Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧದ ಟಿ20ಗಾಗಿ ನವದೆಹಲಿಗೆ ಬಂದಿಳಿದ ಡಿ ಕಾಕ್ ಬಳಗ

Quinton de Kock and Co touchdown in New Delhi ahead of T20I series

ನವದೆಹಲಿ, ಸೆಪ್ಟೆಂಬರ್ 7: ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗಾಗಿ ಕ್ವಿಂಟನ್ ಡಿ ಕಾಕ್ ಮುಂದಾಳತ್ವದ ದಕ್ಷಿಣ ಆಫ್ರಿಕಾ ತಂಡ ಶನಿವಾರ (ಸೆಪ್ಟೆಂಬರ್ 7) ನವದೆಹಲಿಗೆ ಬಂದಿಳಿದಿದೆ. ಸೆಪ್ಟೆಂಬರ್ 15ರಿಂದ ಟಿ20 ಸರಣಿ ಮೂಲಕ ದಕ್ಷಿಣ ಆಫ್ರಿಕಾದ ಭಾರತ ಪ್ರವಾಸ ಪಂದ್ಯಗಳು ಆರಂಭಗೊಳ್ಳಲಿವೆ.

ಟಿ20 ಸರಣಿಯ ಮೊದಲ ಪಂದ್ಯ (ಸೆಪ್ಟೆಂಬರ್ 15) ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ, ದ್ವಿತೀಯ ಪಂದ್ಯ ಸೆಪ್ಟೆಂಬರ್ 18ರಂದು ಪಂಜಾಬ್‌ನ ಮೊಹಾಲಿಯಲ್ಲಿ, ತೃತೀಯ ಪಂದ್ಯ ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ ತಲುಪಿರುವ ದಕ್ಷಿಣ ಆಫ್ರಿಕಾ ತಂಡ ಮೊದಲ ಟಿ20 ಪಂದ್ಯಕ್ಕೂ ಮುನ್ನ ಸೋಮವಾರ (ಸೆಪ್ಟೆಂಬರ್ 9) ಧರ್ಮಶಾಲಾಕ್ಕೆ ತಲುಪಲಿದೆ. ಟಿ20 ಸರಣಿ ಬಳಿಕ ಅಕ್ಟೋಬರ್ 2-6ರಂದು ವಿಶಾಖಪಟ್ನಂನಲ್ಲಿ ಮೊದಲ ಟೆಸ್ಟ್, ಅಕ್ಟೋಬರ್ 10-14ರಂದು ಪೂಣೆಯಲ್ಲಿ ದ್ವಿತೀಯ ಟೆಸ್ಟ್, 19-23ರಂದು ರಾಂಚಿಯಲ್ಲಿ ತೃತೀಯ ಟೆಸ್ಟ್ ಪಂದ್ಯವನ್ನಾಡಲಿದೆ.

ದಕ್ಷಿಣ ಆಫ್ರಿಕಾ ಟಿ20 ತಂಡ: ಕ್ವಿಂಟನ್ ಡಿ ಕಾಕ್ (ನಾಯಕ), ರಾಸ್ಸಿ ವಾನ್ ಡೆರ್ ಡುಸೆನ್ (ಉಪ ನಾಯಕ), ಟೆಂಬಾ ಬಾವುಮಾ, ಜೂನಿಯರ್ ದಲಾ, ಜಾರ್ನ್ ಫೋರ್ಚುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್, ಅನ್ರಿಕ್ ನಾರ್ಟ್ಜೆ, ಆಂಡಿಲೆ ಫೆಹ್ಲಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಕಾಗಿಸೊ ರಬಾಡಾ, ತಬ್ರೈಜ್ ಶಂಶಿ, ಜಾನ್ ಜಾನ್ ಸ್ಮಟ್ಸ್.

Story first published: Saturday, September 7, 2019, 20:40 [IST]
Other articles published on Sep 7, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+