Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಲ್ಲ, ಕ್ರಿಕೆಟ್‌ನಲ್ಲೂ ಇದೆ: ಕ್ರಿಸ್ ಗೇಲ್

Racism not just in football, its in cricket too says Chris Gayle

ಪೋರ್ಟ್ ಆಫ್‌ ಸ್ಪೇನ್, ಜೂನ್ 2: ವರ್ಣಬೇಧ ನೀತಿ ಬರೀ ಫುಟ್ಬಾಲ್ ಕ್ರೀಡೆಯಲ್ಲಷ್ಟೇ ಅಲ್ಲ, ಕ್ರಿಕೆಟ್‌ನಲ್ಲೂ ಇದೆ ಎಂದು ವೆಸ್ಟ್‌ ಇಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಹೇಳಿದ್ದಾರೆ. ಯುಎಸ್‌ಎಯಲ್ಲಿ ನಡೆಯುತ್ತಿರುವ 'ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಪ್ರತಿಭಟನೆಗೆ ಪ್ರತಿಕ್ರಿಯೆಯಾಗಿ ಗೇಲ್ ಈ ಹೇಳಿಕೆ ನೀಡಿದ್ದಾರೆ.

ಯುಎಸ್‌ಎಯಲ್ಲಿ ಆಫ್ರಿಕನ್-ಅಮೆರಿಕನ್ ವ್ಯಕ್ತಿ ಜಾರ್ಜ್‌ ಫ್ಲಾಯ್ಡ್ ಎಂಬವರ ಕುತ್ತಿಗೆಯನ್ನು ಮೊಣಕಾಲಿನಿಂದ ಒತ್ತಿ ಹಿಡಿದ ಡೆರೆಕ್ ಚೌವಿನ್ ಎಂಬ ಪೊಲೀಸ್ ಅಧಿಕಾರಿ ಫ್ಲಾಯ್ಡ್ ಸಾವಿಗೆ ಕಾರಣರಾಗಿದ್ದರು. ಅದಾಗಿ ಅಮೆರಿಕಾದಾದ್ಯಂತ ಈಗ ವರ್ಣಬೇಧ ನೀತಿ ವಿರುದ್ಧ ಪ್ರತಿಭಟನೆ ಜೋರಾಗಿದೆ.

'ಕಪ್ಪು ವ್ಯಕ್ತಿಗಳ ಜೀವ, ಬದುಕೂ ಉಳಿದವರ ಬದುಕಿನಂತೆಯೇ. ಕರಿಯ ವ್ಯಕ್ತಿಗಳನ್ನೇ ಗುರಿಯಾಗಿಸಲಾಗುತ್ತದೆ. ವರ್ಣ ಬೇಧ ನೀತಿ ಮಾಡುವವರಿಗೆಲ್ಲ ಫ**. ಮೂರ್ಖ ವ್ಯಕ್ತಿಗಳಿಂದಾಗಿ ಕಪ್ಪು ವರ್ಣೀಯರ ಜೀವ ಹೋಗುವುದನ್ನು ನಿಲ್ಲಿಸಿ,' ಎಂದು ಕ್ರಿಸ್ ಗೇಲ್ ಅಸಮಾಧಾನ ತೋರಿಕೊಂಡಿದ್ದಾರೆ.

'ವಿಶ್ವದಾದ್ಯಂತ ಸಂಚರಿಸುವಾಗ ನಾನೂ ವರ್ಣಬೇಧವನ್ನು ಎದುರಿಸಿದ್ದೇನೆ. ಯಾಕೆಂದರೆ ನಾನೊಬ್ಬ ಕರಿಯ. ನಾನು ಹೇಳುತ್ತಿರುವುದನ್ನು ನಂಬಿ. ವರ್ಣಬೇಧ ನೀತಿಯ ಪಟ್ಟಿ ತೆಗೆಯುತ್ತಾ ಹೋದರೆ ಆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ,' ಎಂದು ಗೇಲ್ ವಿವರಿಸಿದ್ದಾರೆ.

'ವರ್ಣಬೇಧ ನೀತಿ ಬರೀ ಫುಟ್ಬಾಲ್‌ನಲ್ಲಿಲ್ಲ, ಕ್ರಿಕೆಟ್‌ನಲ್ಲೂ ಇದೆ. ತಂಡದಲ್ಲೂ ಕರಿಯ ವ್ಯಕ್ತಿಯಾಗಿ ನಾನು ಇದರ ಪರಿಣಾಮ ಎದುರಿಸಿದ್ದೇನೆ. ಕಪ್ಪು ಮತ್ತು ಶಕ್ತಿಯುತ. ಕಪ್ಪು ಮತ್ತು ಹೆಮ್ಮೆ,' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಯುನಿವರ್ಸಲ್ ಬಾಸ್ ಗೇಲ್ ಬರೆದುಕೊಂಡಿದ್ದಾರೆ.

Story first published: Tuesday, June 2, 2020, 10:05 [IST]
Other articles published on Jun 2, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+