Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashwin: ಐಪಿಎಲ್‌ನಲ್ಲಿ ಅಶ್ವಿನ್‌ ಇತಿಹಾಸ: ಈ ಸಾಧನೆ ಮಾಡಿದ ಮೂರನೇ ಬೌಲರ್

ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ನಡುವಣ ಪಂದ್ಯ ನ್ಯೂ ಚಂಡೀಗಡ್ ಅಂಗಳದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಮೊದಲು ಬ್ಯಾಟ್ ಮಾಡಿತು. ಭರವಸೆಯ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಪಂಜಾಬ್‌ ಪವರ್‌ ಪ್ಲೇನಲ್ಲಿ ಪವರ್‌ ಫುಲ್ ಆಟವನ್ನು ಆಡಿದ್ದರೂ ಸಹ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ರವಿಚಂದ್ರನ್ ಅಶ್ವಿನ್‌ ಸಹ ತಮ್ಮ ಅನುಭವ ಬಳಸಿ ಬೌಲ್‌ ಮಾಡಿ 8ನೇ ಓವರ್‌ನಲ್ಲಿ ಎರಡು ವಿಕೆಟ್‌ ಕಬಳಿಸಿದರು. ಈ ಮೂಲಕ ಅಶ್ವಿನ್‌ ಇತಿಹಾಸ ನಿರ್ಮಿಸಿದರು.

ಸಾಧಾರಣ ಮೊತ್ತಕ್ಕೆ ಪಂಜಾಬ್‌ ತನ್ನ ಆರಂಭಿಕ ಆಟಗಾರ ಪ್ರಭಸಿಮ್ರನ್ ಸಿಂಗ್, ಶ್ರೇಯಸ್‌ ಅಯ್ಯರ್‌, ಮಾರ್ಕಸ್‌ ಸ್ಟೋಯಿಸ್ ಅವರ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡಿತ್ತು. ಈ ವೇಳೆ ಸ್ಪಿನ್ ಬೌಲರ್‌ ಸಹ ತಮ್ಮ ಬಿಗುವಿನ ದಾಳಿಯಿಂದ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ ಕಬಳಿಸಿದರು. ಈ ಮೂಲಕ ಅಶ್ವಿನ್ ಐಪಿಎಲ್‌ನಲ್ಲಿ ನೂತನ ಇತಿಹಾಸವನ್ನು ಮುಂದುವರಿಸಿದರು.

R Ashwin Climbs to Third Spot on IPL s All-Time Wicket-Takers List


ಐಪಿಎಲ್‌ನಲ್ಲಿ ಅಶ್ವಿನ್ ಇತಿಹಾಸ

ರವಿಚಂದ್ರನ್‌ ಅಶ್ವಿನ್ ಪ್ರಸಕ್ತ ಐಪಿಎಲ್‌ನಲ್ಲಿ ಕೊಂಚ ದುಬಾರಿ ಆಗಿದ್ದರು. ಅಲ್ಲದೆ ವಿಕೆಟ್ ಬರವನ್ನು ಸಹ ಅನುಭವಿಸುತ್ತಿದ್ರು. ಆದರೆ ಪಂಜಾಬ್‌ ವಿರುದ್ಧದ ತಮ್ಮ ಕೋಟಾದ ಎರಡನೇ ಓವರ್‌ನ ಎರಡನೇ ಎಸೆತದಲ್ಲಿ ನೇಹಲ್ ವಧೇರ್‌ ಅವರ ಬ್ಯಾಟನ ಅಂಚಿಗೆ ತಾಗಿದ ಚೆಂಡು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಕೈ ಸೇರುತ್ತಿದ್ದಂತೆ ಸಂಭಮ ಮನೆ ಮಾಡಿತ್ತು. ಆದರೆ ಇದೇ ಓವರ್‌ನ ಕೊನೆಯ ಎಸೆತದಲ್ಲಿ ಅಶ್ವಿನ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಕೇರಂ ಬೌಲ್‌ ಎಸೆದು ಪೆವಿಲಿಯನ್ ಹಾದಿ ತೋರಿಸಿದರು. ಈ ಓವರ್‌ನಲ್ಲಿ 2 ವಿಕೆಟ್‌ ಪಡೆದ ಅಶ್ವಿನ್‌ ಇತಿಹಾಸದ ಪುಟಕ್ಕೆ ಎಂಟ್ರಿ ಪಡೆದರು.

ಪಂಜಾಬ್‌ ವಿರುದ್ಧ 2 ವಿಕೆಟ್‌ ಪಡೆಯುವ ಮೂಲಕ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಸ್ಪಿನ್ ಬೌಲರ್ ಅಶ್ವಿನ್ ಡ್ವೇನ್‌ ಬ್ರಾವೊ, ಭುವನೇಶ್ವರ್‌ ಕುಮಾರ್‌ ದಾಖಲೆಯನ್ನು ಅಳಿಸಿ ಹಾಕಿದರು. ಈ ಮೂಲಕ ಐಪಿಎಲ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಮೂರನೇ ಬೌಲರ್‌ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸದ್ಯ ಅಶ್ವಿನ್ ಬುಟ್ಟಿಯಲ್ಲಿ 185 ವಿಕೆಟ್‌ಗಳು ಇವೆ.

ಈ ಪಂದ್ಯಕ್ಕೂ ಮುನ್ನ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರು. ಆದರೆ ಪಂಜಾಬ್‌ ವಿರುದ್ಧ 2 ವಿಕೆಟ್‌ ಪಡೆಯುತ್ತಿದ್ದಂತೆ ಖ್ಯಾತ ನಾಮ ಬೌಲರ್‌ಗಳ ಸಾಧನೆಯನ್ನು ಮೀರಿ ನಿಂತರು.

ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಟಾಪ್‌ 5 ಬೌಲರ್ಸ್‌

ಯುಜುವೇಂದ್ರ ಚಹಾಲ್‌, 164 ಪಂದ್ಯ, 206 ವಿಕೆಟ್‌
ಪಿಯೂಷ್ ಚಾವ್ಲಾ, 192 ಪಂದ್ಯ, 192 ವಿಕೆಟ್‌
ಆರ್‌ ಅಶ್ವಿನ್‌, 217 ಪಂದ್ಯ, 185 ವಿಕೆಟ್‌
ಭುವನೇಶ್ವರ್ ಕುಮಾರ್‌, 179 ಪಂದ್ಯ, 184 ವಿಕೆಟ್‌
ಡ್ವೇನ್‌ ಬ್ರಾವೋ, 161 ಪಂದ್ಯ, 183 ವಿಕೆಟ್‌

Story first published: Tuesday, April 8, 2025, 23:46 [IST]
Other articles published on Apr 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+