For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕೆಎಲ್ ರಾಹುಲ್ ರನ್ ಬಲ, ಇಂಡಿಯನ್ಸ್ ವಿರುದ್ಧ ಪಂಜಾಬ್‌ಗೆ ಜಯ

Punjab vs Mumbai, 9th Match - Live Cricket Score

ಮೊಹಾಲಿ, ಮಾರ್ಚ್ 30: ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಐಎಸ್ ಬಿಂದ್ರ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 9ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ XI ಪಂಜಾಬ್ 8 ವಿಕೆಟ್ ಭರ್ಜರಿ ಗೆಲುವನ್ನಾಚರಿಸಿದೆ. ಕೆಎಲ್ ರಾಹುಲ್, ಕ್ರಿಸ್‌ಗೇಲ್ ಮತ್ತು ಮಯಾಂಕ್ ಅಗರ್ವಾಲ್ ಉತ್ತಮ ಬ್ಯಾಟಿಂಗ್ ಬೆಂಬಲದೊಂದಿಗೆ ಪಂಜಾಬ್ ಐಪಿಎಲ್ 2ನೇ ಗೆಲುವು ದಾಖಲಿಸಿತು.

ಸ್ಕೋರ್‌ಕಾರ್ಡ್‌ಗೆ ಕಳಗಿನ ಲಿಂಕ್ ಕ್ಲಿಕ್ ಮಾಡಿ

1
45765

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ 32, ಸೂರ್ಯಕುಮಾರ್ ಯಾದವ್ 11, ಕ್ವಿಂಟನ್ ಡಿ ಕಾಕ್ 60, ಯುವರಾಜ್ 18, ಹಾರ್ದಿಕ್ ಪಾಂಡ್ಯ 31 ರನ್ ನೆರವಿನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 176 ರನ್ ಪೇರಿಸಿತು.

ಮುಂಬೈ ನೀಡಿದ 177 ರನ್ ಗುರಿ ಬೆನ್ನಟ್ಟಿದ ಪಂಜಾಬ್, ಆರಂಭಿಕ ಆಟಗಾರ, ಕನ್ನಡಿಗ ಕೆಎಲ್ ರಾಹುಲ್ ಅಜೇಯ 71 (57 ಎಸೆತ), ಕ್ರಿಸ್‌ಗೇಲ್‌ 40, ಮಯಾಂಕ್ ಅಗರ್ವಾಲ್ 43, ಡೇವಿಡ್ ಮಿಲ್ಲರ್ ಅಜೇಯ 15 ರನ್‌ನೊಂದಿಗೆ 18.4 ಓವರ್‌ನಲ್ಲಿ 2 ವಿಕೆಟ್ ನಷ್ಟದೊಂದಿಗೆ ಭರ್ತಿ 177 ರನ್ ಬಾರಿಸಿತು. ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠರೆನಿಸಿದರು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಲೋಕೇಶ್ ರಾಹುಲ್ (ವಿಕೆ), ಕ್ರಿಸ್ ಗೇಲ್, ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ಡೇವಿಡ್ ಮಿಲ್ಲರ್, ಮನ್ದೀಪ್ ಸಿಂಗ್, ಹಾರ್ದಸ್ ವಿಲ್ಜೊಯೆನ್, ರವಿಚಂದ್ರನ್ ಅಶ್ವಿನ್ (ಸಿ), ಮುರುಗನ್ ಅಶ್ವಿನ್, ಮೊಹಮ್ಮದ್ ಶಮಿ, ಆಂಡ್ರ್ಯೂ ಟೈ.

ಮುಂಬೈ ಇಂಡಿಯನ್ಸ್ ತಂಡ: ಕ್ವಿಂಟನ್ ಡಿ ಕಾಕ್ (ವಿಕೆ), ರೋಹಿತ್ ಶರ್ಮಾ (ಸಿ), ಸೂರ್ಯಕುಮಾರ್ ಯಾದವ್, ಯುವರಾಜ್ ಸಿಂಗ್, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚೆಲ್ ಮ್ಯಾಕ್ಕ್ಲೆನಾಘನ್, ಮಯಾಂಕ್ ಮಾರ್ಕೆಂಡೆ, ಜಸ್‌ಪ್ರೀತ್ ಬೂಮ್ರಾ, ಲಸಿತ್ ಮಾಲಿಂಗ.

Story first published: Sunday, March 31, 2019, 0:50 [IST]
Other articles published on Mar 31, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+