ಪಾಕಿಸ್ತಾನದಲ್ಲಿ ಸದ್ಯ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಡೆಯುತ್ತಿದೆ. ಐಪಿಎಲ್ ಹಾಗೂ ಪಿಎಸ್ಎಲ್ ಎರಡೂ ಲೀಗ್ಗಳು ಒಂದೇ ಸಮಯದಲ್ಲಿ ನಡೆಯುತ್ತಿದ್ದು, ರೋಚಕತೆ ಹೆಚ್ಚಿಸಿದೆ. ಪಿಎಸ್ಎಲ್ನಲ್ಲಿ ಸದ್ಯ ಒಂದು ಪಕ್ರರಣ ಬೆಳಕಿಗೆ ಬಂದಿದೆ. ಈ ಪ್ರಕರಣ ನಿಜಕ್ಕೂ ಪಿಎಸ್ಎಲ್ಗೆ ಕಪ್ಪು ಚುಕ್ಕೆ ಇಟ್ಟಂತೆ ಆಗಿದೆ. ಪಾಕಿಸ್ತಾನಿ ಬೌಲರ್ಗಳು ಚೆಂಡನ್ನು ಹೇಗೆ ನೀಚ ಕೃತ್ಯ ಈಗ ಬಹಿರಂಗವಾಗಿದೆ.
ಭಾನುವಾರ, ಪಿಎಸ್ಎಲ್ನಲ್ಲಿ ಲಾಹೋರ್ ಖಲಂದರ್ ಮತ್ತು ಕರಾಚಿ ಕಿಂಗ್ಸ್ ನಡುವೆ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಾಹೋರ್ ಖಲಂದರ್ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ 128 ರನ್ ಸೇರಿಸಿತು. ಗುರಿಯನ್ನು ಕರಾಚಿ ಕಿಂಗ್ಸ್ ಬೆನ್ನಟ್ಟುವಾಗ 19 ಓವರ್ಗಳಲ್ಲಿ 5 ವಿಕೆಟ್ಗೆ 115 ರನ್ ಗಳಿಸಿತ್ತು. ಈ ವೇಳೆ ಮಕೊನೆಯ ಓವರ್ ಬೌಲ್ ಮಾಡಲು ಹ್ಯಾರೀಸ್ ರೌಫ್ ಮುಂದಾದರು.

ಕೊನೆಯ ಓವರ್ ಯಾರು ಮಾಡಬೇಕು ಎಂಬುದಕ್ಕೆ ಮೈದಾನದಲ್ಲಿ ಒಂದು ಸಭೆಯನ್ನು ನಡೆಸಲಾಯಿತು. ಈ ಚರ್ಚೆಯಲ್ಲಿ ನಾಯಕ ಶಾಹೀನ್, ಬೌಲರ್ ರೌಫ್ ಮತ್ತು ಫಖರ್ ಜಮಾನ್ ಇದ್ದರು. ಆಗ ಮೂವರು ಚೆಂಡನ್ನು ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹಸ್ತಾಂತರಿಸುವುದು ದೃಶ್ಯದಲ್ಲಿ ಕಂಡು ಬಂದಿತು. ಇದೇ ವೇಳೆ ಚೆಂಡನ್ನು ವಿರೂಪಗೊಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು, ಬೌಲಿಂಗ್ ಮಾಡುವ ತಂಡಕ್ಕೆ ಪೆನಾಲ್ಟಿ ನೀಡಲಾಯಿತು.
ಕೊನೆಯ ಓವರ್ನಲ್ಲಿ ಪಂದ್ಯ ಗೆಲ್ಲಲು 14 ರನ್ಗಳು ಬೇಕಾಗಿದ್ದವು. ಇದಕ್ಕೂ ಮೊದಲು ಮೈದಾನದಲ್ಲಿ ವಾಗ್ವಾದ ಕಂಡು ಬಂದಿತು. ಈ ವೇಳೆ ಲಾಹೋರ್ ತಂಡಕ್ಕೆ ಪೆನಾಲ್ಟಿಯ ರೂಪದಲ್ಲಿ ನಾಲ್ಕು ಫೀಲ್ಡರ್ಗಳನ್ನು ಮಾತ್ರ ರಿಂಗ್ ಹೊರಗೆ ನಿಲ್ಲಿಸಲು ಸೂಚಿಸಲಾಯಿತು. ಇದಕ್ಕೂ ಮೊದಲು ನಾಯಕ ಶಾಹಿನ್ ಹಾಗೂ ಅಂಪೈರ್ ಚೆಂಡಿನ ಬಗ್ಗೆ ಚರ್ಚೆ ನಡೆಸಿದರು. ಚೆಂಡು ಶೇಪ್ ಕಳೆದುಕೊಂಡಿದೆ ಎಂದು ತಿಳಿದು ಬಂದಿತು. ಹೀಗಾಗಿ ಬೌಲಿಂಗ್ ಮಾಡುವ ತಂಡಕ್ಕೆ ಐದು ರನ್ಗಳ ಪೆನಾಲ್ಟಿ ನೀಡಲಾಯಿತು. ಕರಾಚಿ ಗೆಲ್ಲಲು ಬೇಕಾದ ರನ್ಗಳನ್ನು ಗಳಿಸಿತು.
ಮೈದಾನದಲ್ಲಿ ಕೊನೆಯ ಓವರ್ಗೂ ಮುನ್ನ ನಡೆದ ಚರ್ಚೆಯಲ್ಲಿ ಶಾಹೀನ್, ಹ್ಯಾರಿಸ್ ಮತ್ತು ಫಖರ್ ಚೆಂಡನ್ನು ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಪಾಸ್ ಮಾಡುತ್ತಿದ್ದರು. ಇವರ ಚರ್ಚೆಯ ಬಳಿಕ ಅಂಪೈರ್ ಚೆಂಡನ್ನು ಪಡೆದು, ಅದರ ಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ನಾಯಕ ಹಾಗೂ ಅಂಪೈರ್ ನಡುವೆ ದೀರ್ಘ ಚರ್ಚೆಗಳು ನಡೆದವು. ಇದರ ನಂತರ, ಚೆಂಡಿನ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಲಾಗಿದೆ ಎಂದು ದೃಢಪಡಿಸಲಾಯಿತು.
ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾತನಾಡಿರುವ, ನಾಯಕ ಶಾಹೀನ್ ಅಫ್ರಿದಿ, ಚೆಂಡು ವಿರೂಪಗೊಳಿಸುವಿಕೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹ್ಯಾರೀಸ್ ರೌಫ್ ಸಹ ತನ್ನ ಪ್ರತಿಕ್ರಿಯೆ ನೀಡಿದ್ದಾರೆ.