ಪ್ಲೇ ಆಫ್ ಲೆಕ್ಕಾಚಾರದಲ್ಲಿರುವ ಪಂಜಾಬ್ ಕಿಂಗ್ಸ್ ಬುಧವಾರ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಂಗಳ ಪ್ರವೇಶಿಸಲಿದೆ. ಕೆಕೆಆರ್ ವಿರುದ್ಧ ಪಂದ್ಯ ಮಳೆಯಿಂದಾಗ ರದ್ದಾದ ಬಳಿಕ ಪಂಜಾಬ್ ಈಗ ಒತ್ತಡಕ್ಕೆ ಸಿಲುಕಿದೆ. ಪ್ಲೇ ಆಫ್ ರೇಸ್‌ನಲ್ಲಿ ಜೀವಂತವಾಗಿರಲು ಪಂಜಾಬ್‌ಗೆ ಮುಂದಿನ ಎಲ್ಲ ಪಂದ್ಯಗಳು ಮಹತ್ವದಾಗಿವೆ. ಈಗಾಗಲೇ ಚೆನ್ನೈ ಮುಂದಿನ ಹಂತದ ಕನಸನ್ನು ಕೈ ಬಿಟ್ಟಿದೆ. ಪ್ರಸಕ್ತ ಐಪಿಎಲ್‌ನಲ್ಲಿ ಸಿಎಸ್‌ಕೆ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲವಾಗಿದ್ದು, ಸಾಲು ಸಾಲು ಸೋಲುಗಳನ್ನು ತವರಿನಲ್ಲಿ ಕಾಣುತ್ತಿದೆ.
ಎರಡೂ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆದರೆ ಪಂಜಾಬ್ ತಂಡದ ಯುವ ಆಟಗಾರರ ಭರ್ಜರಿ ಫಾರ್ಮ್‌ನಲ್ಲಿದ್ದು ಭರವಸೆ ಮೂಡಿಸಿದೆ. ಸಾಮಾನ್ಯವಾಗಿ ಚೆನ್ನೈನ ಮೈದಾನ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡಲಿದೆ. ಈ ಮೈದಾನದಲ್ಲಿ ಚೆಂಡು ನಿಧಾನವಾಗಿ ಬ್ಯಾಟ್ ಬರಲಿದೆ. ಹೀಗಾಗಿ ಈ ಪಿಚ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಆಗುವುದಿಲ್ಲ. ಚೆಪಾಕ್ ಇಲ್ಲಿಯವರೆಗೆ ಒಟ್ಟು 90 ಐಪಿಎಲ್ ಪಂದ್ಯ ನಡೆದಿದ್ದು, 51 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ. ಚೆಪಾಕ್‌ನಲ್ಲಿ ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ಆಡಿದ 9 ಪಂದ್ಯಗಳಲ್ಲಿ 2 ಜಯ, 7 ಸೋಲು ಕಂಡಿದ್ದು 4 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನು ಪಂಜಾಬ್ ತಂಡ ಆಡಿದ 9 ಪಂದ್ಯಗಳಲ್ಲಿ 5 ಜಯ ಕಂಡಿದ್ದು, 11 ಅಂಕ ಕಲೆ ಹಾಕಿದ್ದು, 5ನೇ ಸ್ಥಾನದಲ್ಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಟಗಾರರ ಪ್ರದರ್ಶನವೇ ದೊಡ್ಡ ತಲೆ ನೋವಾಗಿದೆ. ಈ ಬಾರಿ ಸಿಎಸ್‌ಕೆ ತಂಡದ ಆಟಗಾರರ ಪ್ರದರ್ಶನ ನಿರಾಶಾದಾಯಕವಾಗಿದೆ. ಇನ್ನು ಬೌಲರ್‌ಗಳು ಸಹ ನಿಷ್ಪರಿಣಾಮಕಾರಿ ಆಗಿದೆ. ಚೆನ್ನೈ ತಂಡದ ಸ್ಟಾರ್ ಆಟಗಾರರಾದ ಶಿವಂ ದುಬೆ, ವಿಜಯ್ ಶಂಕರ್, ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಬೇಕಿದೆ. ಅಂದಾಗ ಮಾತ್ರ ತಂಡ ಮೂರನೇ ಗೆಲುವಿನ ಕನಸು ನನಸಾಗತ್ತದೆ.
ಸಿಎಸ್‌ಕೆ ತಂಡದ ಪರ ಸ್ಪಿನ್ ಬೌಲರ್ ನೂರ್ ಅಹ್ಮದ್ ಹಾಗೂ ಖಲೀಲ್ ಅಹ್ಮದ್ ಉಪಯುಕ್ತ ಕಾಣಿಕೆ ನೀಡುತ್ತಿದ್ದಾರೆ. ಆದರೆ ಖಲೀಲ್ ಅಹ್ಮದ್ ರನ್ ವೇಗಕ್ಕೆ ಕಡಿವಾಣ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಮತೀಶ್ ಪತಿರಾಣ್ ಬಿಗುವಿನ ದಾಳಿ ನಡೆಸಿ ಪಂಜಾಬ್ ತಂಡವನ್ನು ಕಾಡಬೇಕಿದೆ. ಇನ್ನು ರವೀಂದ್ರ ಜಡೇಜಾ ಹಾಗೂ ಅಶ್ವಿನ್ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಾಡಬೇಕಿದೆ.

ಪಂಜಾಬ್ ತಂಡದ ಪರ ಯುವ ಆಟಗಾರರು ಅಮೋಘ ಫಾರ್ಮ್‌ನಲ್ಲಿದ್ದಾರೆ. ಪ್ರಭರ್‌ಮ್ರನ್ ಸಿಂಗ್, ಪ್ರಿಯಾಂಶ್ ಆರ್ಯಾ ಆರಂಭಿಕರಾಗಿ ಮಿಂಚು ಹರಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ತಂಡಕ್ಕೆ ಆಧಾರವಾಗುವ ಆಟಗಾರ. ಇನ್ನು ನೇಹಾಲ್ ವಧೇರಾ ಸಹ ರನ್‌ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅರ್ಹಷದೀಪ್ ಸಿಂಗ್, ಯುಜುವೇಂದ್ರ ಚಹಾಲ್ ಹಾಗೂ ಮಾರ್ಕೊ ಜಾನ್ಸನ್ ವಿಕೆಟ್ ಬೇಟೆ ನಡೆಸಿ ತಂಡದ ಜಯದಲ್ಲಿ ಮಿಂಚಬೇಕಿದೆ. ಅಂದಾಗ 6ನೇ ಗೆಲುವಿನ ಆಸೆ ಈಡೇರಿಸುತ್ತದೆ.