ಪೂಜಾರ, ರಹಾನೆ, ವಿಹಾರಿ ಆಟದ ಸೊಬಗು: ವಿಂಡೀಸ್ ಅಭ್ಯಾಸ ಪಂದ್ಯ ಡ್ರಾ

ಆ್ಯಂಟಿಗುವಾ, ಆಗಸ್ಟ್ 20: ಆ್ಯಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ವೆಸ್ಟ್ ಇಂಡೀಸ್-ಭಾರತ ನಡುವಿನ ಅಭ್ಯಾಸ ಪಂದ್ಯ ಡ್ರಾದೊಂದಿಗೆ ಅಂತ್ಯ ಕಂಡಿದೆ. ಪಂದ್ಯದಲ್ಲಿ ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ ಮತ್ತು ಯುವ ಬ್ಯಾಟ್ಸ್ಮನ್ ಹನುಮ ವಿಹಾರಿ ಆಟ ಗಮನ ಸೆಳೆಯಿತು.
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಟೆಸ್ಟ್ ಸ್ಪೆಷಾಲಿಸ್ಟ್ ಪೂಜಾರ ಶತಕದ ಬೆಂಬಲ ತಂಡಕ್ಕೆ ಲಭಿಸಿದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ನಾಯಕ ರಹಾನೆ ಮತ್ತು ವಿಹಾರಿ ಅರ್ಧ ಶತಕ ಬಾರಿಸಿ ತಂಡಕ್ಕೆ ನೆರವಿತ್ತರು. ವೆಸ್ಟ್ ಇಂಡೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಕವೆಮ್ ಹಾಡ್ಜ್ ಅವರ 51 ರನ್ ಮಾತ್ರ ದೊಡ್ಡ ವೈಯಕ್ತಿಕ ರನ್.
3 ಪಂದ್ಯಗಳ ಟಿ20ಯಲ್ಲಿ 3-0, 3 ಪಂದ್ಯಗಳ ಏಕದಿನದಲ್ಲಿ 2-0ಯಿಂದ ಸರಣಿ ಜಯಿಸಿರುವ ಭಾರತ, ಆಗಸ್ಟ್ 22ರಿಂದ ಆರಂಭಗೊಳ್ಳುವ ಟೆಸ್ಟ್ ಸರಣಿಯನ್ನೂ ವಶಪಡಿಸಿಕೊಳ್ಳುವತ್ತ ಕಣ್ಣಿಟ್ಟಿದೆ.

ಪೂಜಾರ ಶತಕದಾಟ
3 ದಿನಗಳ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಪೂಜಾರ 187 ಎಸೆತಕ್ಕೆ 100 ರನ್ ಬಾರಿಸಿದರು. ರೋಹಿತ್ ಶರ್ಮಾ 68, ಕೆಎಲ್ ರಾಹುಲ್ 36, ಹನುಮ ವಿಹಾರಿ 37, ರಿಷಬ್ ಪಂತ್ 33 ರನ್‌ನೊಂದಿಗೆ ಕೊಹ್ಲಿ ಪಡೆ 88.5 ಓವರ್‌ಗೆ 5 ವಿಕೆಟ್ ಕಳೆದು 297 ರನ್ ಮಾಡಿತು.

ಹಾಡ್ಜ್ ಮಾತ್ರ ಆಡಿದ್ದು
ವೆಸ್ಟ್ ಇಂಡೀಸ್ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಆಲ್ ರೌಂಡರ್ ಕವೆಮ್ ಹಾಡ್ಜ್ ಗಳಿಸಿದ 51 ರನ್ನೇ ಹೆಚ್ಚು. ಅದು ಬಿಟ್ಟರೆ ಜೋನಾಥನ್ ಕಾರ್ಟರ್ 26, ನಾಯಕ ಜಾಹ್ಮರ್ ಹ್ಯಾಮಿಲ್ಟನ್ 33 ರನ್ ಗಣನೀಯವೆನಿಸಿತು. ವಿಂಡೀಸ್ 56.1 ಓವರ್‌ಗೆ ಸರ್ವ ಪತನ ಕಂಡು 181 ರನ್ ಒಟ್ಟು ಸೇರಿಸಿತು. ಇಶಾಂತ್ ಶರ್ಮಾ, ಉಮೇಶ್ ಯಾದವ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್ ಪಡೆದರು.

ರಹಾನೆ, ವಿಹಾರಿ ಆಟ
ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಹಾನೆ, 54, ವಿಹಾರಿ 64, ರಿಷಬ್ ಪಂತ್ 19 ರನ್ ಗಳಿಸಿದ್ದೇ ಹೆಚ್ಚು. 78 ಓವರ್‌ಗೆ ಭಾರತ 5 ವಿಕೆಟ್ ಕಳೆದು 188 ರನ್ ಗಳಿಸಿತು. ಎದುರಾಳಿ ತಂಡದ ಅಕಿಮ್ ಫ್ರೇಜರ್ 2, ರೊಮಾರಿಯೋ ಶೆಫರ್ಡ್, ಖಾರಿ ಪಿಯರೆ 1 ವಿಕೆಟ್ ಪಡೆದರು.

21 ಓವರ್‌ಗೆ ಆಟ ಕೊನೆ
ವೆಸ್ಟ್ ಇಂಡೀಸ್ ತಂಡ ದ್ವಿತೀಯ ಇನ್ನಿಂಗ್ಸನ್ನು 21 ಓವರ್‌ಗೆ ಮುಗಿಸಿತು. ಈ ವೇಳೆ ಕೆರಿಬಿಯನ್ನರು 3 ವಿಕೆಟ್ ಕಳೆದು 47 ರನ್ ಗಳಿಸಿದ್ದರು. ಭಾರತದ ಜಸ್‌ಪ್ರೀತ್ ಬೂಮ್ರಾ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications