ರಾಹುಲ್ ದ್ರಾವಿಡ್ ಹಾಡಿ ಹೊಗಳಿದ ಪಾಕಿಸ್ತಾನಿ ಕ್ರಿಕೆಟರ್
ಕರಾಚಿ, ಆಗಸ್ಟ್ 06: ಟೆಸ್ಟ್ ಕ್ರಿಕೆಟ್ ಲೋಕದ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ಪಾಕಿಸ್ತಾನಿ ಕ್ರಿಕೆಟರ್ ರೊಬ್ಬರು ಹಾಡಿ ಹೊಗಳಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾನು ಟೆಸ್ಟ್ ಕ್ರಿಕೆಟರ್ ಆಗಿ ಮರಳಿ ತಂಡ ಸೇರಲು ದ್ರಾವಿಡ್ ಅವರೇ ಕಾರಣ ಎಂದು ಯೂನಿಸ್ ಖಾನ್ ಹೇಳಿದ್ದಾರೆ.
ಕಠಿಣ ಪರಿಶ್ರಮ ಹಾಗೂ ಪ್ರತಿಭೆಯ ಮೂಲಕ ಪಾಕಿಸ್ತಾನ ತಂಡಕ್ಕೆ ಮರಳಿರುವ ಯೂನಿಸ್ ಖಾನ್ ಅವರು ಈ ಶ್ರೇಯಸ್ಸು ದ್ರಾವಿಡ್ ಅವರಿಗೆ ಸಲ್ಲಬೇಕು ಎಂದಿದ್ದಾರೆ.
ದ್ರಾವಿಡ್ ಅವರು ನನಗೆ ನೀಡಿದ ಸಲಹೆ, ಸೂಚನೆ, ನಿರ್ದೇಶನಗಳನ್ನು ನಾನು ಸೂಕ್ತವಾಗಿ ಬಳಸಿಕೊಂಡೆ. ನನ್ನ ವೃತ್ತಿ ಬದುಕಿನ ಏಳಿಗೆಗೆ ದ್ರಾವಿಡ್ ಅವರು ನೀಡಿದ ಮಾರ್ಗದರ್ಶನವೇ ಕಾರಣವಾಗಿದೆ ಎಂದು ಯೂನಿಸ್ ಖಾನ್ ಹೇಳಿದರು.

ನಾಯಕತ್ವಕ್ಕೆ ರಾಜೀನಾಮೆ : 2009ರಲ್ಲಿ ಪಾಕಿಸ್ತಾನದ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರ ಬಗ್ಗೆ ವಿಷಾದವಿದೆ. ಅದರೆ, ಅಂದಿನ ಪಾಕಿಸ್ತಾನಿ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಇಜಾಜ್ ಬಟ್ ಅವರಿಗೆ ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಲಾಗಲಿಲ್ಲ.
ಪಾಕಿಸ್ತಾನಿ ಆಟಗಾರರು ಅಬುದಾಬಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ನಂತರ ನನ್ನ ವಿರುದ್ಧ ತಿರುಗಿ ಬಿದ್ದರುಮುಂದೆ ಇಂಗ್ಲೆಂಡ್ ಸರಣಿ ಟಿ20 ಟೂರ್ನಿ ಮುಗಿದ ಮೇಲೆ ಪಾಕಿಸ್ತಾನ ಕ್ರಿಕೆಟ್ ತಂಡದ ಗತಿಯೇ ಬದಲಾಯಿತು ಎಂದು ಯೂನಿಸ್ ಖಾನ್ ಹೇಳಿದ್ದಾರೆ.
ಐಪಿಎಲ್ ನಲ್ಲಿ ಯೂನಿಸ್: ರಾಹುಲ್ ದ್ರಾವಿಡ್ ಅವರಿದ್ದ ರಾಜಸ್ಥಾನ್ ರಾಯಲ್ಸ್ ತಂಡ ಸೇರಿದ್ದು ನನಗೆ ತುಂಬಾ ಖುಷಿ ಕೊಟ್ಟಿತ್ತು. ಅದರೆ, ಅಂದಿನ ನಾಯಕ ಶೇನ್ ವಾರ್ನ್ ಅವರು ನನಗೆ ಹೆಚ್ಚಿನ ಅವಕಾಶ ನೀಡಲೇ ಇಲ್ಲ. ತಂಡ ನಾಕೌಟ್ ಹಂತ ತಲುಪಿದ ಮೇಲೂ ನನಗೆ ಸಿಕ್ಕಿದ್ದು ಒಂದೇ ಒಂದು ಪಂದ್ಯ. ಹೀಗಾಗಿ ಟಿ20 ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಬಯಕೆ ಈಡೇರಲೇ ಇಲ್ಲ.ಆದರೆ, ಈ ಸಂದರ್ಭದಲ್ಲಿ ದ್ರಾವಿಡ್ ಅವರ ಮಾರ್ಗದರ್ಶನ ನನ್ನ ವೃತ್ತಿ ಬದುಕಿಗೆ ಒಳ್ಳೆ ಅಡಿಪಾಯ ಹಾಕಿಕೊಟ್ಟಿತು ಎಂದಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications