
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯಾ ರಹಾನೆ ರಾಹುಲ್ ದ್ರಾವಿಡ್ ಅವರ ದೊಡ್ಡ ಅಭಿಮಾನಿ. ಅಜಿಂಕ್ಯಾ ಅವರ ಬ್ಯಾಟಿಂಗ್ ಶೈಲಿ ದ್ರಾವಿಡ್ ಬ್ಯಾಟಿಂಗ್ ಶೈಲಿಯನ್ನು ಬಹುವಾಗಿ ಹೋಲುತ್ತದೆ ಕೂಡಾ.
ಆದರೆ ಅಜಿಂಕ್ಯಾ ಅವರ ದೊಡ್ಡ ಅಭಿಮಾನಿ ಯಾರು ಗೊತ್ತೆ? ರಾಹುಲ್ ದ್ರಾವಿಡ್ ಅವರ ಮಗ. ಹೌದು ದ್ರಾವಿಡ್ ಅವರ ಎರಡನೇ ಪುತ್ರ ಅನ್ವಯ್ ದ್ರಾವಿಡ್ ಅಜಿಂಕ್ಯಾ ರಹಾನೆ ಅವರ ದೊಡ್ಡ ಫ್ಯಾನ್.
ಇತ್ತೀಚೆಗೆ ತಮ್ಮ ಮೆಚ್ಚಿನ ಆಟಗಾರನನ್ನು ಅನ್ವಯ್ ದ್ರಾವಿಡ್ ಭೇಟಿ ಮಾಡಿ ಕೆಲ ಸಮಯ ಅವರೊಂದಿಗೆ ಕಳೆದಿದ್ದಾರೆ. ಭೇಟಿ ಮಾಡಿದ ಸಮಯ ಅನ್ವಯ್ ಅವರು ರಹಾನೆ ಅವರ ಜರ್ಸಿ ನಂಬರ್ ಇರುವ ಜರ್ಸಿಯನ್ನೇ ತೊಟ್ಟಿದ್ದರು.
ಇವರಿಬ್ಬರು ಭೇಟಿ ಮಾಡಿರುವ ಚಿತ್ರಗಳನ್ನು ರಾಜಸ್ಥಾನ ರಾಯಲ್ಸ್‌ನ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದ್ದು, ಲಕ್ಷಾಂತರ ಜನ ಇದಕ್ಕೆ ಪಾಸಿಟಿವ್ ಕಮೆಂಟ್ಸ್ ಮಾಡಿದ್ದಾರೆ.