Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC ಫೈನಲ್‌ನಲ್ಲಿ ಆಡುವ ತಂಡದಿಂದ ಹೊರಬಿದ್ದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಆರ್ ಅಶ್ವಿನ್

ಟೀಮ್ ಇಂಡಿಯಾದ ಅನುಭವಿ ಕ್ರಿಕೆಟಿಗ ಆರ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಅವಕಾಶ ದೊರೆಯದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅಶ್ವಿನ್ ಆಸ್ಟ್ರೆಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ ಎಂಬುದು ತನಗೆ ಮೊದಲೇ ತಿಳಿದಿತ್ತು ಎಂದಿದ್ದಾರೆ.

ವಿಶ್ವ ನಂ. 1 ಟೆಸ್ಟ್ ಬೌಲರ್ ಅಶ್ವಿನ್ ಅವರು ಆಸ್ಟ್ರೇಲಿಯಾ ವಿರುದ್ಧ ಈ ಮಹಾ ಕಾದಾಟದಲ್ಲಿ ಸೆಣೆಸಾಟ ನಡೆಸಲು ಮತ್ತು ತಂಡಕ್ಕೆ ಕೊಡುಗೆ ನೀಡಲು ಉತ್ಸುಕರಾದ್ದರು ಎಂದು ಎಂದು ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಯಶಸ್ಸು ಸಾಧಿಸಿರುವ ದಾಖಲೆ ಹೊಂದಿರುವ ಆರ್ ಅಶ್ವಿನ್ ತವರಿನಲ್ಲಿ ಮಾತ್ರವಲ್ಲದೆ ತವರಿನಾಚೆಗಿನ ಸರಣಿಯಲ್ಲಿಯೂ ಭರ್ಜರಿ ಯಶಸ್ಸು ಸಾಧಿಸಿದ ದಾಖಲೆ ಹೊಂದಿದ್ದಾರೆ.

R Ashwin first reaction after WTC final snub said Knew I was going to be left out

ಆದರೂ ಆರ್ ಅಶ್ವಿನ್ ತಂಡಕ್ಕೆ ಯಾವ ರೀತಿಯಲ್ಲಿ ಕೊಡುಗೆ ನೀಡಲು ಸಾಧ್ಯವೋ ಅದಕ್ಕೆ ಮಾನಸಿಕವಾಗಿ ಸಿದ್ಧರಾಗಿದ್ದಾಗಿ ಹೆಳಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಭಾರತದ ಪ್ರವೇಶ ಪಡೆಯಲು ಪ್ರಮುಖ ಕಾರಣವಾದ ಆಟಗಾರರಲ್ಲಿ ಒಬ್ಬರಾಗಿದ್ದ ಅಶ್ವಿನ್ ಪ್ರಶಸ್ತಿ ಗೆಲ್ಲುವುದು ನಮ್ಮ ಮುಖ್ಯ ಗಿರುಯಾಗಿತ್ತು ಎಂದಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಭಾರತ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ನೊಂದಿಗೆ ಕಣಕ್ಕಿಳೀಯಲು ನಿರ್ಧರಿಸಿತ್ತು. ಹೀಗಾಗಿ ಓರ್ವ ಸ್ಪಿನ್ನರ್‌ನ ಸ್ಥಾನಕ್ಕೆ ರವೀಂದ್ರ ಜಡೇಜಾ ಸ್ಥಾನವನ್ನು ಪಡೆದುಕೊಂಡ ಕಾರಣ ಆರ್ ಅಶ್ವಿನ್ ಆಡುವ ಬಳಗದಿಂದ ಹೊರಬಿದ್ದರು. ಆರ್ ಅಶ್ವಿನ್ ಅವರನ್ನು ಹೊರಗಿಡುವ ಈ ನಿರ್ಧಾರದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು.

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ಹೇಗೆ ಸ್ವೀಕರಿಸಿದರು ಎಂಬುದರ ವಿಚಾರವಾಗಿ ಸ್ವತಃ ಆರ್ ಅಶ್ವಿನ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವಿವರಿಸಿದ್ದಾರೆ. "ನಾನು ಕೂಡ ಫೈನಲ್‌ನಲ್ಲಿ ಆಡುವದಕ್ಕೆ ಎದುರುನೋಡುತ್ತಿದ್ದೆ, ಯಾಕೆಂದರೆ ತಮಡ ಈ ಹಂತಕ್ಕೆ ಬರಲು ನಾನು ಕೂಡ ಅದರ ಭಾಗವಾಗಿದ್ದೆ. ಈ ಹಿಂದಿನ ಫೈನಲ್ ಪಮದ್ಯದಲ್ಲಿಯೂ ನಾನು ಆಡಿ ಅಂದು ನಾಲ್ಕು ವಿಕೆಟ್‌ಗಳನ್ನು ಪಡೆದುಕೊಂಡಿದ್ದೆ" ಎಂದಿದ್ದಾರೆ.

"2018-19ರ ಬಳಿಕ ವಿದೇಶದಲ್ಲಿ ನನ್ನ ಬೌಲಿಂಗ್ ಅದ್ಭುತವಾಗಿದೆ. ಭಾರತ ತಂಡಕ್ಕಾಗಿ ಹಲವು ಪಂದ್ಯಗಳಲ್ಲಿ ಗೆಲುವು ಕೂಡ ತಂದುಕೊಟ್ಟಿದ್ದೇನೆ. ನಾನು ಇದನ್ನು ನಾಯಕ ಅಥವಾ ತರಬೇತುದಾರನಾಗಿ ನೋಡುತ್ತಿದ್ದೇನೆ ತಂಡದ ಪರವಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ" ಎಂದಿದ್ದಾರೆ ಆರ್ ಅಶ್ವಿನ್.

ನಾವು ಕೊನೆಯ ಬಾರಿ ಇಂಗ್ಲೆಂಡ್‌ ಪ್ರವಾಸ ಕೈಗೊಂಡಿದ್ದಾಗ 2-2 ಅಂತರದಿಂದ ಡ್ರಾಗೊಂಡಿತ್ತು.ಆಗ ಇಂಗ್ಲೆಂಡ್‌ನಲ್ಲಿ 4 ವೇಗಿಗಳು ಮತ್ತು 1 ಸ್ಪಿನ್ನರ್ ಸಂಯೋಜನೆಯೊಂದಿಗ ಕಣಕ್ಕಿಳಿಯಲಾಗಿತ್ತು. ಅದೇ ಲೆಕ್ಕಾಚಾರದಲ್ಲಿ ಫೈನಲ್‌ನಲ್ಲಿಯೂ ಕಣಕ್ಕಿಳಿಯಲು ನಿರ್ಧರಿಸರಬಹುದು ಎಂದು ಆರ್ ಅಶ್ವಿನ್ ಟೀಮ್ ಇಂಡಿಯಾದ ಮ್ಯಾನೇಜ್‌ಮೆಂಟ್‌ನ ನಿರ್ಧಾರದ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

Story first published: Thursday, June 15, 2023, 22:34 [IST]
Other articles published on Jun 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+