲ್ಲೇ ಅವರು ಕ್ಲೀನ್ ಬೌಲ್ಡ್ ಆದರು.

ನಂತರ ತಮ್ಮ ಎರಡನೇ ಓವರ್ ನಲ್ಲೇ ಅವರು ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಅಜಮ್ ವಿಕೆಟ್ ಪಡೆದರು. ಮಾತ್ರವಲ್ಲದೆ ಈ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣವಾದರು.
242 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಪೇಶಾವರ್ ಝಲ್ಮಿ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 201 ರನ್ ಗಳಿಸುವ ಮೂಲಕ 40 ರನ್‌ಗಳ ಸೋಲನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications