Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2019: ಕಿಂಗ್ಸ್ ಇಲೆವನ್ 7 ವಿಕೆಟ್‌ನಿಂದ ಕಟ್ಟಿಹಾಕಿದ ನೈಟ್ ರೈಡರ್ಸ್

Punjab vs Kolkata, 52nd Match - Live Cricket Score

ಮೊಹಾಲಿ, ಮೇ 3: ಶುಕ್ರವಾರ (ಮೇ 3) ನಡೆದ ಐಪಿಎಲ್ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 7 ವಿಕೆಟ್ ಸುಲಭ ಗೆಲುವನ್ನಾಚರಿಸಿದೆ. ಶುಭ್‌ಮಾನ್ ಗಿಲ್ ಮತ್ತು ಕ್ರಿಸ್‌ಲಿನ್ ಆಕರ್ಷಕ ಆಟದೊಂದಿಗೆ ಕೆಕೆಆರ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಕೊಂಡಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ಆರಂಭಿಕ ಆಟಗಾರರಾದ ಕ್ರಿಸ್‌ಗೇಲ್ (14), ಕೆಎಲ್ ರಾಹುಲ್ (2) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತು. ಆದರೆ ತಂಡಕ್ಕೆ ಬಲವಾಗಿ ನಿಂತ ಮಯಾಂಕ್ ಅಗರ್ವಾಲ್ 36, ನಿಕೋಲಸ್ ಪೂರನ್ 48, ಮನ್‌ದೀಪ್ ಸಿಂಗ್ 25, ಸ್ಯಾಮ್ ಕರನ್ ಅಜೇಯ 55 ರನ್ (24 ಎಸೆತ) ಸೇರಿಸಿದರು.

ಪಂದ್ಯದ Live Score ಕೆಳಗಿದೆ

1
45928

ಕಿಂಗ್ಸ್‌ ಇಲೆವೆನ್ ಪಂಜಾಬ್ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 183 ರನ್ ಗಳಿಸಿತು. ಪಂಜಾಬ್ ಇನ್ನಿಂಗ್ಸ್‌ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್‌ನ ಸಂದೀಪ್ ವಾರಿಯರ್ 2, ಹ್ಯಾರಿ ಗರ್ನಿ, ಆ್ಯಂಡ್ರೆ ರಸೆಲ್, ನಿತೀಶ್ ರಾಣಾ ತಲಾ 1 ವಿಕೆಟ್‌ ಪಡೆದರು.

ಗುರಿ ಬೆನ್ನತ್ತಿದ ಕೋಲ್ಕತ್ತಾಕ್ಕೆ ಆರಂಭಿಕ ಆಟಗಾರರಾದ ಗಿಲ್ 65 (49 ಎಸೆತ), ಲಿನ್ 46, ರಾಬಿನ್ ಉತ್ತಪ್ಪ 22, ಆ್ಯಂಡ್ರೆ ರಸೆಲ್ 24, ದಿನೇಶ್ ಕಾರ್ತಿಕ್ 21 ರನ್ ಬಾರಿಸಿದ್ದರಿಂದ ಕೆಕೆಆರ್ 18 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 185 ರನ್ ಗಳಿಸಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಶುಭ್‌ಮಾನ್‌ಗಿಲ್ ಪಡೆದುಕೊಂಡರು.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಸುನೀಲ್ ನರೇನ್, ಕ್ರಿಸ್ ಲಿನ್, ಶುಭ್‌ಮಾನ್ ಗಿಲ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ವಿಕೆ/ಸಿ), ಆಂಡ್ರೆ ರಸೆಲ್, ರಿಂಕು ಸಿಂಗ್, ಪಿಯೂಶ್ ಚಾವ್ಲಾ, ಸಂದೀಪ್ ವಾರಿಯರ್, ಹ್ಯಾರಿ ಗರ್ನಿ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ರವಿಚಂದ್ರನ್ ಅಶ್ವಿನ್ (ಸಿ), ಸ್ಯಾಮ್ ಕರನ್, ಸಿಮ್ರಾನ್ ಸಿಂಗ್ (ವಿಕೆ), ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆರ್ಶ್‌ದೀಪ್ ಸಿಂಗ್, ಆಂಡ್ರ್ಯೂ ಟೈ.

Story first published: Friday, May 3, 2019, 23:47 [IST]
Other articles published on May 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+