ಐಪಿಎಲ್ 9ಗೆ ಎರಡು ಹೊಚ್ಚ ಹೊಸ ತಂಡಗಳು ಪ್ರಕಟ
ನವದೆಹಲಿ, ಡಿ.08: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹೊಸ ತಂಡಗಳ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಎರಡು ಹೊಚ್ಚ ಹೊಸ ತಂಡಗಳನ್ನು ಡಿಸೆಂಬರ್ 08 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಪುಣೆ ಹಾಗೂ ರಾಜ್ ಕೋಟ್ ಮುಂದಿನ ಎರಡು ವರ್ಷಗಳ ಕಾಲ ಐಪಿಎಲ್ ನಲ್ಲಿ ಆಡಲಿವೆ.
ಇಂಡಿಯನ್ ಪ್ರಿಮಿಯರ್ ಲೀಗ್ ನ 9ನೇ ಆವೃತ್ತಿಯಲ್ಲಿ ಆಡಲು ಎರಡು ತಂಡಗಳ ಅಗತ್ಯವಿತ್ತು. ಇದಕ್ಕಾಗಿ ಹರಾಜು ಪ್ರಕ್ರಿಯೆಯಲ್ಲಿ ಸದ್ಯಕ್ಕೆ ಸ್ಟಾರ್ ಇಂಡಿಯಾ ಹಾಗೂ ಚೆಟ್ಟಿನಾಡ್ ಸಿಮೆಂಟ್ ಸಂಸ್ಥೆಗಳು ಸೇರಿದಂತೆ ಅನೇಕ ಕಾರ್ಪೋರೇಟ್ಸ್ ಗಳು ಆಸಕ್ತಿ ತೋರಿದ್ದವು. [ಹೊಸ ತಂಡ ಆಯ್ಕೆ ರೇಸ್ ನಲ್ಲಿ ಯಾರಿದ್ದರು?]
ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್, ಐಪಿಎಲ್ ಚೇರ್‌ಮನ್ ರಾಜೀವ್ ಶುಕ್ಲಾ ಹಾಗೂ 2016 ಹಾಗೂ 2017ರ ಆವೃತ್ತಿಯ ಎರಡು ಹೊಸ ತಂಡಗಳಿಗೆ ಬಿಡ್ ಮಾಡಿರುವ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದ್ದರು. [ಐಪಿಎಲ್ ತೊರೆದ ಸುಂದರ್ ಗೆ ರಿಲಯನ್ಸ್ ನಲ್ಲಿ ಭರ್ಜರಿ ಹುದ್ದೆ]

ಸಭೆಯ ನಂತರ ಪುಣೆ ಹಾಗೂ ರಾಜ್ ಕೋಟ್ ತಂಡಗಳ ಹೆಸರನ್ನು ಪ್ರಕಟಿಸಲಾಗಿದೆ. ಈ ತಂಡಗಳು ನಿಷೇಧಕ್ಕೊಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಬದಲಿಗೆ ಟೂರ್ನಿಯಲ್ಲಿ ಆಡಲಿವೆ. 2018ರಲ್ಲಿ ಈ ಎರಡು ತಂಡಗಳು ಮತ್ತೊಮ್ಮೆ ಆಡುವ ಅವಕಾಶ ಪಡೆದುಕೊಳ್ಳಲಿವೆ. [ದೇಶದ ಜಿಡಿಪಿಗೆ 11.5 ಬಿಲಿಯನ್ ರು ನೀಡಿದ ಐಪಿಎಲ್]
ನ್ಯೂ ರೈಸಿಂಗ್ ಕನ್ಸೊರ್ಟಿಯಂ ಪುಣೆ ತಂಡದ ಮಾಲೀಕರಾಗಿದ್ದರೆ, ಇಂಟೆಕ್ಸ್ ಮೊಬೈಲ್ ಸಂಸ್ಥೆ ರಾಜ್ ಕೋಟ್ ತಂಡವನ್ನು ಹೊಂದಿದೆ. ರಿವರ್ಸ್ ಬಿಡ್ಡಿಂಗ್ ಮಾದರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ನ್ಯೂ ರೈಸಿಂಗ್ ಸಂಸ್ಥೆ ಮೈನಸ್ 16 ಕೋಟಿ ರು ಬಿಡ್ ಮಾಡಿದರೆ, ಇಂಟೆಕ್ಸ್ ಸಂಸ್ಥೆ ಮೈನಸ್ 10 ಕೋಟಿ ರು ಬಿಡ್ ಮಾಡಿ ತಂಡವನ್ನು ತನ್ನದಾಗಿಸಿಕೊಂಡವು. [ರಿವರ್ಸ್ ಬಿಡ್ಡಿಂಗ್ ಹೇಗೆ ನಡೆಯುತ್ತದೆ?]
ಐಪಿಎಲ್ ಪಂದ್ಯಕ್ಕೆ ಸ್ಟಾರ್ ಸ್ಫೋರ್ಟ್ಸ್ ಅಧಿಕೃತ ಪ್ರಸಾರ ವಾಹಿನಿಯಾಗಿದೆ. ಭಾರತದಲ್ಲಿ ಹಾಗೂ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಐಸಿಸಿ ಟೂರ್ನಿಗಳ ಪ್ರಸಾರದ ಹಕ್ಕು ಸ್ಟಾರ್ ನೆಟ್ವರ್ಕ್ ಪಾಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು.(ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications