Pro Kabaddi League: ಪುಣೇರಿ ಭರ್ಜರಿ ಜಯ, ಅಗ್ರ ಸ್ಥಾನ ಭದ್ರ
ಸೋಮವಾರ ನಡೆದ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ ಏಳನೇ ಪಂದ್ಯದಲ್ಲಿ ಯುಪಿ ಯೋಧಾಸ್ 34-31ರಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿದರೆ, ಎರಡನೇ ಪಂದ್ಯದಲ್ಲಿ ಪುಣೇರಿ ಪಲ್ಟನ್ 41-19 ಅಂಕಗಳಿಂದ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿತು.
ಎರಡನೇ ಆಟದಲ್ಲಿ ಪುಣೇರಿ ಪಲ್ಟನ್ ತಂಡ ಅಮೋಘ ಸಂಘಟಿತ ಆಟವನ್ನು ಪ್ರದರ್ಶಿಸಿತು. ದಾಳಿ ಹಾಗೂ ರೈಡಿಂಗ್‌ನಲ್ಲಿ ಭರ್ಜರಿ ಆಟ ಆಡಿದ ಮಾಜಿ ಚಾಂಪಿಯನ್ ಪುಣೇರಿ ತಂಡ, ಗುಜರಾತ್ ಟೈಟಾನ್ಸ್ ತಂಡಕ್ಕೆ ಚೇತರಿಸಿಕೊಳ್ಳಲು ಯಾವುದೇ ಹಂತದಲ್ಲಿ ಅವಕಾಶವನ್ನೇ ನೀಡಲಿಲ್ಲ. ಪರಿಣಾಮ ಗುಜರಾತ್ ಮೊದಲ ಗೆಲುವಿನ ನಗೆ ಬೀರುವ ಅವಕಾಶ ಕೈ ತಪ್ಪಿತು.

ಪುಣೇರಿ ತಂಡದ ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿತು. ಈ ವೇಳೆ ದಾಳಿ ಹಾಗೂ ರಕ್ಷಣಾ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡಿತು. ಈ ಅವಧಿಯಲ್ಲಿ ಪುಣೇರಿ 17-11 ಅಂಕಗಳಿಂದ ಮುನ್ನಡೆ ಸಾಧಿಸಿತು. ಎರಡನೇ ಅವಧಿಯಲ್ಲಿ ಪುಣೇರಿ ಎದುರಾಳಿ ತಂಡಕ್ಕೆ ಅಂಕಗಳಿಸುವ ಅವಕಾಶವನ್ನೇ ನೀಡಲಿಲ್ಲ. ಈ ವೇಳೆ ಪಲ್ಟನ್ ತಂಡದ ಡಿಫೆಂಡರ್‌ಗಳು ಭರ್ಜರಿ ಪ್ರದರ್ಶನ ನೀಡಿತು. ಪುಣೇರಿ 11 ಅಂಕಗಳನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿದರೆ, ದಾಳಿಯಲ್ಲಿ 9 ಅಂಕ ಸೇರಿಸಿತು. ಪುಣೇರಿ ತಂಡದ ಪರ ಅಭಿನೀಷ್ ಹಾಗೂ ಆದಿತ್ಯ ತಲಾ 6 ಅಂಕಗಳನ್ನು ಕಲೆ ಹಾಕಿದರು. ಪರಾಜಿತ ತಂಡದ ಪರ ರಾಕೇಶ್ 6 ಅಂಕ ಸೇರಿಸಿದರು.
ಗಗನ್ ಗೌಡ ಮಿಂಚು
ಇದಕ್ಕೂ ಮೊದಲು ನಡೆದ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ತಂಡದ ವಿರುದ್ಧ ಯುಪಿ ಯೋಧಾಸ್ ಜಯ ಸಾಧಿಸಿತು. ಈ ಮೂಲಕ ಲೀಗ್ ಆರಂಭದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಹಿರಿಮೆಗೆ ಪಾತ್ರವಾಯಿತು. ಆರಂಭದಲ್ಲಿ ಪಾಟ್ನಾ 19-13 ಅಂಕಗಳಿಂದ ಮುನ್ನಡೆ ಸಾಧಿಸಿತು. ಈ ವೇಳೆ ಉಭಯ ತಂಡಗಳು ದಾಳಿಯಲ್ಲಿ ಸ್ಥಿರ ಪ್ರದರ್ಶನ ನೀಡಿದವು. ಅಲ್ಲದೆ ಟ್ಯಾಕಲ್‌ನಲ್ಲಿ ಸಮ ಅಂಕಗಳನ್ನು ಕಲೆ ಹಾಕಿದವು. ಈ ಅವಧಿಯಲ್ಲಿ ಯುಪಿ ಒಂದು ಬಾರಿ ಆಲೌಟ್ ಆಯಿತು. ಎರಡನೇ ಅವಧಿಯ ಆಟದಲ್ಲಿ ಯುಪಿ ಯೋಧಾಸ್ ಭರ್ಜರಿಯಾಗಿ ಪುಟಿದೆದ್ದಿತು. ಈ ಅವಧಿಯಲ್ಲಿ ಯುಪಿ ದಾಳಿ ಹಾಗೂ ಡಿಫೆನ್ಸ್‌ನಲ್ಲಿ ಅಮೋಘ ಪ್ರದರ್ಶನ ನೀಡಿತು. ಎರಡನೇ ಅವಧಿಯ 20 ನಿಮಿಷದಲ್ಲಿ ಯುಪಿ 21 ಅಂಕ ಕಲೆ ಹಾಕಿದರೆ, ಪಾಟ್ನಾ 12 ಅಂಕ ಸೇರಿಸಿತು. ಎರಡನೇ ಅವಧಿಯಲ್ಲಿ ಪಾಟ್ನಾ ಸಹ ಒಂದು ಬಾರಿ ಆಲೌಟ್ ಆಯಿತು. ವಿಜೇತ ತಂಡದ ಪರ ಕರ್ನಾಟಕದ ಗಗನ್ ಗೌಡ್ (7 ಅಂಕ) ಅಬ್ಬರಿಸಿದರು.
ಮೊದಲ ಗೆಲುವಿನ ಹುಡುಕಾಟದಲ್ಲಿ ಬುಲ್ಸ್
ಮಂಗಳವಾರ ನಡೆಯಲಿರುಬ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ದಬಾಂಗ್ ದೆಹಲಿ ಕೆಸಿ ತಂಡದ ವಿರುದ್ಧ ಕಾದಾಟ ನಡೆಸಲಿದೆ. ದಬಾಂಗ್ ದೆಹಲಿ ಪ್ರಸಕ್ತ ಆವತ್ತಿಯಲ್ಲಿ ಮೊದಲ ಬಾರಿಗೆ ಅಂಗಳ ಪ್ರವೇಶಿಸಲಿದ್ದು, ಶುಭಾರಂಭದ ಕನಸಿನಲ್ಲಿದೆ. ಇನ್ನು ಬೆಂಗಳೂರು ಬುಲ್ಸ್, ಆಡಿದ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ವಿರುದ್ಧ ವಿರೋಚಿತ ಸೋಲು ಕಂಡ ಬಳಿಕ, ಎರಡನೇ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ ತಂಡವನ್ನು ಮಣಿಸಿ ಗೆಲುವಿನ ಆರಂಭ ಮಾಡುವ ಕನಸು ಕಾಣುತ್ತಿದೆ. ಮೊದಲ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಪಾಟ್ನಾ ಪೈರೇಟ್ಸ್ ತಂಡಗಳು ಸೆಣಸಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications