For Quick Alerts
ALLOW NOTIFICATIONS  
For Daily Alerts
 

KKR VS RR IPL 2025: ರಾಯಲ್‌ ಜಿದ್ದು ಗೆದ್ದ ಕೆಕೆಆರ್‌ಗೆ ಮೊದಲ ಜಯ: ಮಿಂಚಿದ ಕ್ವಿಂಟನ್‌

ಗುವಾಹಟಿ: ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್‌ (ಅಜೇಯ 97) ಹಾಗೂ ಬೌಲರ್‌ಗಳ ಕರಾರುವಕ್ ದಾಳಿಯ ನೆರವಿನಿಂದ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡ 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲು ಗೆಲುವು ದಾಖಲಿಸಿದೆ. ರಾಜಸ್ಥಾನ ರಾಯಲ್ಸ್ ತಂಡ ತವರಿನಲ್ಲಿ ಸೋಲು ಕಂಡಿದೆ. ಈ ಮೂಲಕ ಆರ್‌ಆರ್‌ ಆಡಿದ ಎರಡನೇ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 151 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್ 17.3 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 153 ರನ್‌ ಕಲೆ ಹಾಕಿ ಜಯ ಸಾಧಿಸಿತು.

Quinton de Kock s Unbeaten 97 Powers KKR to First Win of IPL 2025 Against RR

ಡಿಕಾಕ್‌ ಅಜೇಯ 97

ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್‌ ರೈಡರ್ಸ್ ತಂಡದ ಬ್ಯಾಟರ್‌ಗಳು ಉತ್ತಮ ಜೊತೆಯಾಟವನ್ನು ನೀಡಿದರು. ಸುನಿಲ್ ನರೈನ್‌ ಅವರ ಅನುಪಸ್ಥಿತಿಯಲ್ಲಿ ಇನಿಂಗ್ಸ್‌ ಆರಂಭಿಸಿದ ಮೋಯಿನ್‌ ಅಲಿ ಹಾಗೂ ಕ್ವಿಂಟನ್‌ ಡಿಕಾಕ್ ಪವರ್‌ ಪ್ಲೇನಲ್ಲಿ ಯಾವುದೇ ವಿಕೆಟ್ ಬೀಳದಂತೆ ನೋಡಿಕೊಂಡರು. ಈ ಜೋಡಿ ಪವರ್‌ ಪ್ಲೇನಲ್ಲಿ 41 ರನ್‌ ಸೇರಿಸಿತು. ಮೋಯಿನ್ ಅಲಿ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು.

ಎರಡನೇ ವಿಕೆಟ್‌ಗೆ ಕ್ವಿಂಟನ್‌ ಡಿಕಾಕ್‌ ಅವರನ್ನು ಸೇರಿಕೊಂಡ ಅಜಿಂಕ್ಯ ರಹಾನೆ ಸಾಧಾರಣ ಆಟವನ್ನು ಆಡಿದರು. ಈ ಜೋಡಿ 24 ಎಸೆತಗಳಲ್ಲಿ 29 ರನ್‌ ಸಿಡಿಸಿತು. ನಾಯಕ ಅಜಿಂಕ್ಯ ರಹಾನೆ 15 ಎಸೆತಗಳಲ್ಲಿ 18 ರನ್‌ ಬಾರಿಸಿ ಔಟ್ ಆದರು.

Quinton de Kock s Unbeaten 97 Powers KKR to First Win of IPL 2025 Against RR

ಮೂರನೇ ವಿಕೆಟ್‌ಗೆ ಕ್ವಿಂಟನ್‌ ಡಿಕಾಕ್‌ ಹಾಗೂ ಯುವ ಆಟಗಾರ ಆಂಗ್ರಿಕ್ಷ್ ರಘುವಂಶಿ (22) ಜೋಡಿ ಸೊಗಸಾದ ಆಟವನ್ನು ಆಡಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ರಾಜಸ್ಥಾನ ವಿಫಲವಾಯಿತು. ಈ ಜೋಡಿ 44 ಎಸೆತಗಳಲ್ಲಿ ಅಜೇಯ 83 ರನ್‌ಗಳ ಜತೆಯಾದ ಕಾಣಿಕೆ ನೀಡಿತು. ಭರವಸೆಯ ಆಟಗಾರ ಕ್ವಿಂಟನ್‌ ಡಿಕಾಕ್‌ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 8 ಬೌಂಡರಿ 6 ಸಿಕ್ಸರ್‌ ಸಹಾಯದಿಂದ ಅಜೇಯ 97 ರನ್‌ ಬಾರಿಸಿ ಜಯದಲ್ಲಿ ಮಿಂಚಿದರು.

ಜವಾಬ್ದಾರಿ ಮರೆತ ಆಟಗಾರರು

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಸಾಧಾರಣವಾಗಿತ್ತು. ಯಶಸ್ವಿ ಜೈಸ್ವಾಲ್‌ ಹಾಗೂ ಸಂಜು ಸ್ಯಾಮ್ಸನ್‌ (13) ಜೋಡಿ ತಂಡಕ್ಕೆ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 23 ಎಸೆತಗಳಲ್ಲಿ 33 ರನ್‌ ಸೇರಿಸಿತು. ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್‌ ಅವರನ್ನು ಕೂಡಿಕೊಂಡ ರಿಯಾನ್‌ ಪರಾಗ್ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು. ಆದರೆ ಈ ಜೋಡಿ ಸಹ ದೊಡ್ಡ ಜತೆಯಾಟದ ಕಾಣಿಕೆ ನೀಡಲಿಲ್ಲ. ಈ ಜೋಡಿ 24 ಎಸೆತಗಳಲ್ಲಿ 34 ರನ್‌ ಸೇರಿಸಿತು. ಪರಾಗ್‌ 15 ಎಸೆತಗಳಲ್ಲಿ 25 ರನ್‌ ಬಾರಿಸಿ ಔಟ್ ಆದರೆ, ಯಶಶ್ವಿ ಜೈಸ್ವಾಲ್‌ 24 ಎಸೆತಗಳಲ್ಲಿ 29 ರನ್‌ ಸಿಡಿಸಿ ಔಟ್ ಆದರು.

ಮಧ್ಯಮ ಕ್ರಮಾಂಕದಲ್ಲಿ ನಿತೀಶ್‌ ರಾಣಾ, ವನಿಂದು ಹಸರಂಗಾ, ಶುಭಂ ದುಬೆ, ಶಿಮ್ರೋನ್‌ ಹೆಟ್ಮೆಯರ್‌, ಬಂದು ಹೋಗುವ ಕೆಲಸ ಮುಗಿಸಿದರು. ವಿಕೆಟ್ ಕೀಪರ್ ಬ್ಯಾಟರ್‌ ಧ್ರುವ್ ಜುರೇಲ್‌ ತಂಡಕ್ಕೆ ಕೊಂಚ ಆಧಾರವಾದರು. ಅಲ್ಲದೆ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 28 ಎಸೆತಗಳಲ್ಲಿ 33 ರನ್‌ ಸಿಡಿಸಿ ಔಟ್ ಆದ್ರು. ಕೆಳ ಕ್ರಮಾಂಕದಲ್ಲಿ ಜೋಫ್ರಾ ಆರ್ಚರ್ 2 ಸಿಕ್ಸರ್ ಸಹಯಾದಿಂದ 16 ರನ್‌ ಸಿಡಿಸಿದರು.

ಕೆಕೆಆರ್‌ ಪರ ವೈಭವ್‌ ಆರೋರ್, ಹರ್ಷಿತ್ ರಾಣಾ, ವರುಣ್‌ ಚಕ್ರವರ್ತಿ, ಮೋಯಿನ್ ಅಲಿ ತಲಾ 2 ವಿಕೆಟ್‌ ಕಬಳಿಸಿದರು.

Story first published: Wednesday, March 26, 2025, 23:26 [IST]
Other articles published on Mar 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+