ಗುರ್ಬಾಝ್ ಬ್ಯಾಟಿಂಗ್ ಅಬ್ಬರ, ಜಿಂಬಾಬ್ವೆ ಮಣಿಸಿದ ಅಫ್ಘಾನಿಸ್ತಾನ

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಬುಧವಾರ (ಮಾರ್ಚ್ 17) ನಡೆದ ಮೊದಲನೇ ಟಿ20ಐ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ತಾನ ತಂಡ 48 ರನ್‌ಗಳ ಭರ್ಜರಿ ಜಯ ಗಳಿಸಿದೆ. ರಹಮಾನುಲ್ಲ ಗುರ್ಬಾಝ್ ಅವರ ಸ್ಫೋಟಕ ಅರ್ಧ ಶತಕದಿಂದಾಗಿ ಅಫ್ಘಾನ್ ಸುಲಭ ಜಯ ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ, ರಹಮಾನುಲ್ಲ ಗುರ್ಬಾಝ್ 87 (45), ಕರೀಮ್ ಜನತ್ 26, ನಾಯಕ ಅಸ್ಘರ್ ಅಫ್ಘಾನ್ 55, ಮೊಹಮ್ಮದ್ ನಬಿ 7, ರಶೀದ್ ಖಾನ್ 7 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 198 ರನ್ ಗಳಿಸಿತ್ತು.
ಗುರಿ ಬೆನ್ನಟ್ಟಿದ ಜಿಂಬಾಬ್ವೆ ತಿನಾಶೆ ಕಮುನ್ಹುಕಂವೆ 44, ತಾರಿಸೈ ಮುಸಕಂಡ 18, ನಾಯಕ ಸೀನ್ ವಿಲಿಯಮ್ಸ್ 22, ಸಿಕಂದರ್ ರಾಜಾ 22, ರಿಚ್ಮಂಡ್ ಮುತುಂಬಮಿ 15, ಬ್ರಾಂಡನ್ ಮಾವುಟಾ 10 ರನ್‌ನೊಂದಿಗೆ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದು 150 ರನ್ ಬಾರಿಸಿ ಶರಣಾಯ್ತು.
ಅಫ್ಘಾನ್ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆಯ ರಿಚರ್ಡ್ ಎನ್‌ಗರವ 2, ಬ್ಲೆಸಿಂಗ್ ಮುಝರ್ಬಾನಿ 2, ರಿಯಾನ್ ಬರ್ಲ್ 1 ವಿಕೆಟ್ ಪಡೆದರೆ, ಜಿಂಬಾಬ್ವೆ ಇನ್ನಿಂಗ್ಸ್‌ನಲ್ಲಿ ಅಫ್ಘಾನ್‌ನ ಫರೀದ್ ಮಲಿಕ್ 2, ಕರೀಮ್ ಜನತ್ 2, ರಶೀದ್ ಖಾನ್ 3 ವಿಕೆಟ್‌ನಿಂದ ಗಮನ ಸೆಳೆದರು. ರಹಮಾನುಲ್ಲ ಗುರ್ಬಾಝ್ ಪಂದ್ಯಶ್ರೇಷ್ಠರೆನಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications