ಕ್ವಿಂಟನ್ ಡಿ ಕಾಕ್ ಹೆಗಲಿಗೆ ದಕ್ಷಿಣ ಆಫ್ರಿಕಾ ಏಕದಿನ ತಂಡದ ನಾಯಕತ್ವ

ಕೇಪ್‌ಟೌನ್, ಜನವರಿ 21: ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಕ್ರಿಕೆಟ್ ಏಕದಿನ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದೆ. ಕ್ವಿಂಟನ್ ಡಿ ಕಾಕ್ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗಿದೆ. ಕೇಪ್‌ಟೌನ್‌ನಲ್ಲಿ ಫೆಬ್ರವರಿ 4ರಿಂದ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಡಿ ಕಾಕ್ ತಂಡವನ್ನು ಮುನ್ನಡೆಸಲಿದ್ದಾರೆ.
ಟೆಸ್ಟ್ ಮತ್ತು ಟಿ20ಯಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿರುವ ಫಾ ಡು ಪ್ಲೆಸಿಸ್ ಅವರನ್ನು ಏಕದಿನ ಸರಣಿಗಾಗಿ ಪ್ರಕಟಿಸಲಾಗಿರುವ 15 ಜನರ ತಂಡದಲ್ಲಿ ಹೆಸರಿಸಲಾಗಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ, ಸದ್ಯ ಟೆಸ್ಟ್ ಸರಣಿಯನ್ನಾಡುತ್ತಿದೆ. ಇತ್ತಂಡಗಳ 4ನೇ ಮತ್ತು ಕೊನೆಯ ಟೆಸ್ಟ್ ಜನವರಿ 24ರಿಂದ ಆರಂಭಗೊಳ್ಳಲಿದೆ.
ಸ್ವತಂತ್ರ ಆಯ್ಕೆದಾರ ಲಿಂಡಾ ಜೊಂಡಿ, ತಂಡದಿಂದ ಡು ಪ್ಲೆಸಿಸ್ ಅನ್ನು ಹೊರಗಿಟ್ಟಿರುವ ಬಗ್ಗೆ ಮಾತನಾಡಿದ್ದಾರೆ. 'ಏಕದಿನ ಸರಣಿಯಲ್ಲಿ ಫಾ ಡು ಪ್ಲೆಸಿಸ್ ಮತ್ತು ವೇಗಿ ಕಾಗಿಸೋ ರಬಾಡಗೆ ವಿಶ್ರಾಂತಿ ನೀಡಲು ನಾವು ಬಯಸಿದ್ದೇವೆ. ಯಾಕೆಂದರೆ ಅವರಿಬ್ಬರೂ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ,' ಎಂದು ಲಿಂಡಾ ಮಾಹಿತಿ ನೀಡಿದ್ದಾರೆ.
27ರ ಹರೆಯದ ಡಿ ಕಾಕ್, ಇತ್ತೀಚೆಗೆ ಎರಡು ಏಕದಿನ ಪಂದ್ಯಗಳಲ್ಲಿ ಮತ್ತು ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದರು. ಕ್ರಿಕೆಟ್ ಸೌತ್ ಆಫ್ರಿಕಾದ (ಸಿಎಸ್‌ಎ) ಆ್ಯಕ್ಟಿಂಗ್ ಡೈರೆಕ್ಟರ್ ಗ್ರೇಮ್ ಸ್ಮಿತ್ ಕೂಡ ಇತ್ತೀಚೆಗೆ, 'ಡಿ ಕಾಕ್ ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂದು ಶ್ಲಾಘಿಸಿದ್ದರು.
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ನಾಯಕ), ಟೆಂಬಾ ಬವುಮಾ, ಜಾರ್ನ್ ಫೋರ್ಟುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜನ್ನೆಮನ್ ಮಲನ್, ಡೇವಿಡ್ ಮಿಲ್ಲರ್, ಆ್ಯಡಿಲೆ ಫೆಹ್ಲುಕ್ವಾಯೊ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಲುಥೋ ವ್ಯಾನ್ ಸಿಪಮ್ಲಾ, ಜಾನ್-ಜಾನ್ ಸ್ಮಟ್ಸ್, ರಾಸ್ಸಿ ವಾನ್ ಡಿಸೆನ್, ಕೈಲ್ ವೆರೆನ್ನೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications