Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಟಲಿ ಎಸೆತದ ನಡುವೆ ದಾಖಲೆ ಬರೆದ ಅಶ್ವಿನ್

ಕಟಕ್, ಅ.06: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದ ವೇಳೆ ಪ್ರೇಕ್ಷಕರು ಬಾಟಲಿ ಎಸೆದು ಗಲಾಟೆ ಮಾಡುವ ವೇಳೆಗೆ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಹೊಸ ದಾಖಲೆ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ.

ಬರಾಬತಿ ಸ್ಟೇಡಿಯಂನಲ್ಲಿ ಭಾರತದ ಕಳಪೆ ಪ್ರದರ್ಶನ, ದಕ್ಷಿಣ ಆಫ್ರಿಕಾ ಕೈ ಸೇರಿದ ಟಿ20 ಸರಣಿ, ಪ್ರೇಕ್ಷಕರ ಬಾಟಲಿ ಎಸೆತ, ಪೊಲೀಸರ ಕರ್ತವ್ಯ ವಿಮುಖತೆ ಸುದ್ದಿಯಾಗಿದೆ. ಇದೆಲ್ಲದರ ನಡುವೆ ಟ್ವೆಂಟಿ20 ಮಾದರಿಯಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಮೊದಲ ಸ್ಪಿನ್ನರ್ ಹಾಗೂ ಬೌಲರ್ ಎಂಬ ಸಾಧನೆ ರವಿಚಂದ್ರನ್ ಅಶ್ವಿನ್ ಪಾಲಾಗಿದೆ.

2ನೇ ಟಿ20 ಪಂದ್ಯದಲ್ಲಿ 92ರನ್ ಗಳಿಸಿದ್ದ ಭಾರತಕ್ಕೆ ಗೆಲ್ಲುವ ಆಸೆಯನ್ನು ಅಶ್ವಿನ್ ಚಿಗುರಿಸಿದ್ದರು. ದಕ್ಷಿಣ ಆಫ್ರಿಕಾದ ಮೂವರು ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳಿಸಿದ್ದರು. ಅದರಲ್ಲೂ ಎಬಿ ಡಿವಿಲೆಯರ್ಸ್ ವಿಕೆಟ್ ಪಡೆದಿದ್ದು ಎಲ್ಲರ ಮೆಚ್ಚುಗೆ ಗಳಿಸಿತು. ಅಶ್ವಿನ್ ಅವರ ಬೌಲಿಂಗ್ ಸಾಮರ್ಥ್ಯಕ್ಕೆ ಸಾಥ್ ನೀಡಬಲ್ಲ ಮತ್ತೊಬ್ಬ ಬೌಲರ್ ಧೋನಿಗೆ ಸಿಗಲಿಲ್ಲ. ಹರ್ಭಜನ್ ಸಿಂಗ್ ಗೆ ಪಿಚ್ ನಿಂದ ಹೆಚ್ಚಿನ ಲಾಭ ದೊರೆಯಲಿಲ್ಲ. []

R Ashwin claims a record amidst bottle-throwing incidents in Cuttack

29 ವರ್ಷ ವಯಸ್ಸಿನ ಆರ್ ಅಶ್ವಿನ್ ಅವರು 4 ಓವರ್ ಗಳಲ್ಲಿ 24 ರನ್ನಿತ್ತು 3 ವಿಕೆಟ್ ಉದುರಿಸಿದ್ದರು. ಮೂರನೇ ವಿಕೆಟ್ ಪಡೆಯುತ್ತಿದ್ದಂತೆ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. [ಪೊಲೀಸರಿಗೆ ಕರ್ತವ್ಯ ಪ್ರಜ್ಞೆ ಇಲ್ಲ ಎಂದ ಗವಾಸ್ಕರ್]

ಈ ಮುಂಚೆ ಈ ಪಟ್ಟ ಎಡಗೈ ವೇಗದ ಬೌಲರ್ ಇರ್ಫಾನ್ ಪಠಾಣ್ ಹೆಸರಿನಲ್ಲಿತ್ತು. ಪಠಾಣ್ ಅವರು 24 ಪಂದ್ಯಗಳಲ್ಲಿ 28 ವಿಕೆಟ್ ಪಡೆದಿದ್ದಾರೆ. ಅಶ್ವಿನ್ ಅವರು 29 ವಿಕೆಟ್ ಪಡೆದು ಮುನ್ನಡೆ ಪಡೆದಿದ್ದಾರೆ. ಮೂರನೇ ಸ್ಥಾನದಲ್ಲಿ 24 ವಿಕೆಟ್ ಪಡೆದ ಹರ್ಭಜನ್ ಇದ್ದಾರೆ.

ಟಿ20ಯಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯರು(ಟಾಪ್ 10)
* 29 (28 ಪಂದ್ಯಗಳು) ಆರ್ ಅಶ್ವಿನ್
* 28 (24) ಹರ್ಭಜನ್ ಸಿಂಗ್
* 23 (40) ಯುವರಾಜ್ ಸಿಂಗ್
* 17 (9) ಅಶೋಕ್ ದಿಂಡಾ (9), ಜಹೀರ್ ಖಾನ್ (17)
* 15 (10) ಆರ್ ಪಿ ಸಿಂಗ್
* 14 (22) ರವೀಂದ್ರ ಜಡೇಜ
* 13 (13) ಭುವನೇಶ್ವರ್ ಕುಮಾರ್ (13), ಆಶೀಶ್ ನೆಹ್ರಾ (8), ಯುಸೂಫ್ ಪಠಾಣ್ (22)
* 11 (7) ಅಮಿತ್ ಮಿಶ್ರಾ.
* 10 (5) ಎಲ್ ಬಾಲಾಜಿ, ಪ್ರಗ್ನಾಜ್ ಓಜಾ (6), ಆರ್ ವಿನಯ್ ಕುಮಾರ್ (9)
(ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+