Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೂನಮ್ ರಾವತ್ ಅರ್ಧ ಶತಕ, ವೆಸ್ಟ್ ಇಂಡೀಸ್ ಸೋಲಿಸಿದ ಭಾರತ

Punam Raut, bowlers help India women beat WI in 2nd ODI

ಆ್ಯಂಟಿಗುವಾ, ನವೆಂಬರ್ 4: ಪೂನಮ್ ರಾವತ್ ಚತುರ ಅರ್ಧ ಶತಕದಾಟ ಮತ್ತು ಬೌಲರ್‌ಗಳ ಬೆಂಬಲದೊಂದಿಗೆ, ಆ್ಯಂಟಿಗುವಾದ ನಾರ್ತ್ ಸೌಂಡ್‌ನಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಭಾನುವಾರ (ನವೆಂಬರ್ 3) ನಡೆದ ಭಾರತದ ಮಹಿಳೆಯರು vs ವೆಸ್ಟ್ ಇಂಡೀಸ್ ಮಹಿಳೆಯರ 2ನೇ ಏಕದಿನ ಪಂದ್ಯದಲ್ಲಿ ಭಾರತ 53 ರನ್ ಗೆಲುವನ್ನಾಚರಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತದ ಮಹಿಳಾ ತಂಡ, ಪ್ರಿಯಾ ಪೂನಿಯಾ 5, ಪೂನಮ್ ರಾವತ್ 77, ಮಿಥಾಲಿ ರಾಜ್ 40, ಹರ್ಮನ್‌ಪ್ರೀತ್ ಕೌರ್ 46, ದೀಪ್ತಿ ಶರ್ಮಾ 5, ತಾನಿಯಾ ಭಾಟಿಯಾ 9 ರನ್‌ ಸೇರ್ಪಡೆಯೊಂದಿಗೆ 50 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 191 ರನ್ ಮಾಡಿತು.

ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ವನಿತೆಯರು, ನತಾಶಾ ಮೆಕ್‌ಲೀನ್ 15, ಶೆಮೈನ್ ಕ್ಯಾಂಪ್ಬೆಲ್ಲೆ 39, ಸ್ಟಫಾನಿ ಟೇಲರ್ 20, ಆಲಿಯಾ ಅಲ್ಲೆನೆ 16, ಅಫಿ ಫ್ಲೆಚರ್ 15, ಶಬಿಕಾ ಗಜ್ನಾಬಿ 7 ರನ್‌ನೊಂದಿಗೆ 47.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 138 ರನ್ ಬಾರಿಸಿ ಶರಣಾಯಿತು.

ಭಾರತದ ಇನ್ನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ನ ಆಲಿಯಾ ಅಲ್ಲೆನೆ 2, ಅಫಿ ಫ್ಲೆಚರ್ 2, ಶಬಿಕಾ ಗಜ್ನಾಬಿ 1, ಶೆನೆಟಾ ಗ್ರಿಮಂಡ್ 1 ವಿಕೆಟ್ ಪಡೆದರೆ, ವೆಸ್ಟ್ ಇಂಡೀಸ್ ಇನ್ನಿಂಗ್ಸ್‌ನಲ್ಲಿ ಭಾರತದ ಜೂಲನ್ ಗೋಸ್ವಾಮಿ 1, ಶಿಖಾ ಪಾಂಡೆ 1, ರಾಜೇಶ್ವರಿ ಗಾಯಕ್ವಾಡ್ 2, ಪೂನಮ್ ಯಾದವ್ 2, ದೀಪ್ತಿ ಶರ್ಮಾ 2 ವಿಕೆಟ್ ಪಡೆದು ಪಾರಮ್ಯ ಮೆರೆದರು.

Story first published: Monday, November 4, 2019, 11:08 [IST]
Other articles published on Nov 4, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+