R Ashwin: ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಐದು ದಾಖಲೆಯ ಮೇಲೆ ಅಶ್ವಿನ್ ಚಿತ್ತ
ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವಣ ಮೊದಲ ಟೆಸ್ಟ್ ಚೆನ್ನೈನ ಚೆಪಾಕ ಅಂಗಳದಲ್ಲಿ ಗುರುವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಆಡಲಾಗುವ ಈ ಸರಣಿಯನ್ನು ಗೆದ್ದು, ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರ ಪಡಿಸಿಕೊಳ್ಳಲು ಭಾರತ ಪ್ಲ್ಯಾನ್ ಮಾಡಿದೆ. ಉಭಯ ತಂಡಗಳ ಆಟಗಾರರು ಮೊದಲ ಟೆಸ್ಟ್‌ಗೆ ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ .
ಈ ಪಂದ್ಯದಲ್ಲಿ ಹಲವು ಸ್ಟಾರ್ ಆಟಗಾರರು ದಾಖಲೆಯ ಪುಟ ಸೇರುವ ಕನಸು ಹೊಂದಿದ್ಧಾರೆ. ಟೀಮ್ ಇಂಡಿಯಾ ಈ ಸರಣಿಯನ್ನು ಗೆದ್ದು, ಗೆಲುವಿನ ಲೆಕ್ಕಾಚಾರದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕುವ ಆಸೆಯನ್ನು ಹೊಂದಿದೆ. ವಿರಾಟ್ ಕೊಹ್ಲಿ ಹಾಗೂ ಯಶಸ್ವಿ ಜೈಸ್ವಾಲ್ ಸಹ ದಾಖಲೆಯ ಸನಿಹದಲ್ಲಿ ನಿಂತಿದ್ದಾರೆ. ಇನ್ನು ಟೀಮ್ ಇಂಡಿಯಾ ಸ್ಪಿನ್ ಮಾಂತ್ರಿಕ ಚೆನ್ನೈನ ಪೋರ ರವಿಚಂದ್ರನ್ ಅಶ್ವಿನ್ ಸಹ ಈ ಸರಣಿಯಲ್ಲಿ ಒಟ್ಟು ಐದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.

1- ಅತಿ ಹೆಚ್ಚು ವಿಕೆಟ್ ಸಾಧನೆ
ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಹಲವು ದಾಖಲೆಗಳ ಹೊಸ್ತಿಲಲ್ಲಿ ನಿಂತಿದ್ದಾರೆ. ಅದರಲ್ಲಿ ಬಾಂಗ್ಲಾ ವಿರುದ್ಧ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಮಾಡುವ ಅವಕಾಶ ಅಶ್ವಿನ್‌ಗೆ ಇದೆ. ಅವರು ಬಾಂಗ್ಲಾದೇಶ ವಿರುದ್ಧ 6 ಟೆಸ್ಟ್ ಪಂದ್ಯಗಳಲ್ಲಿ 23 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾ ವಿರುದ್ಧ ಗರಿಷ್ಠ ವಿಕೆಟ್ ಸರದಾರನಾಗಲು ಅಶ್ವಿನ್‌ಗೆ 9 ವಿಕೆಟ್ ಅವಶ್ಯಕತೆ ಇದೆ. ಒಂದು ವೇಳೆ ಇದು ಸಾಧ್ಯವಾದಲ್ಲಿ ಇವರು ಮಾಜಿ ವೇಗಿ ಜಹೀರ್ ಖಾನ್ ದಾಖಲೆಯನ್ನು ಮುರಿಯಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ನಲ್ಲಿ ಜಹೀರ್ ಖಾನ್ 31 ವಿಕೆಟ್ ಪಡೆದಿದ್ದರು.
2- ತವರಿನಲ್ಲಿ ಅಶ್ವಿನ್ ಮ್ಯಾಜಿಕ್
ಸ್ಪಿನ್ ಪಿಚ್‌ಗಳು ಇದ್ದರೆ ಅಶ್ವಿನ್ ಅವರಿಗೆ ತುಂಬ ಇಷ್ಟ. ಭಾರತದಲ್ಲಿ ನಡೆದ ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿ ಸಹ ಇವರಿಗೆ ಸಲ್ಲಬಹುದು. ಅನಿಲ್ ಕುಂಬ್ಳೆ ಭಾರತದಲ್ಲಿ ಒಟ್ಟು 476 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಅನಿಲ್ ಕುಂಬ್ಳೆ ದಾಖಲೆಯನ್ನು ಅಳಿಸಲು ಅಶ್ವಿನ್‌ಗೆ ಇನ್ನು 22 ವಿಕೆಟ್ ಅವಶ್ಯಕತೆ ಇದೆ.
3- ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಗರಿಷ್ಠ ವಿಕೆಟ್?
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಅಶ್ವಿನ್ 51 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ದಾಖಲೆಯನ್ನು ಹಿಂದಿಕ್ಕಲು ಇನ್ನು 10 ವಿಕೆಟ್ ಅವಶ್ಯಕತೆ ಇದೆ.
4- ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಮಿಂಚು
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಶ್ವಿನ್ ತಮ್ಮ ಮಾರಕ ದಾಳಿ ಮುಂದುವರೆಸಿದ್ದಾರೆ. ಅಶ್ವಿನ್ ಈ ಚಾಂಪಿಯನ್‌ಶಿಪ್‌ನ ಅಗ್ರ ವಿಕೆಟ್ ಟೇಕರ್ ಎಂಬ ಬಿರುದು ಪಡೆಯಲು ಅವರಿಗೆ ಇನ್ನು 14 ವಿಕೆಟ್ ಅವಶ್ಯಕತೆ ಇದೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ನಾಥನ್ ಲಿಯಾನ್ ಮೊದಲ ಸ್ಥಾನದಲ್ಲಿದ್ದಾರೆ. ಲಿಯಾನ್ 187 ವಿಕೆಟ್ ಪಡೆದಿದ್ದರೆ, ಅಶ್ವಿನ್ 174 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
5- ಎರಡು ಬಾರಿ ಐದು ವಿಕೆಟ್ ಪಡೆದರೆ..
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆ ಆಸೀಸ್‌ನ ನಾಥನ್ ಲಿಯಾನ್ ಅವರ ಹೆಸರಿನಲ್ಲಿದೆ. ಈ ದಾಖಲೆಯನ್ನು ಮುರಿಯಲು ಅಶ್ವಿನ್ ಇನ್ನು ಎರಡು ಬಾರಿ ಐದು ವಿಕೆಟ್ ಸಾಧನೆ ಮಾಡಬೇಕು. ಒಂದು ವೇಳೆ ಒಂದು ಬಾರಿ ಈ ಸಾಧನೆ ಮಾಡಿದರೆ, ಲಿಯಾನ ಜೊತೆಗೆ ಅಗ್ರ ಸ್ಥಾನವನ್ನು ಪಡೆಯಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications