For Quick Alerts
ALLOW NOTIFICATIONS  
For Daily Alerts
 

'ಮಾಂಕೆಡೆಡ್‌' ಎಂದರೇನು? ಅಶ್ವಿನ್ ಮಾಡಿದ್ದು ಸರಿಯೋ, ತಪ್ಪೋ?

R Ashwin mankaded Buttler, Is that write or wrong?

ಬೆಂಗಳೂರು, ಮಾರ್ಚ್ 26: ನಿನ್ನೆ ರಾತ್ರಿ ನಡೆದ ಕಿಂಗ್ಸ್‌ ಇಲೆವೆನ್ ಪಂಜಾಬ್-ರಾಜಸ್ಥಾನ ರಾಯಲ್ಸ್‌ ನಡುವಿನ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ತಂಡ 14 ರನ್‌ಗಳ ಅಂತರದಿಂದ ಜಯಗಳಿಸಿದೆ.

ಪಂದ್ಯದಲ್ಲಿ ಕ್ರಿಸ್‌ಗೇಲ್ ಅತ್ಯುತ್ತಮ ಆಟವಾಡಿದರು ಆದರೆ ಅವರಿಗಿಂತ ಹೆಚ್ಚು ಸುದ್ದಿಗೆ ಗ್ರಾಸವಾಗಿರುವುದು ಪಂದ್ಯದ ಸಮಯ ಪಂಜಾಬ್‌ ನಾಯಕ ಆರ್.ಅಶ್ವಿನ್ ತೆಗೆದ ಒಂದು ವಿಕೆಟ್.

ಆರ್.ಅಶ್ವಿನ್ ಅವರು ಬೌಲಿಂಗ್ ಮಾಡಬೇಕಾದರೆ ನಾನ್‌ಸ್ಟ್ರೈಕರ್ ಎಂಡ್‌ನಲ್ಲಿದ್ದ ಜಾಸ್ ಬಟ್ಲರ್ ಕ್ರೀಸ್ ಬಿಟ್ಟು ಮುಂದೆ ಹೋದರು, ಅಶ್ವಿನ್ ಅವರು ಚೆಂಡು ಎಸೆಯುವ ಮುನ್ನವೇ ಬೇಲ್ಸ್‌ ಎಗರಿಸಿ ಬಟ್ಲರ್ ಅವರನ್ನು ರನ್ ಔಟ್ ಮಾಡಿದರು. ಅಂಪೈರ್ ಔಟ್ ತೀರ್ಪು ನೀಡಿದರು ಆದರೆ ಹೀಗೆ ಔಟ್ ಮಾಡಿದ್ದು ಸರಿಯೋ, ತಪ್ಪೊ ಎಂಬುದು ಬಹುವಾಗಿ ಚರ್ಚಿತವಾಗುತ್ತಿರುವ ವಿಷಯ.

ಈ ರೀತಿ ಚೆಂಡು ಎಸೆಯುವ ಮುನ್ನವೇ ಬೌಲರ್, ನಾನ್ ಸ್ಟ್ರೈಕರ್ ಎಂಡ್‌ನಲ್ಲಿನ ಬ್ಯಾಟ್ಸ್‌ಮನ್‌ ಅನ್ನು ರನ್‌ಔಟ್ ಮಾಡುವುದನ್ನು 'ಮಾಂಕೆಡೆಡ್' ಅಥವಾ 'ಮಾಂಕೆಡಿಂಗ್' ಎನ್ನುತ್ತಾರೆ. ಇದಕ್ಕೆ ಈ ಹೆಸರು ಬರಲು ಕಾರಣ, ಭಾರತದ ಕ್ರಿಕೆಟ್ ಆಟಗಾರ ವಿನು ಮಾಂಕೆಡ್.

ಈ ರೀತಿ ರನ್‌ಔಟ್‌ ಮೊದಲು ಮಾಡಿದ್ದು ವಿನು ಮಂಕಡ್‌

ಈ ರೀತಿ ರನ್‌ಔಟ್‌ ಮೊದಲು ಮಾಡಿದ್ದು ವಿನು ಮಂಕಡ್‌

1947 ರಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿ ವಿನು ಮಾಂಕಡ್ ಅವರು ಆಸ್ಟ್ರೇಲಿಯಾದ ಆಟಗಾರ ಬಿಲ್ ಬ್ರೋವ್ನ್‌ ಅವರನ್ನು ಎರಡು ಬಾರಿ ಚೆಂಡು ಎಸೆಯುವ ಮುನ್ನವೇ ರನ್ ಔಟ್ ಮಾಡಿದ್ದರು. ಆದರೆ ಹಾಗೆ ಮಾಡುವ ಮುನ್ನಾ ಅವರು ಬಿಲ್ ಬೋವ್ನ್‌ಗೆ ಚೆಂಡು ಎಸೆಯುವ ಮುನ್ನಾ ಕ್ರೀಸ್ ಬಿಟ್ಟು ಹೊರ ಹೋಗದಂತೆ ಎಚ್ಚರಿಕೆ ನೀಡಿದ್ದರು. ಆಗಿನ ಆಸ್ಟ್ರೇಲಿಯಾ ತಂಡದ ನಾಯಕ, ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ಅವರು ಮಾಂಕಡ್ ಅವರನ್ನು ಸಮರ್ಥಿಸಿ ಮಾತನಾಡಿದ್ದರು.

ನಿನ್ನೆಯ ಘಟನೆ ಭಿನ್ನ ಏಕೆ?

ನಿನ್ನೆಯ ಘಟನೆ ಭಿನ್ನ ಏಕೆ?

ಆದರೆ ನಿನ್ನೆ ನಡೆದ ಘಟನೆ ಮಾಂಕಡ್ ಘಟನೆಗಿಂತಲೂ ಸ್ವಲ್ಪ ಭಿನ್ನವಾಗಿದೆ. ಅಶ್ವಿನ್ ಅವರು ಬೌಲಿಂಗ್ ಮಾಡುವ ವೇಳೆ, ಬಾಲ್‌ ಅನ್ನು ರಿಲೀಸ್ ಮಾಡುವ ಹಂತದಲ್ಲಿ ಬಟ್ಲರ್ ಇನ್ನೂ ಕ್ರೀಸ್ನಲ್ಲಿಯೇ ಇದ್ದರು, ಒಂದು ವೇಳೆ ಅಶ್ವಿನ್ ಅವರು ತಮ್ಮ ಬೌಲಿಂಗ್ ಆಕ್ಶನ್‌ಗೆ ತಕ್ಕಂತೆ ಚೆಂಡನ್ನು ಎಸೆದಿದ್ದರೆ ಬಟ್ಲರ್ ಆಗಿನ್ನೂ ಕ್ರೀಸ್ ನಲ್ಲಿಯೇ ಇರುತ್ತಿದ್ದರು.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಚೆನ್ನೈ ಸಮರ, ಸಂಭಾವ್ಯ XI

ಅಶ್ವಿನ್ ಕ್ರೀಡಾಸ್ಪೂರ್ತಿ ತೋರಲಿಲ್ಲವೇ?

ಅಶ್ವಿನ್ ಕ್ರೀಡಾಸ್ಪೂರ್ತಿ ತೋರಲಿಲ್ಲವೇ?

ಆದರೆ ಅಶ್ವಿನ್ ಹಾಗೆ ಮಾಡಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅಶ್ವಿನ್ ಅವರು ಬೌಲಿಂಗ್ ಹಾಕುವವೇಳೆ ಚೆಂಡು ಎಸೆಯದೆ ಒಂದು ಸೆಕೆಂಡ್ ಕಾದರು, ಆ ಸಮಯದಲ್ಲಿ ಬಟ್ಲರ್ ಸಾಮಾನ್ಯವಾಗಿಯೇ ಕ್ರೀಸ್ ಬಿಟ್ಟು ಮುಂದೆ ಹೋದರು, ಆಗ ಅಶ್ವಿನ್ ಬೇಲ್ ಎಗರಿಸಿದರು. ಇದು ಕ್ರಿಕೆಟ್ ನಿಯಮಗಳ ಪ್ರಕಾರವೇನೋ ಸರಿ ಆದರೆ ಕ್ರೀಡಾಸ್ಪೂರ್ತಿಗೆ ವಿರುದ್ಧವಾದುದು ಎಂದು ಕ್ರಿಕೆಟ್ ಪ್ರಿಯರು ವಾದ ಮಾಡುತ್ತಿದ್ದಾರೆ. ಅಶ್ವಿನ್ ಅವರನ್ನು ಸಮರ್ಥಿಸಿಕೊಳ್ಳುತ್ತಿರುವವರ ಸಂಖ್ಯೆಯೂ ದೊಡ್ಡದೇ ಇದೆ.

ಕಪಿಲ್ ದೇವ್ ಸಹ ಹೀಗೆ ರನ್‌ಔಟ್ ಮಾಡಿದ್ದರು

ಕಪಿಲ್ ದೇವ್ ಸಹ ಹೀಗೆ ರನ್‌ಔಟ್ ಮಾಡಿದ್ದರು

ಹೀಗೆ ರನ್‌ ಔಟ್‌ ಮಾಡುತ್ತಿರುವುರರಲ್ಲಿ ಅಶ್ವಿನ್ ಮೊದಲಿಗರೇನಲ್ಲ, ಜಂಟಲ್‌ಮನ್ ಕ್ರಿಕೆಟರ್ ಕಪಿಲ್ ದೇವ್ ಸಹ ಒಮ್ಮೆ ಹೀಗೆಯೇ ಬ್ಯಾಟ್ಸ್‌ಮನ್‌ ಒಬ್ಬರನ್ನು ಔಟ್ ಮಾಡಿದ್ದರು, ಆದರೆ ಅಂದೂ ಸಹ ಅವರು ಹಾಗೆ ಔಟ್ ಮಾಡುವ ಮುನ್ನಾ ಬ್ಯಾಟ್ಸ್‌ಮನ್‌ಗೆ ಎಚ್ಚರಿಕೆ ನೀಡಿದ್ದರು. ಆ ನಂತರವೇ ಅವರು ಔಟ್ ಮಾಡಿದ್ದರು.

ಎಲ್ಲಿದ್ದಲ್ಲಿಂದ ಮತದಾನದ ಅವಕಾಶಕ್ಕೆ ಮೋದಿಗೆ ಆರ್ ಅಶ್ವಿನ್ ಮನವಿ

ಕರ್ಟ್ನಿ ವಾಲ್ಷ್ ರ ಆ ಘಟನೆ ಯಾರೂ ಮರೆಯುವಂತಿಲ್ಲ

ಕರ್ಟ್ನಿ ವಾಲ್ಷ್ ರ ಆ ಘಟನೆ ಯಾರೂ ಮರೆಯುವಂತಿಲ್ಲ

'ಮಾಂಕೆಡೆಂಗ್' ವಿಷಯ ಬಂದಾಗ ವೆಸ್ಟ್‌ ಇಂಡೀಸ್‌ನ ವೇಗದ ಬೌಲರ್ ಕರ್ಟ್ನಿ ವಾಲ್ಷ್‌ ಹೆಸರು ಮೊದಲಿಗೆ ಬರುತ್ತದೆ. 1987ರ ವಿಶ್ವಕಪ್ ಪಂದ್ಯದ ಅತ್ಯಂತ ಪ್ರಮುಖ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಕರ್ಟ್ನಿ ವಾಲ್ಷ್ ಕೊನೆಯ ಓವರ್ ಮಾಡುತ್ತಿದ್ದರು, ಪಾಕಿಸ್ತಾನಕ್ಕೆ ಗೆಲ್ಲಲು ಒಂದು ಬಾಲಿಗೆ ಎರಡು ರನ್ ಬೇಕಿತ್ತು, ಇದ್ದದ್ದು ಒಂದೇ ವಿಕೆಟ್, ವಾಲ್ಷ್‌ ಬೌಲಿಂಗ್ ರನ್‌ಅಪ್ ತೆಗೆದು ಚೆಂಡು ಎಸೆಯಲು ಬರುವ ವೇಳೆಗಾಗಲೆ ಜಫ್ಫರ್ ಕ್ರೀಸ್ ಬಿಟ್ಟು ತುಂಬ ದೂರ ಹೋಗಿ ಬಿಟ್ಟಿದ್ದರು, ವಾಲ್ಷ್ ಬೌಲಿಂಗ್ ನಿಲ್ಲಿಸಿ ಬ್ಯಾಟ್ಸ್‌ಮನ್‌ಗೆ ಎಚ್ಚರಿಕೆ ಮಾತ್ರವನ್ನೇ ನೀಡಿದರು, ಕೊನೆಯ ಎಸೆತೆದಲ್ಲಿ ಫೋರ್ ಹೊಡೆದು ಪಾಕಿಸ್ತಾನ ಗೆದ್ದಿತು. ವಾಲ್ಷ್ ಅಂದು ಜಫರ್‌ ಅನ್ನು ಔಟ್ ಮಾಡಿದ್ದರೆ ವೆಸ್ಟ್‌ ಇಂಡೀಸ್ ಆ ಪಂದ್ಯ ಗೆದ್ದು ಬಿಟ್ಟಿರುತ್ತಿತ್ತು. ಆದರೆ ಗೆಲ್ಲುವುದು ಮಾತ್ರವೇ ಮುಖ್ಯವಲ್ಲ ಎಂದು ವಾಲ್ಷ್‌ಗೆ ಗೊತ್ತಿತ್ತು. ವಾಲ್ಷ್‌ಗೆ ಆಗಿನ ಪಾಕಿಸ್ತಾನದ ಅಧ್ಯಕ್ಷ ಚಿನ್ನದ ಪದಕ ನೀಡಿ ಗೌರವಿಸಿದ್ದರು.

ಬಟ್ಲರ್‌ಗೆ ಸಹ ಇದು ಮೊದಲಲ್ಲ

ಬಟ್ಲರ್‌ಗೆ ಸಹ ಇದು ಮೊದಲಲ್ಲ

ಇಂಗ್ಲೆಂಡ್ ಆಟಗಾರ ಜಾಸ್ ಬಟ್ಲರ್ ಸಹ ಇದು ಮೊದಲೇನಲ್ಲ ಹೀಗೆ ಔಟ್ ಆಗುತ್ತಿರುವುದು ಶ್ರೀಲಂಕಾ ವಿರುದ್ಧದ ಸರಣಿಯನ್ನು ಬಟ್ಲರ್ ಒಮ್ಮೆ ಹೀಗೆಯೇ 'ಮಾಕೆಂಡಿಂಗ್‌' ಗೆ ಬಲಿ ಆಗಿದ್ದರು, ಅಂದೂ ಸಹ ಲಂಕಾದ ಬೌಲರ್ ಸಚಿತ್ರ ಸೇನಾನಾಯಕೆ ಮೊದಲು ಬಟ್ಲರ್‌ಗೆ, ಚೆಂಡು ಎಸೆಯುವ ಮುನ್ನಾ ಕ್ರೀಸ್ ಬಿಡದಂತೆ ಎಚ್ಚರಿಕೆ ನೀಡಿದ್ದರು, ಆದರೆ ಬಟ್ಲರ್ ಅದನ್ನೇ ಮುಂದುವರೆಸಿದಾಗ ಸಚಿತ್ರ ಬೇಲ್ ಎಗರಿಸಿ ಬಟ್ಲರ್ ಅನ್ನು ಔಟ್ ಮಾಡಿದ್ದರು.

ಅಶ್ವಿನ್ ವಿಷಯದಲ್ಲಿ ಸಚಿನ್-ಸೆಹ್ವಾಗ್ ತೋರಿದ್ದ ಕ್ರೀಡಾಸ್ಪೂರ್ತಿ

ಅಶ್ವಿನ್ ವಿಷಯದಲ್ಲಿ ಸಚಿನ್-ಸೆಹ್ವಾಗ್ ತೋರಿದ್ದ ಕ್ರೀಡಾಸ್ಪೂರ್ತಿ

ಆರ್.ಅಶ್ವಿನ್ ಸಹ 'ಮಾಂಕೆಡೆಡ್' ಮಾಡುತ್ತಿರುವುದು ಇದು ಮೊದಲೇನಲ್ಲ, ಮುಂಚೆ ಶ್ರೀಲಂಕಾದ ಲಹೆರು ತಿರುಮಾನೆ ಯನ್ನು ಅವರು ಹೀಗೆಯೇ ಔಟ್ ಮಾಡಿದ್ದರು, ಆದರೆ ಅಂದು ಸಚಿನ್ ತೆಂಡೂಲ್ಕರ್ ಮತ್ತು ವೀರೆಂದ್ರ ಸೆಹ್ವಾಗ್ ಅವರು ಕ್ರೀಡಾಸ್ಪೂರ್ತಿ ಮೆರೆದು ಕ್ರೀಡಾ ನಿಯಮದ ಪ್ರಕಾರ ಔಟ್ ಆಗಿದ್ದರೂ ಸಹ ತಿರುಮಾನೆಗೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿದರು. ಅಶ್ವಿನ್ ಅವರು ಅಂದೂ ಸಹ ತಿರುಮಾನೆಗೆ ಎಚ್ಚರಿಕೆ ನೀಡಿರಲಿಲ್ಲ, ಆದರೆ ಸಚಿನ್, ಸೆಹ್ವಾಗ್ ಅವರು ಕ್ರೀಡಾ ಸ್ಪೂರ್ತಿ ಮೆರೆದರು.

ಅಶ್ವಿನ್ ಮಾಡಿದ್ದು ಸರಿಯಾ? ತಪ್ಪಾ?

ಅಶ್ವಿನ್ ಮಾಡಿದ್ದು ಸರಿಯಾ? ತಪ್ಪಾ?

ಮೇಲಿನ ಈ ಎಲ್ಲ ಉದಾಹರಣೆಗಳನ್ನೂ ಪರಿಗಣಿಸಿ ಅಶ್ವಿನ್ ಅವರು ನಿನ್ನೆ ಮಾಡಿದ್ದು, ಸರಿಯೇ ಅಥವಾ ತಪ್ಪೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಾವುದೇ ಆಟಕ್ಕಾದರೂ ನಿಯಮಗಳು ಎಷ್ಟು ಅವಶ್ಯಕವೋ, ಕ್ರೀಡಾ ಸ್ಪೂರ್ತಿ ಸಹ ಅಷ್ಟೆ ಅವಶ್ಯಕ. ಕ್ರೀಡಾ ಸ್ಪೂರ್ತಿಗೆ ವಿರುದ್ಧವಾಗಿ ಆಡಿ ಗೆಲ್ಲುವ ಗೆಲುವು ಗೆಲುವಲ್ಲ.

Story first published: Tuesday, March 26, 2019, 14:15 [IST]
Other articles published on Mar 26, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+