ಮೊದಲ ದಿನದ ಅಂತ್ಯಕ್ಕೆ ಕೆಎಲ್ ರಾಹುಲ್ ಶತಕ ಮಿಸ್
ಚೆನ್ನೈ ಜುಲೈ 21: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ತರಬೇತುದಾರರಾಗಿ ಬುಧವಾರದಿಂದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಚೇತೇಶ್ವರ್ ಪೂಜಾರಾ ನಾಯಕತ್ವದ ಭಾರತ 'ಎ' ತಂಡ ಹಾಗೂ ಆಸ್ಟ್ರೇಲಿಯಾ ಎ ತಂಡದ ನಡುವೆ ಪಂದ್ಯ ನಡೆಯುತ್ತಿದೆ, ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತ ಎ ತಂಡ ಪರ ಕರ್ನಾಟಕದ ಕೆಎಲ್ ರಾಹುಲ್ ಅದ್ಭುತ ಆಟ ಪ್ರದರ್ಶಿಸಿ ಅರ್ಹ ಶತಕ ಗಳಿಸುವ ಹೊಸ್ತಿಲಲ್ಲಿ ಎಡವಿದರು.
ಮೊದಲ ದಿನದ ಅಂತ್ಯಕ್ಕೆ ಭಾರತ 'ಎ' ತಂಡ 221/6 ಸ್ಕೋರ್ ಮಾಡಿದೆ. ಕೆಎಲ್ ರಾಹುಲ್ 96 ರನ್ ಗಳಿಸಿ ಅರ್ಹ ಶತಕದಿಂದ ವಂಚಿತರಾದರು. ಸೀನ್ ಅಬಾಟ್ ಅವರ ಬೌಲಿಂಗ್ ನಲ್ಲಿ ಖ್ವಾಜಾಗೆ ಕ್ಯಾಚಿತ್ತು ಔಟಾದರು.
ಫೆಕೆಟ್, ಓಕೀಫೆ ತಲಾ 2 ವಿಕೆಟ್ ಕಿತ್ತರು. ನಾಯಕ ಪೂಜಾರಾ ಹಾಗೂ ರಾಹುಲ್ ಎರಡನೇ ವಿಕೆಟ್ ಗೆ 107 ರನ್ ಕಲೆ ಹಾಕಿದರು. ಅರ್ಧ ಶತಕ ಗಳಿಸಿದ ಪೂಜಾರಾ ಅವರು ವಿಕೆಟ್ ಒಪ್ಪಿಸುತ್ತಿದ್ದಂತೆ ಬಂದ ಕರ್ನಾಟಕದ ಕರುಣ್ ನಾಯರ್ ಅವರು ಸಿಕ್ಕ ಅವಕಾಶ ಕೈಚೆಲ್ಲಿ ಡಕ್ ಔಟ್ ಆದರು.

ಇಂಗ್ಲೆಂಡ್ ಕೌಂಟಿಯಲ್ಲಿ ಆಡಿ ಅನುಭವ ಪಡೆದುಕೊಂಡು ಬಂದಿರುವ ಚೇತೇಶ್ವರ ಪೂಜಾರಾ ನಾಯಕತ್ವದಲ್ಲಿ ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಶ್ರೇಯಸ್ ಗೋಪಾಲ್ ಅವರು ಆಡಲಿದ್ದಾರೆ. [ಟೀಂ ಇಂಡಿಯಾ ಕೋಚ್ ಆಗುವ ಆಕಾಂಕ್ಷೆ ಇಲ್ಲ: ದ್ರಾವಿಡ್]

ತಂಡ ಇಂತಿದೆ: ಚೇತೇಶ್ವರ್ ಪೂಜಾರಾ (ನಾಯಕ), ಕೆಎಲ್ ರಾಹುಲ್, ಅಭಿನವ್ ಮುಕುಂದ್, ಕರುಣ್ ನಾಯರ್, ಶ್ರೇಯರ್ ಅಯ್ಯರ್, ನಮನ್ ಓಜಾ (ವಿಕೆಟ್ ಕೀಪರ್) ವಿಜಯ್ ಶಂಕರ್, ಅಮಿತ್ ಮಿಶ್ರಾ, ಪ್ರಗ್ನಾನ್ ಓಜಾ, ಶಾರ್ದೂಲ್ ಠಾಕೂರ್, ವರೋನ್ ಅರುಣ್, ಅಭಿಮನ್ಯು ಮಿಥುನ್, ಉಮೇಶ್ ಯಾದವ್, ಶ್ರೇಯಸ್ ಗೋಪಾಲ್, ಬಾಬಾ ಅಪರಾಜಿತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications