
ಮೊಹಾಲಿ, ಏಪ್ರಿಲ್ 13: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 13) ನಡೆದ ಐಪಿಎಲ್ 28ನೇ ಪಂದ್ಯದಲ್ಲಿ ಕಿಂಗ್ಸ್ XI ಪಂಜಾಬ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ಗೆಲುವನ್ನಾಚರಿಸಿದೆ. ಟೂರ್ನಿಯಲ್ಲಿ ಕೊಹ್ಲಿ ಬಳಗಕ್ಕೆ ಲಭಿಸಿದ ಮೊದಲ ಗೆಲುವಿನ ಸಂಭ್ರಮವಿದು.
ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಮೊದಲು ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಕ್ರಿಸ್ ಗೇಲ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 174 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ಸ್ ಅರ್ಧಶತಕದ ಬಲದಿಂದ 19.2 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 174 ರನ್ ಗೆರೆ ದಾಟಿತು.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್ ಇಳಿಸಲ್ಪಟ್ಟ ಪಂಜಾಬ್ ಲೋಕೇಶ್ ರಾಹುಲ್ 18, ಕ್ರಿಸ್ ಗೇಲ್ ಅಜೇಯ 99 (64), ಮಯಾಂಕ್ ಅಗರ್ವಾಲ್ 15, ಸರ್ಫರಾಜ್ ಖಾನ್ 15 ರನ್ ಬೆಂಬಲದಲ್ಲಿ 20 ಓವರ್‌ಗೆ 4 ವಿಕೆಟ್ ಕಳೆದು 173 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಪಾರ್ಥಿವ್ ಪಟೇಲ್ 19, ಕೊಹ್ಲಿ 67 (53), ಎಬಿಡಿ ಅಜೇಯ 59 (38), ಮಾರ್ಕಸ್ ಸ್ಟೋಯ್ನಿಸ್ ಅಜೇಯ 28 (16) ರನ್ ಸೇರಿಸಿದ್ದು ಆರ್‌ಸಿಬಿ ಗೆಲುವಿನ ದಾರಿ ಸುಲಭವಾಗಿಸಿತು. ಮಿಸ್ಟರ್ 360 ಖ್ಯಾತಿಯ ಎಬಿಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ನಿಕೋಲಸ್ ಪೂರನ್ (ವಿಕೆ), ಮನ್ದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ಸಿ), ಆಂಡ್ರ್ಯೂ ಟೈ, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಪಾರ್ಥಿವ್ ಪಟೇಲ್ (ವಿ), ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಮಾರ್ಕಸ್ ಸ್ಟೊಯಿನಿಸ್, ಮೊಯೆನ್ ಅಲಿ, ಅಕ್ಷದೀಪ್ ನಾಥ್, ಪವನ್ ನೇಗಿ, ಉಮೇಶ್ ಯಾದವ್, ಯುಜ್ವೆಂದ್ರ ಚಹಾಲ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್.