ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ಕೋಚ್ ಆಗುವ ಆಕಾಂಕ್ಷೆ ಇಲ್ಲ: ದ್ರಾವಿಡ್

By Mahesh

ಮುಂಬೈ, ಜೂ.11: ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಟೀಂ ಇಂಡಿಯಾ ಕೋಚ್ ಆಗುತ್ತಾರೆ ಎಂಬ ಸುದ್ದಿ ಹಲವು ಕಾಲ ಗಿರಕಿ ಹೊಡೆದಿದ್ದು ಎಲ್ಲರಿಗೂ ಗೊತ್ತಿದೆ. ಟೀಂ ಇಂಡಿಯಾ ಕೋಚ್ ಹುದ್ದೆ ಬಿಟ್ಟು ಯುವ ಪ್ರತಿಭೆಗಳ ತರಬೇತುದಾರನಾಗಲು ದ್ರಾವಿಡ್ ಬಯಸಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಟೀಂ ಇಂಡಿಯಾ ಕೋಚ್ ಆಗುವ ಎಲ್ಲಾ ಅರ್ಹತೆ ಇದ್ದರೂ ರಾಹುಲ್ ದ್ರಾವಿಡ್ ಅವರು ಹುದ್ದೆಯನ್ನು ನಿರಾಕರಿಸಿದರು. ಇದಕ್ಕೆ ಮುಖ್ಯ ಕಾರಣ ದೀರ್ಘಾವಧಿ ಕಾಲ ತಂಡದೊಡನೆ ಕಾಲ ಕಳೆಯಬೇಕಾಗುತ್ತದೆ. ಇದರಿಂದ ವೈಯಕ್ತಿಕ ಬದುಕಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿತ್ತು.[ಸಚಿನ್, ದ್ರಾವಿಡ್, ಲಕ್ಷ್ಮಣ್, ಗಂಗೂಲಿಗೆ ಭರ್ಜರಿ ಉಡುಗೊರೆ]

ಅದರೆ, ರವಿ ಶಾಸ್ತ್ರಿ ಹಾಗೂ ತಂಡ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಇದೇ ಲಯವನ್ನು ಮುಂದುವರೆಸಿಕೊಂಡು ಹೋಗಲಿ, ನಾನು ಎಂದಿಗೂ ಟೀಂ ಇಂಡಿಯಾ ಕೋಚ್ ಆಗಲು ಬಯಸಿಲ್ಲ ಎಂದಿದ್ದಾರೆ.

I have no aspirations to be Indian coach now: Dravid

ಈ ಮೂಲಕ ಇತ್ತೀಚೆಗೆ ರವಿಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಪುಷ್ಟಿ ನೀಡಿದ್ದಂತಾಗಿದೆ. ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಮಾತನಾಡಿದ್ದ ಶಾಸ್ತ್ರಿ, ಟೀಂ ಇಂಡಿಯಾಕ್ಕೆ ಕೋಚ್ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದರು. ಹಂಗಾಮಿ ಕೋಚ್ ಆಗಿರುವ ಶಾಸ್ತ್ರಿ ದೀರ್ಘಾವಧಿ ಕೋಚ್ ಆಗಿ ಮುಂದುವರೆಯುವ ಸುಳಿವು ನೀಡಿದ್ದರು. ['ಯುವ ಕ್ರಿಕೆಟರ್ಸ್ ಕೋಚ್, ಥ್ರಿಲ್ಲಿಂಗ್ ವಿಷಯ' : ದ್ರಾವಿಡ್]

ಈ ವಿಷಯದ ಅರಿವಿದ್ದೋ ಏನೋ ದ್ರಾವಿಡ್ ಅವರು ಕೋಚ್ ಹುದ್ದೆ ಬಯಸಿಲ್ಲ ಎಂದು ತಿಳಿದು ಬಂದಿದೆ. ನಾನು ಭಾರತ ಎ ಹಾಗೂ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲು ಇಷ್ಟಪಡುತ್ತೇನೆ. ಮುರ್ನಾಲ್ಕು ಸರಣಿಗಳನ್ನು ಈ ತಂಡದೊಡನೆ ಆಡಬೇಕಿದೆ. ಟೀಂ ಇಂಡಿಯಾ ಕೋಚ್ ಆಗಲು ಬಯಸುವುದಿಲ್ಲ ಎಂದಿದ್ದಾರೆ.

42 ವರ್ಷ ವಯಸ್ಸಿನ ರಾಹುಲ್ ದ್ರಾವಿಡ್ ಅವರು, ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಸಲಹಾಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದ್ರಾವಿಡ್ ಅವರು ಐಪಿಎಲ್ ನಲ್ಲಿ ನಾಯಕ, ಕೋಚ್ ಆಗಿ ಯುವ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಹಾಗೂ ಇತ್ತೀಚಿನ ಅಜಿಂಕ್ಯ ರಹಾನೆ ಫಾರ್ಮ್ ಕೂಡಾ ದ್ರಾವಿಡ್ ಅವರ ಸಲಹೆ ಸೂಚನೆ ಫಲ ಎಂಬುದನ್ನು ಮರೆಯುವಂತಿಲ್ಲ.(ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X