Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA 2nd T20: ಡಿಕಾಕ್‌ ಅರ್ಧಶತಕ: ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 213/4

ಭರವಸೆಯ ಬ್ಯಾಟರ್‌ ಕ್ವಿಂಟನ್‌ ಡಿಕಾಕ್‌ ಅವರು ಬಾರಿಸಿದ ಭರ್ಜರಿ ಅರ್ಧಶತಕದ ಬಲದಿಂದ ದಕ್ಷಿಣ ಆಫ್ರಿಕಾ ಎರಡನೇ ಟಿ20 ಪಂದ್ಯ ಗೆಲ್ಲಲು ಭಾರತಕ್ಕೆ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ನೀಡಿದೆ.

ನ್ಯೂ ಚಂಡೀಗಢ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ರೆಜಾ ಹೆಂಡ್ರಿಕ್ಸ್‌ (8) ದೊಡ್ಡ ಇನಿಂಗ್ಸ್‌ ಕಟ್ಟುವಲ್ಲಿ ವಿಫಲರಾದರು. ಇವರು ಔಟ್ ಆದಗ ತಂಡದ ಮೊತ್ತ 38 ಆಗಿತ್ತು. ಆಗ ಆರಂಭಿಕ ಕ್ವಿಂಟನ್‌ ಡಿಕಾಕ್‌ ಅವರನ್ನು ನಾಯಕ ಏಡನ್‌ ಮಾರ್ಕ್ರಮ್‌ ಸೇರಿಕೊಂಡರು. ಈ ಜೋಡಿ ತಂಡ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕುವತ್ತ ಚಿತ್ತ ನೆಡುವಂತೆ ಮಾಡಿತು.

Quinton de Kock s Blistering 90 Sets Competitive Target for India in 2nd T20I

ಕ್ವಿಂಟನ್‌ ಡಿಕಾಕ್‌ ಹಾಗೂ ಏಡನ್ ಮಾರ್ಕ್ರಮ್‌ ಜೋಡಿ ಎರಡನೇ ವಿಕೆಟ್‌ಗೆ 47 ಎಸೆತಗಳಲ್ಲಿ 83 ರನ್‌ ಸೇರಿಸಿತು. ಈ ವೇಳೆ ಮಾರ್ಕ್ರಮ್‌ 26 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 29 ರನ್‌ ಬಾರಿಸಿ ಔಟ್ ಆದರು.

ಡಿಕಾಕ್‌ ಅಬ್ಬರ

ಏಕದಿನ ಸರಣಿಯಲ್ಲಿ ಕಂಡುಕೊಂಡಿದ್ದ ಭರ್ಜರಿ ಫಾರ್ಮ್‌ನ್ನು ಕ್ವಿಂಟನ್‌ ಡಿ ಕಾಕ್‌ ಎರಡನೇ ಟಿ20 ಪಂದ್ಯದಲ್ಲೂ ಮುಂದುವರೆಸಿದರು. ಇವರ ಆಟಕ್ಕೆ ಬ್ರೇಕ್ ಹಾಕುವಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳ ವಿಫಲರಾದರು. ಇವರು 46 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿ ಇಲ್ಲದ ಹೊಡೆತಕ್ಕೆ ಮುಂದಾಗಿ ಕ್ರೀಸ್ ಬಿಟ್ಟಾಗ, ಜಿತೇಶ್‌ ಶರ್ಮಾ ಆಕರ್ಷಕ ಸ್ಟಂಪ್‌ ಔಟ್ ಮಾಡಿದರು. ಮಧ್ಯಮ ಕ್ರಮಾಂಕದಲ್ಲಿ ಡೇವಾಲ್ಡ್ ಬ್ರೇವಿಸ್‌ 14 ರನ್‌ ಸಿಡಿಸಿದರು.

ಐದನೇ ವಿಕೆಟ್‌ಗೆ ಡೊನೊವನ್ ಫೆರೀರಾ ಹಾಗೂ ಡೇವಿಡ್‌ ಮಿಲ್ಲರ್‌ ಜೋಡಿ ಅಜೇಯ 53 ರನ್‌ ಜೊತೆಯಾಟದ ಕಾಣಿಕೆ ನೀಡಿತು. ಡೊನೊವನ್ ಫೆರೀರಾ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 30 ರನ್‌ ಬಾರಿಸಿದರೆ, ಡೇವಿಡ್ ಮಿಲ್ಲರ್‌ ಅಜೇಯ 20 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 213 ರನ್‌ ಸೇರಿಸಿತು.

Quinton de Kock s Blistering 90 Sets Competitive Target for India in 2nd T20I

ಭಾರತದ ಪರ ವರುಣ್‌ ಚಕ್ರವರ್ತಿ 4 ಓವರ್ ಬೌಲಿಂಗ್ ಮಾಡಿ 29 ರನ್‌ ನೀಡಿ 2 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬೌಲರ್ ಜಸ್ಪ್ರೀತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಅರ್ಷದೀಪ್‌ ಸಿಂಗ್ ಸಹ ಬಿಗುವಿನ ದಾಳಿ ನಡೆಸುವಲ್ಲಿ ವಿಫಲರಾದರು. ಇವರು ಈ ಪಂದ್ಯದಲ್ಲಿ 9 ವೈಡ್ ಮಾಡಿದರು. ಪರಿಣಾಮ 4 ಓವರ್ ಬೌಲಿಂಗ್ ಮಾಡಿ 54 ರನ್‌ ನೀಡಿ ಕೈ ಸುಟ್ಟುಕೊಂಡರು.

Story first published: Thursday, December 11, 2025, 20:50 [IST]
Other articles published on Dec 11, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+