ರಿಷಬ್ -ಸಂಜುಗೆ ದ್ರಾವಿಡ್ ನೀಡಿದ ಸಲಹೆ ಕೇಳಿದ್ರೆ ಅಚ್ಚರಿಯಾಗುತ್ತೆ!
ನವದೆಹಲಿ, ಮೇ 05: ಗುಜರಾತ್ ಲಯನ್ಸ್ ವಿರುದ್ಧ ಅಬ್ಬರಿಸಿದ ಡೆಲ್ಲಿ ಡೇರ್ ಡೆವಿಲ್ಸ್ ನ ಯುವ ಪ್ರತಿಭೆಗಳಾದ ರಿಷಬ್ ಪಂತ್ ಹಾಗೂ ಸಂಜು ಸಾಮ್ಸನ್ ಅವರಿಗೆ ಕೋಚ್ ರಾಹುಲ್ ದ್ರಾವಿಡ್ ಅವರು ನೀಡಿದ ಸಲಹೆ ಕೇಳಿದರೆ ಅಚ್ಚರಿ ಮೂಡಬಹುದು.
ಇಬ್ಬರು ಆಟಗಾರರು ದ್ರಾವಿಡ್ ಅವರು ಸಲಹೆ ನೀಡಿ ನನ್ನ ಹಾಗೆ ಬ್ಯಾಟಿಂಗ್ ಮಾಡಬೇಡಿ ಎಂದಿದ್ದಾರಂತೆ. ಈ ವಿಷಯವನ್ನು ದ್ರಾವಿಡ್ ಅವರು ಗುಜರಾತ್ ನಡುವಿನ ಪಂದ್ಯದ ನಂತರ ತಿಳಿಸಿದರು.

ಗುಜರಾತ್ ಲಯನ್ಸ್ ನೀಡಿದ್ದ 209 ರನ್ ಗಳ ಬೃಹತ್ ಮೊತ್ತವನ್ನು ಡೆಲ್ಲಿ ತಂಡ ಚೇಸ್ ಮಾಡಲು ಈ ಇಬರು ಆಟಗಾರರ ಅದ್ಭುತ ಪ್ರದರ್ಶನವೇ ಕಾರಣ. ಪಂತ್ ಅವರು 43 ಎಸೆತಗಳಲ್ಲಿ 97 (6x4, 9x6), ಸಂಜು ಸಾಮ್ಸನ್ 31 ಎಸೆತಗಳಲ್ಲಿ 61 (7x6) ಗಳಿಸಿ 17.3 ಓವರ್ ಗಳಲ್ಲಿ ಗುರಿ ಮುಟ್ಟಿದರು.
'ನನ್ನ ಬ್ಯಾಟಿಂಗ್ ಶೈಲಿ ಅನುಕರಿಸಿ ವಿಡಿಯೋ ನೋಡಿ ಬೆಳೆದಿದ್ದೇವೆ ಎಂದು ಇಬ್ಬರು ಹೇಳಿದ್ದಾರೆ. ಇದು ನಿಜವೇ(ನಗುತ್ತಾ). ನಾನು ಹಿಂಗೆ ಬರಿ ಸಿಕ್ಸ್, ಬೌಂಡರಿ ಬಾರಿಸುತ್ತಿದ್ದೆ (ಮತ್ತೊಮ್ಮೆ ನಗು). 20ಓವರ್ ಗಳಲ್ಲಿ 209ರನ್ ಚೇಸ್ ಮಾಡುವಾಗ ನನ್ನ ಬ್ಯಾಟಿಂಗ್ ವಿಡಿಯೋ ಹೆಚ್ಚು ನೋಡುವುದಿಲ್ಲ ಎಂಬ ನಂಬಿಕೆಯಿದೆ ಎಂದು ದ್ರಾವಿಡ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.
Story first published: Wednesday, January 3, 2018, 10:04 [IST]
Other articles published on Jan 3, 2018
Read in English: IPL: Dravid's advice to Rishabh Pant
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications