Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ನಾಯಕನಾಗಿ ಕ್ವಿಂಟನ್ ಡಿ ಕಾಕ್ ಆಯ್ಕೆ

Quinton de Kock appointed South Africas Test captain for 2020-21

ಕೇಪ್‌ ಆಫ್ ಟೌನ್: 2020-21ರ ಸೀಸನ್‌ಗೆ ದಕ್ಷಿಣ ಆಫ್ರಿಕಾ ಟೆಸ್ಟ್ ತಂಡಕ್ಕೆ ನೂತನ ನಾಯಕನಾಗಿ ಕ್ವಿಂಟನ್ ಡಿ ಕಾಕ್ ಆಯ್ಕೆಯಾಗಿದ್ದಾರೆ. ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಶುಕ್ರವಾರ (ಡಿಸೆಂಬರ್ 11) ಈ ವಿಚಾರ ತಿಳಿಸಿದೆ. ದಕ್ಷಿಣ ಆಫ್ರಿಕಾ ನಿಯಮಿತ ಓವರ್‌ ಕ್ರಿಕೆಟ್‌ಗೂ ಈಗಾಗಲೇ ಡಿ ಕಾಕ್ ನಾಯಕರಾಗಿದ್ದಾರೆ.

ಕ್ರಿಕೆಟ್ ದಕ್ಷಿಣ ಆಫ್ರಿಕಾದ ನಿರ್ದೇಶಕ, ಮಾಜಿ ಕ್ರಿಕೆಟಿಗ ಗ್ರೇಮ್ ಸ್ಮಿತ್ ಅವರು ಆರಂಭದಲ್ಲಿ ಟೆಸ್ಟ್ ನಾಯಕತ್ವದ ಕ್ವಿಂಟನ್ ಡಿ ಕಾಕ್‌ಗೆ ಬೇಕಾಗಿಲ್ಲ. ನಿಯಮಿತ ಓವರ್‌ ಕ್ರಿಕೆಟ್‌ನಲ್ಲಿ ಡಿ ಕಾಕ್ ರಾಷ್ಟ್ರೀಯ ತಂಡದ ನಾಯಕರಾಗಿದ್ದರೆ ಸಾಕು ಎಂದಿದ್ದರು. ಆದರೆ ಈಗ ಯೂ ಟರ್ನ್ ಹೊಡೆದಿರುವ ಗ್ರೇಮ್ ಡಿ ಕಾಕ್ ಅವರನ್ನು ಟೆಸ್ಟ್ ನಾಯಕನಾಗಿ ಆರಿಸಿದ್ದಾರೆ.

ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ಮಧ್ಯೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಯಿಂದಲೇ ಡಿ ಕಾಕ್ ತಂಡವನ್ನು ನಾಯಕನಾಗಿ ಮುಂದುವರೆಯಲಿದ್ದಾರೆ. ಲಂಕಾ ವಿರುದ್ಧದ ಈ ಸರಣಿಗಾಗಿ ಪ್ರಕಟಿಸಲಾದ ತಂಡದಲ್ಲಿ ಗಾಯಾಕ್ಕೀಡಾಗಿರುವ ಕಾಗಿಸೊ ರಬಾಡ ಮತ್ತು ಡ್ವೇನ್ ಪ್ರಿಟೋರಿಯಸ್ ಹೆಸರಿಲ್ಲ.

ಲಂಕಾ ವಿರುದ್ಧದ ಟೆಸ್ಟ್‌ಗೆ ದಕ್ಷಿಣ ಆಫ್ರಿಕಾ ತಂಡ
ಕ್ವಿಂಟನ್ ಡಿ ಕಾಕ್ (ನಾಯಕ), ತೆಂಬ ಬವುಮಾ, ಐಡೆನ್ ಮಾರ್ಕ್ರಮ್, ಫಾಫ್ ಡು ಪ್ಲೆಸಿಸ್, ಬ್ಯೂರನ್ ಹೆಂಡ್ರಿಕ್ಸ್, ಡೀನ್ ಎಲ್ಗರ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ರಾಸ್ಸಿ ವ್ಯಾನ್ ಡೆರ್ ಡುಸೆನ್, ಸಾರೆಲ್ ಎರ್ವೀ, ಅನ್ರಿಕ್ ನಾರ್ಟ್ಜೆ, ಗ್ಲೆಂಟನ್ ಸ್ಟುವರ್ಮನ್, ವಿಯಾನ್ ಮುಲ್ಡರ್, ಕೀಗನ್ ಪೀಟರ್ಸನ್, ಕೈಲ್ ವೆರೆನ್ನೆ.

Story first published: Saturday, December 12, 2020, 10:20 [IST]
Other articles published on Dec 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+