
ಆಸಿಸ್ ಸೂಪರ್ ಸ್ಟಾರ್ ಗ್ಲೆನ್ ಮ್ಯಾಕ್ಸ್‌ವೆಲ್
ಟಿ20 ಮಾದರಿಯ ಸ್ಪೋಟಕ ಆಟಗಾರರ ಪೈಕಿ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಬ್ಬರು. ಬ್ಯಾಟಿಂಗ್‌ನ ಜೊತೆಗೆ ಬೌಲಿಂಗ್‌ನಲ್ಲಿಯೂ ಮ್ಯಾಚ್ ಗೆಲ್ಲಿಸಿಕೊಡಬಲ್ಲ ಸಾಮರ್ಥ್ಯವಿರುವ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್. ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದರು. ಒಟ್ಟಾರೆ ಟಿ20 ಮಾದರಿಯಲ್ಲಿ 8451 ರನ್‌ಗಳಿಸಿದ್ದು 28ರ ಸರಾಸರಿ ಹಾಗೂ 151ರಷ್ಟು ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಹೀಗಾಗಿ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ ಅತ್ಯಂತ ಬೇಡಿಕೆಯ ಆಟಗಾರನೂ ಹೌದು.
ಆದರೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಪ್ರದರ್ಶನ ಕಳಪೆ. 2014ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು 65 ಪಂದ್ಯಗಳನ್ನಾಡಿದ್ದಾರೆ. ಆದರೆ 104 ಹಾಗೂ 2017ನೇ ಆವೃತ್ತಿಯಲ್ಲಿ ಮಾತ್ರವೇ ಮ್ಯಾಕ್ಸ್‌ವೆಲ್ ಪಂಜಾಬ್ ಪರ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಉಳಿದಂತೆ 2015, 2016 ಹಾಗೂ 2020ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು. 2020ರಲ್ಲಿ ನೀಡಿದ ಭಯಾನಕ ಕಳಪೆ ಪ್ರದರ್ಶನದ ಬಳಿಕ ತಂಡದಿಂದ ಹೊರಬಿದ್ದರು.

ಆಸಿಸ್ ಮಾಜಿ ನಾಯಕ ಆರೋನ್ ಫಿಂಚ್
ಅಂತಾರಾಷ್ಟ್ರೀಯ ಟಿ20 ಮಾದರಿಯ ಉತ್ತಮ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರೋನ್ ಫಿಂಚ್ ಕೂಡ ಒಬ್ಬರು. ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ 103 ಇನ್ನಿಂಗ್ಸ್‌ಗಳಲ್ಲಿ ಫಿಂಚ್ 3120 ರನ್‌ಗಳಿಸಿದ್ದು 34ರಷ್ಟು ಸರಾಸರಿ ಹಾಗೂ 143 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಫಿಂಚ್ ನಾಯಕತ್ವದಲ್ಲಿಯೇ ಆಸ್ಟ್ರೇಲಿಯಾ ಏಕೈಕ ಟಿ20 ವಿಶ್ವಕಪ್ ಗೆದ್ದಿದೆ. ಆದರೆ ಐಪಿಎಲ್‌ನಲ್ಲಿ ಫಿಂಚ್ ಅವರ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಬಂದಿಲ್ಲ ಎಂಬುದು ಗಮನಾರ್ಹ. ಪಂಜಾಬ್ ಕಿಂಗ್ಸ್ ತಂಡದಲ್ಲಿ 2018ರ ಆವೃತ್ತಿಯಲ್ಲಿ ಆಡಿರುವ ಫಿಂಚ್ ಕೇವಲ 17ರ ಸರಾಸರಿಯಲ್ಲಿ 134 ರನ್ ಮಾತ್ರವೇ ಗಳಿಸಿದ್ದರು. ಐಪಿಎಲ್‌ನಲ;್ಲಿ ಆರ್‌ಸಿಬಿ ಪರವಾಗಿಯೂ ಆಡಿರುವ ಫಿಂಚ್ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾದ ಬಳಿಕ ತಂಡದಿಂದ ಹೊರಬಿದ್ದರು.

ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಕಂಡ ಅತ್ಯಂತ ಶ್ರೇಷ್ಠ ಮಧ್ಯಮ ಕ್ರಮಾಂಕದ ಆಟಗಾರ ಯುವರಾಜ್ ಸಿಂಗ್. ಮೊದಲ ಆವೃತ್ತಿಯ ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟಕ್ಕೇರಲು ಯುವರಾಜ್ ಸಿಂಗ್ ಮಾತ್ರ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್‌ನಲ್ಲಿ ಯುವರಾಜ್ ಸಿಂಗ್ ಒಟ್ಟು ಆರು ಫ್ರಾಂಚೈಸಿಗಳ ಪರವಾಗಿ ಆಡಿದ್ದಾರೆ.
ಇನ್ನು ಪಂಜಾಬ್ ಕಿಂಗ್ಸ್ ತಂಡದ ಪರವಾಗಿ 51 ಪಂದ್ಯಗಳನ್ನಾಡಿರುವ ಯುವರಾಜ್ ಸಿಂಗ್ 969 ರನ್‌ಗಳನ್ನು ಬಾರಿಸಿದ್ದಾರೆ. ಅವರ ಸರಾಸರಿ 22 ಮತ್ತು ಸ್ಟ್ರೈಕ್‌ರೇಟ್ 128. ಈ ಅಂಕಿಅಂಶ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಅವರ ಸಾಧನೆಯ ಹತ್ತಿರಕ್ಕೂ ಇಲ್ಲ ಎಂಬುದು ನಂಬಲೇ ಬೇಕು. 2008ರಲ್ಲಿ ನಡೆದ ಚೊಚ್ಚಲ ಐಪಿಎಲ್‌ನಲ್ಲಿ ಮಾತ್ರವೇ 23ರ ಸರಾಸರಿಯಲ್ಲಿ 163ರ ಸ್ಟ್ರೈಕ್‌ರೇಟ್‌ನೊಂದಿಗೆ 299 ರನ್‌ಗಳಿಸಿದ್ದರು.

ಆಸ್ಟ್ರೇಲಿಯಾದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್
ಈ ಪಟ್ಟಿಯಲ್ಲಿರುವ ಆಸ್ಟ್ರೇಲಿಯಾದ ಮೂರನೇ ಆಟಗಾರ ಮಾರ್ಜಸ್ ಸ್ಟೋಯ್ನಿಸ್. ವಿಶ್ವಕ್ರಿಕೆಟ್‌ನಲ್ಲಿ ಮಿಂಚಿರುವ ಸ್ಟೋಯ್ನಿಸ್ ಐಪಿಎಲ್‌ನಲ್ಲಿಯೂ ಕೆಲ ಅದ್ಭುತ ಇನ್ನಿಂಗ್ಸ್‌ಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಆದರೆ ಪಂಜಾಬ್ ತಂಡದಲ್ಲಿ ಸ್ಟೋಯ್ನಿಸ್ ಸಾಧನೆ ಗಮನಾರ್ಹವಲ್ಲ. 2016ರಲ್ಲಿ ಪಂಜಾಬ್ ಕಿಂಗ್ಸ್ ತಂಡದ ಮೂಲಕ ಈ ಆಟಗಾರ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. 3 ಆವೃತ್ತಿಗಳಲ್ಲಿ ಪಿಬಿಕೆಎಸ್ ತಂಡವನ್ನು ಪ್ರತಿನಿಧಿಸಿರುವ ಸ್ಟೋಯ್ನಿಸ್ 262 ರನ್‌ಗಳನ್ನು ಮಾತ್ರವೇ ಗಳಿಸಿದ್ದು ಅವರ ಸರಾಸರಿ 24 ಹಾಗೂ ಸ್ಟ್ರೈಕ್‌ರೇಟ್ 126. ಬೌಲಿಂಗ್‌ನಲ್ಲಿ 13 ವಿಕೆಟ್ ಪಡೆದಿರುವ ಇವರು 9.53ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡಕ್ಕೆ ಆಘಾತ: ಬುಮ್ರಾ ಐಪಿಎಲ್‌ನಲ್ಲಿ ಆಡೋದೆ ಅನುಮಾನ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೂ ಅಲಭ್ಯ?

ವಿಂಡೀಸ್ ಆಟಗಾರ ನಿಕೋಲಸ್ ಪೂರನ್
ವೆಸ್ಟ್ ಇಂಡೀಸ್ ತಂಡ ಆಟಗಾರ ನಿಕೋಲಸ್ ಪೂರನ್ ಅತ್ಯಂತ ವಿಧ್ವಂಸಕ ಆಟಗಾರ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಪೂರನ್ ಪಂಜಾಬ್ ಕಿಂಗ್ಸ್ ತಂಡದ ಪರವಾಗಿ ಒಟ್ಟು 33 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 22ರ ಸರಾಸರಿಯಲ್ಲಿ 155ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಈ ಅಂಕಿಅಂಶ ಅಷ್ಟೇನೂ ಕೆಟ್ಟದಾಗಿಲ್ಲದಿದ್ದರೂ ಪೂರನ್ ಪಂಜಾಬ್ ಪರವಾಗಿ ನಿಡಿದ್ದು ಕೇವಲ ಒಂದು ಉತ್ತಮ ಆವೃತ್ತಿ ಮಾತ್ರ. ಇನ್ನು 2021ರಲ್ಲಿ ಪೂರನ್ ಅತ್ಯಂತ ಕಳಪೆ ಪ್ರದರ್ಶನ ನೀಡಿ ಭಾರೀ ಟೀಕೆಗೆ ಗುರಿಯಾಗಿದ್ದರು. ಈ ಆವೃತ್ತಿಯಲ್ಲಿ ಪೂರನ್ ಬರೊಬ್ಬರಿ ಬಾರಿ 4 ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಟೀಕೆಗೆ ಗುರಿಯಾಗಿದ್ದರು. ಆ ಆವೃತ್ತಿಯಲ್ಲಿ ಪೂರನ್ ಆಡಿದ 11 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 85 ರನ್ ಮಾತ್ರ.


Click it and Unblock the Notifications












