ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆದ 2024ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ಹತ್ತು ಫ್ರಾಂಚೈಸಿಗಳು ತಮ್ಮ ಬಲಿಷ್ಠ ತಂಡ ಕಟ್ಟಿಕೊಳ್ಳಲು ಸ್ಟಾರ್ ಆಟಗಾರರಿಗಾಗಿ ಬಿಡ್ಡಿಂಗ್ ವಾರ್‌ನಲ್ಲಿ ಪಾಲ್ಗೊಂಡಿದ್ದವು.
ಇದೇ ವೇಳೆ ನ್ಯೂಜಿಲೆಂಡ್‌ನ ಸ್ಟಾರ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೇವಲ 1.80 ಕೋಟಿ ರೂಪಾಯಿಗೆ ಖರೀದಿಸಿತು. ಹರಾಜಿಗೂ ಮುನ್ನ ದೊಡ್ಡ ಮೊತ್ತ ಬಾಚಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ನಿರೀಕ್ಷೆಗಿಂತ ಕಡಿಮೆ ಮೊತ್ತಕ್ಕೆ ಖರೀದಿಯಾಗಿದ್ದಾರೆ.

ಬೆಂಗಳೂರು ಮೂಲದ ರಚಿನ್ ರವೀಂದ್ರ ಅವರನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮುಂದಾಗಲಿಲ್ಲ ಮತ್ತು ಬಿಡ್ಡಿಂಗ್ ವಾರ್ ನಡೆಸಲಿಲ್ಲ.
ರಚಿನ್ ರವೀಂದ್ರ ಅವರ ಮೂಲ ಬೆಲೆ ಕೇವಲ 50 ಲಕ್ಷ ರೂಪಾಯಿ ಆಗಿತ್ತು. ಅದು ಭಾರೀ ಪ್ರಮಾಣದಲ್ಲಿ ಏರುವ ನಿರೀಕ್ಷೆಯಿತ್ತು. ಮೊದಲು ಸಿಎಸ್‌ಕೆ ಆರಂಭಿಕ ಬಿಡ್ ಮಾಡಿತು, ನಂತರ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕೆ ಪ್ರವೇಶಿಸಿತು.
ಪಂಜಾಬ್ ಕಿಂಗ್ಸ್ ಬಿಡ್ಡಿಂಗ್ ವಾರ್‌ಗೆ ಪ್ರವೇಶಿಸಿದ ಮುಂದಿನ ತಂಡವಾಯಿತು ಮತ್ತು ಅಂತಿಮವಾಗಿ ಸಿಎಸ್‌ಕೆ 1.80 ರೂಪಾಯಿಗೆ ಕಿವೀಸ್ ಆಲ್‌ರೌಂಡರ್‌ನನ್ನು ಖರೀದಿಸಿ ನಗೆ ಬೀರಿದರು.