R Ashwin: ಐದು ದಾಖಲೆಯ ಮೇಲೆ ಸ್ಪಿನ್ ಮಾಂತ್ರಿಕನ ಕಣ್ಣು
ಭಾರತದ ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ಬೆಂಗಳೂರಿನತ್ತ ನೆಟ್ಟಿದೆ. ಎಂ ಚಿನ್ನಸ್ವಾಮಿ ಅಂಗಳದಲ್ಲಿ ಗುರವಾರದಿಂದ ಭಾರತ, ನ್ಯೂಜಿಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಹಲವು ಆಟಗಾರರು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್ ಯಾವುದೇ ಸರಣಿಯಲ್ಲಿ ಅಂಗಳಕ್ಕೆ ಇಳಿದರೂ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ. ಅಶ್ವಿನ್ ಈ ಬಾರಿಯೂ ಅಂಗಳಕ್ಕೆ ಇಳಿದಾಗಲೂ ಹಲವು ದಾಖಲೆಗಳನ್ನು ನಿರ್ಮಿಸುವ ಕನಸು ಹೊಂದಿದ್ದಾರೆ. ಹಾಗಿದ್ದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಶ್ವಿನ್ ನಿರ್ಮಿಸಲಿರುವ ದಾಖಲೆಗಳು ಯಾವವು ಎಂಬ ಬಗ್ಗೆ ವರದಿ ಇಲ್ಲಿದೆ.

ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪರ 37 ಪಂದ್ಯಳಲ್ಲಿ ಆಡಿದ್ದಾರೆ. ಈ ವೇಳೆ 185 ವಿಕೆಟ್‌ಗಳ್ನು ಪಡೆದಿದ್ದಾರೆ. ಕಿವೀಸ್ ವಿರುದ್ಧದ ಸರಣಿಯಲ್ಲಿ ಇವರು ಇನ್ನು ಮೂರು ವಿಕೆಟ್ ಪಡೆದಿದ್ದೇ ಆದಲ್ಲಿ, ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ನಾಥನ್ ಲಿಯಾನ್ ಅವರ ದಾಖಲೆಯನ್ನು ಅಳಿಸಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಲಿಯಾನ್ 43 ಟೆಸ್ಟ್ ಪಂದ್ಯಗಳಲ್ಲಿ 187 ವಿಕೆಟ್ ಕಬಳಿಸಿದ್ದಾರೆ.
15 ವಿಕೆಟ್ ಪಡೆದರೆ...
ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಇನ್ನೊಂದು ದಾಖಲೆ ನಿರ್ಮಿಸಬಹುದಾಗಿದೆ. ಇವರು ಈ ಸರಣಿಯಲ್ಲಿ 15 ವಿಕೆಟ್ ಕಬಳಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 200 ವಿಕೆಟ್ ಪಡೆಯಬಲ್ಲರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳಲಿದ್ದಾರೆ.

4 ವಿಕೆಟ್ ಪಡೆದರೆ ಇನ್ನೊಂದು ಸಾಧನೆ
ಟೆಸ್ಟ್ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಅಶ್ವಿನ್, 4 ವಿಕೆಟ್ ಪಡೆದರೆ, ಮತ್ತೊಂದು ದಾಖಲೆಯನ್ನು ಬರೆಯಬಹುದಾಗಿದೆ. ಇವರು ಟೆಸ್ಟ್‌ನಲ್ಲಿ ಈಗಾಗಲೇ 527 ವಿಕೆಟ್ ಪಡೆದಿದ್ದು, ಆಸೀಸ್ ಪ್ಲೇಯರ್ ಲಿಯಾನ್ 530 ವಿಕೆಟ್ ಪಡೆದಿದ್ದಾರೆ.
ಭಾರತದಲ್ಲಿ ಮೈಲಿಗಲ್ಲು
ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಬಹುದು. ಇವರು ಈ ಸರಣಿಯಲ್ಲಿ 11 ವಿಕೆಟ್ ಪಡೆದಲ್ಲಿ ತವರಿಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗ ಬಲ್ಲರು. ಅಶ್ವಿನ್ ಈ ವರೆಗೆ ಭಾರತದಲ್ಲಿ 466 ವಿಕೆಟ್ ಕಬಳಿಸಿದ್ದಾರೆ. ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ಅನಿಲ್ ಕುಂಬ್ಳೆ ಇದ್ದು ಇವರು 476 ರನ್ ಸಿಡಿಸಿದ್ದಾರೆ.

ಸರಣಿ ಶ್ರೇಷ್ಠ ದಾಖಲೆ
ಬರೀ ವಿಕೆಟ್ ಬೇಟೆಯಲ್ಲಿ ಮಾತ್ರ ಅಶ್ವಿನ್ ದಾಖಲೆ ನಿರ್ಮಿಸುವ ಕನಸು ಕಾಣುತ್ತಿಲ್ಲ. ಬದಲಿಗೆ ಪ್ರಶಸ್ತಿಯ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಗೆಲ್ಲುವ ಮೂಲಕ, ಮುತ್ತಯ್ಯ ಮುರಳೀಧರನ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾದರೆ, ಮುರಳೀಧರನ್ ದಾಖಲೆಯನ್ನು ಮೀರಿ ನಿಲ್ಲಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications