Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

R Ashwin: ಅನಿಲ್‌ ಕುಂಬ್ಳೆ ದಾಖಲೆ ಅಳಿಸಿದ ಅಶ್ವಿನ್‌

ಟೀಮ್ ಇಂಡಿಯಾ, ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಗೆಲುವಿನ ಸನಿಹಕ್ಕೆ ಬಂದು ನಿಂತಿದೆ. ಈ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಲು ಟೀಮ್ ಇಂಡಿಯಾಕ್ಕೆ ಇನ್ನು ಆರು ವಿಕೆಟ್‌ಗಳು ಮಾತ್ರ ಬಾಕಿ ಇದೆ. ಭಾನುವಾರ ಮೊದಲಾವಧಿಯಲ್ಲಿ ಅಥವಾ, ಎರಡನೇ ಅವಧಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಗೆ ಬೀರಬಹುದು ಎಂಬ ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ. ಈ ಪಂದ್ಯದಲ್ಲಿ ಎಲ್ಲರ ಚಿತ್ತ ಕದ್ದ ಆಟಗಾರ ಅಶ್ವಿನ್. ಈ ಟೆಸ್ಟ್‌ನಲ್ಲಿ ಅಶ್ವಿನ್‌ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಆರ್‌.ಅಶ್ವಿನ್ ತಮ್ಮ ತವರಿನ ಪಿಚ್‌ನಲ್ಲಿ ಅತ್ಯಾಕರ್ಷಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು. ಅಲ್ಲದೆ ಒತ್ತಡದಲ್ಲಿ ತಂಡಕ್ಕೆ ಅಶ್ವಿನ್‌ ಹಾಗೂ ಜಡೇಜಾ ಆಧಾರವಾದರು. ಅಲ್ಲದೆ ಭರ್ಜರಿ ಶತಕದ ಜೊತೆಯಾಟವನ್ನು ನೀಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿದ್ದ ಅಶ್ವಿನ್‌ ಸಾಧನೆ ಮಾಡಿದ್ದರು. ಈಗ ಎರಡನೇ ಟೆಸ್ಟ್‌ನಲ್ಲಿ ಬೌಲಿಂಗ್‌ ಮೂಲಕ ತಂಡಕ್ಕೆ ಆಧಾರವಾಗಿದ್ದಾರೆ.

R Ashwin Breaks Anil Kumble s Record in India s Dominating Performance Against Bangladesh

ಅಶ್ವಿನ್‌ಗೆ ಮೂರು ವಿಕೆಟ್‌

ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್‌ ಅಶ್ವಿನ್‌ ಅವರು ಎರಡನೇ ಇನಿಂಗ್ಸ್‌ನಲ್ಲಿ ಬಾಂಗ್ಲಾ ಬ್ಯಾಟರ್‌ಗಳಿಗೆ ಕಾಟ ನೀಡಿದರು. 515 ರನ್‌ಗಳ ಗುರಿಯನ್ನು ಬೆನ್ನಟ್ಟಿರುವ ಬಾಂಗ್ಲಾ ಎರಡನೇ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದೆ. ಬಿದ್ದ ನಾಲ್ಕು ವಿಕೆಟ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಅಶ್ವಿನ್ ಪಡೆದಿದ್ದು, ಅಬ್ಬರಿಸಿದ್ದಾರೆ.

ಅನಿಲ್‌ ಕುಂಬ್ಳೆ ದಾಖಲೆ ಅಳಿಸಿದ ಅಶ್ವಿನ್‌

ಈ ಮೂರು ವಿಕೆಟ್‌ಗಳ ಸಹಾಯದಿಂದ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬೌಲರ್ ಅನಿಲ್ ಕುಂಬ್ಳೆ ಅವರ ದೊಡ್ಡ ದಾಖಲೆಯನ್ನು ಮುರಿದರು. ಅಶ್ವಿನ್ ಭಾರತದ ಪರ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಈ ಟೆಸ್ಟ್‌ಗೂ ಮುನ್ನ ಈ ದಾಖಲೆ ಟೀಮ್ ಇಂಡಿಯಾದ ಅನಿಲ್‌ ಕುಂಬ್ಳೆ ಅವರದ್ದಾಗಿತ್ತು. ಇವರು ನಾಲ್ಕನೇ ಇನಿಂಗ್ಸ್‌ನಲ್ಲಿ 94 ವಿಕೆಟ್‌ಗಳನ್ನು ಪಡೆದಿದ್ದರು. ಈ ದಾಖಲೆಯನ್ನು ಅಶ್ವಿನ್‌ ಹಿಂದೆ ಹಾಕಿದ್ದಾರೆ. ನಾಲ್ಕನೇ ಇನಿಂಗ್ಸ್‌ನಲ್ಲಿ ಅಶ್ವಿನ್‌ 96 ವಿಕೆಟ್‌ ಪಡೆದು ಬೀಗಿದ್ದಾರೆ. ಭಾನುವಾರ ಎಲ್ಲರ ಚಿತ್ತ ಅಶ್ವಿನ್‌ ಅವರ ಮೇಲೆ ನೆಟ್ಟಿದೆ.

ಧೋನಿ ದಾಖಲೆಯ ಸಮ

ಮೊದಲ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಶ್ವಿನ್ 133 ಎಸೆತಗಳಲ್ಲಿ 113 ರನ್ ಗಳಿಸಿದ್ದರು. ಇದು ಟೆಸ್ಟ್‌ನಲ್ಲಿ ಅವರ ಆರನೇ ಶತಕವಾಗಿದೆ. ಅಶ್ವಿನ್‌ ಶತಕಗಳ ಲೆಕ್ಕಾಚಾರದಲ್ಲಿ ಈಗ ಧೋನಿ ಅವರ ದಾಖಲೆಯ ಸಮಕ್ಕೆ ನಿಂತಿದ್ದಾರೆ. ಧೋನಿ ಟೆಸ್ಟ್‌ನಲ್ಲಿ 6 ಶತಕಗಳನ್ನು ಗಳಿಸಿದ್ದಾರೆ.

ಅಶ್ವಿನ್ ಸಾಧನೆ

ಚೆನ್ನೈ ಟೆಸ್ಟ್‌ಗೂ ಮುನ್ನ ಆರ್ ಅಶ್ವಿನ್ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 5 ಶತಕ ಮತ್ತು 14 ಅರ್ಧ ಶತಕಗಳೊಂದಿಗೆ 3309 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು 516 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದರಲ್ಲಿ ಅವರು ಇನ್ನಿಂಗ್ಸ್‌ನಲ್ಲಿ 36 ಬಾರಿ 5 ವಿಕೆಟ್ ಪಡೆದು ಬೀಗಿದ್ದಾರೆ.

Story first published: Sunday, September 22, 2024, 7:02 [IST]
Other articles published on Sep 22, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+