China Open 2023: ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧುಗೆ ನಿರಾಸೆ
ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಅಭಿಯಾನ ಅಂತ್ಯವಾಗಿದೆ. ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು, ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ನಿರಾಸೆ ಅನುಭವಿಸಿದರು. ಈ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಗೆಲ್ಲುವ ಆಸೆ ಕಮರಿದೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಸಿಂಧು 14-21, 13-21 ರಿಂದ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ವಿರುದ್ಧ ಆಘಾತ ಅನುಭವಿಸಿದರು. ಕೇವಲ 38 ನಿಮಿಷ ನಡೆದ ಹೋರಾಟದಲ್ಲಿ ಸಿಂಧು ಆಘಾತ ಅನುಭವಿಸಿದರು. ಈ ಮೂಲಕ ದಕ್ಷಿಣ ಕೊರಿಯಾದ ಆನ್ ಸೆ ಯಂಗ್, ಸಿಂಧು ವಿರುದ್ಧ ಒಂದೇ ಒಂದು ಪಂದ್ಯವನ್ನು ಸೋಲದ ದಾಖಲೆಯನ್ನು ಮುಂದುರೆಸಿದ್ದಾರೆ.

ಪಂದ್ಯದ ಆರಂಭದಿಂದಲೂ ಸಿಂಧು ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಇವರು ಆರಂಭದಲ್ಲಿ 1-6 ಅಂಕಗಳಿಂದ ಹಿಂದಿದ್ದರು. ಅಲ್ಲದೆ ಮೊದಲಾವಧಿಯಲ್ಲಿ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ 11-5 ಅಂಕಗಳಿಂದ ಮುನ್ನಡೆ ಸಾಧಿಸಿದರು. ಈ ಗೇಮ್‌ನ ಎರಡನೇ ಅವಧಿಯಲ್ಲಿ ಸಿಂಧು ಪುಟಿದೇಳುವ ಸೂಚನೆಯನ್ನು ನೀಡಿದರು. ಆದರೆ ಫಲಿಸಲಿಲ್ಲ. ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ಆಕರ್ಷಕ ಗ್ಯಾಪ್ ಶಾಟ್‌ಗಳನ್ನು ಪ್ರಯೋಗಿಸಿ ಅಂಕಗಳನ್ನು ಕಲೆ ಹಾಕುತ್ತಾ ಸಾಗಿದರು. ಸಿಂಧು ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿ ಮೊದಲ ಗೇಮ್ ಸೋತರು.
ಕೊನೆಯ ಗೇಮ್‌ನಲ್ಲೂ ನಿರಾಸೆ
ಎರಡನೇ ಗೇಮ್‌ನಲ್ಲೂ ಸಿಂಧು ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಈ ಅವಧಿಯ ಮೊದಲಾವಧಿಯಲ್ಲಿ ಸಿಂಧು ಜಿದ್ದಾಜಿದ್ದಿನ ಪ್ರದರ್ಶನ ನೀಡಿದರು. ಈ ಅವಧಿಯಲ್ಲಿ ಆರಂಭದಲ್ಲಿ 3-3 ರಿಂದ ಮುನ್ನಡೆ ಸಾಧಿಸಿದ್ದ ಸಿಂಧು, 5-6 ರಿಂದ ಹಿನ್ನಡೆ ಅನುಭವಿಸಿದರು. ಈ ಬಳಿಕ ದಕ್ಷಿಣ ಕೊರಿಯಾದ ಆನ್ ಸೆ ಯಂಗ್ ಆಟಗಾರ್ತಿ ಸತತ ಅಂಕಗಳನ್ನು ಕಲೆ ಹಾಕಿ ಸುಲಭವಾಗಿ ಎರಡನೇ ಗೇಮ್‌ನ ಮೊದಲಾರ್ಧವನ್ನು ತಮ್ಮದಾಗಿಸಿಕೊಂಡರು. ಈ ವೇಳೆ 7-11 ಅಂಕಗಳಿಂದ ಸಿಂಧು ಹಿಂದಿದ್ದರು. ಇದಾದ ಬಳಿಕ ಯಾವ ಹಂತದಲ್ಲೂ ಸಿಂಧು ಮೇಲುಗೈ ಸಾಧಿಸಲು ಸಾಧ್ಯವೇ ಆಗಲಿಲ್ಲ. ಪರಿಣಾಮ ಸೆಮಿಫೈನಲ್ ಪ್ರವೇಶಿಸುವ ಸಿಂಧು ಆಸೆ ಕಮರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications