For Quick Alerts
ALLOW NOTIFICATIONS  
For Daily Alerts
 

ರಾಹುಲ್ ದ್ರಾವಿಡ್ ಹುಟ್ಟುಹಬ್ಬಕ್ಕೆ ಮಗ ಸಮಿತ್‌ನಿಂದ ಬಲು 'ಸ್ಪೆಷಲ್' ಗಿಫ್ಟ್‌!

ಪುತ್ರ ಕೊಟ್ಟ ಗಿಫ್ಟ್ ನೋಡಿ ರಾಹುಲ್ ದ್ರಾವಿಡ್ ಫುಲ್ ಖುಷ್ | Samit Dravid
Rahul Dravid Son Samit Dravid makes it to Karnataka Under-14 team

ಬೆಂಗಳೂರು, ಜನವರಿ 10: ಸಾಧನೆಗಾಗಿ ಜನಮನಗಳಲ್ಲಿ ಸ್ಥಾನ ಗಳಿಸಿರುವ ಅಪ್ಪನೊಬ್ಬನಿಗೆ, ತನ್ನ ಮಗ ತನ್ನದೇ ಸಾಧನೆಯ ಹಾದಿಯಲ್ಲಿ ಸಾಗಿ ನಾಳೆ ತನಗಿಂತಲೂ ದೊಡ್ಡ ಪ್ರತಿಭೆಯಾಗಿ ಬೆಳೆಯಲಿದ್ದಾನೆ ಅನ್ನೋ ಸುಳಿವು ಸಿಗುವಾಗ ಆಗೋ ಖುಷಿಗೆ ಪಾರವಿದೆಯಾ? ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಭಾರತದ ಕ್ರಿಕೆಟ್‌ ಅಭಿಮಾನಿಗಳ ಆರಾಧ್ಯ, ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಅವರ ಪುತ್ರ ಸಮಿತ್ ದ್ರಾವಿಡ್ ಇಂಥದ್ದೊಂದು ಖುಷಿಯ ಗಿಫ್ಟ್‌ ಕೊಟ್ಟಿದ್ದಾರೆ.

'ಗ್ರೇಟ್‌ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್‌ ಜನವರಿ 11ಕ್ಕೆ ತನ್ನ 47ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ದ್ರಾವಿಡ್ ಹುಟ್ಟು ಹಬ್ಬಕ್ಕೆ ಮುನ್ನಾದಿನ ಅಂದರೆ ಜನವರಿ 10ರಂದು ಸೌತ್‌ ಝೋನ್ ಅಂಡರ್ 14 ಟೂರ್ನಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಾಜ್ಯ ತಂಡದಲ್ಲಿ ದ್ರಾವಿಡ್ ಮಗ ಸಮಿತ್ ದ್ರಾವಿಡ್ ಹೆಸರೂ ಇದೆ.

ಸೌತ್ ಝೋನ್ ಅಂಡರ್ 14 ಟೂರ್ನಿ ಬೆಂಗಳೂರಿನಲ್ಲಿ ಜನವರಿ 16ರಿಂದ ಫೆಬ್ರವರಿ 8ರ ವರೆಗೆ ನಡೆಯಲಿದೆ. ಎರಡು ದಿನಗಳ ಪಂದ್ಯಗಳ ಟೂರ್ನಿಯಿದು. ಈ ಪಂದ್ಯಾಟಕ್ಕೆ ಸಂಬಂಧಿಸಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಶುಕ್ರವಾರ (ಜ.10) ತಂಡ ಪ್ರಕಟಿಸಿದೆ. ಪ್ರಕಟಿತ ತಂಡಲ್ಲಿ ದ್ರಾವಿಡ್ ಪುತ್ರ ಸಮಿತ್ ಸ್ಥಾನ ಗಿಟ್ಟಿಸಿ ಅಪ್ಪನಿಗೆ ಖುಷಿಯ ಗಿಫ್ಟ್‌ ಕೊಟ್ಟಿದ್ದಾರೆ.

ಸೌತ್‌ ಝೋನ್ ಅಂಡರ್ 14 ಟೂರ್ನಿಗೆ ಆಯ್ಕೆ ಟ್ರಯಲ್ಸ್ ಆಗಿ ಇತ್ತೀಚೆಗೆ ಕೆಎಸ್‌ಸಿಎ ಇಂಟರ್ ಝೋನಲ್ ಅಂಡರ್ 14 ಟೂರ್ನಿ ನಡೆಸಿತ್ತು. ಈ ಟೂರ್ನಿ ವೇಳೆ ಒಂದೇ ಪಂದ್ಯದಲ್ಲಿ ಸಮಿತ್ ದ್ರಾವಿಡ್, ದ್ವಿಶತಕ (201 ರನ್) ಮತ್ತು ಅಜೇಯ 94 ರನ್ ಬಾರಿಸಿದ್ದರು. ಹೀಗಾಗಿ ಸೌತ್‌ ಝೋನ್ ಅಂಡರ್ 14 ಟೂರ್ನಿಗೆ ಪ್ರತಿಭಾನ್ವಿತ ಸಮಿತ್‌ನನ್ನು ಕೆಎಸ್‌ಸಿಎ ಆಯ್ಕೆ ಮಾಡಿದೆ.

ಸೌತ್‌ ಝೋನ್ ಅಂಡರ್ 14 ಟೂರ್ನಿಗೆ ಕರ್ನಾಟಕ ತಂಡ: ಕಾರ್ತಿಕೇಯ ಕೆಪಿ (ನಾಯಕ), ಶಿವಂ ಎಂಬಿ, ಸಮಿತ್ ದ್ರಾವಿಡ್, ರೋಹನ್ ಆರ್ ರೇವಂಕಾರ್, ರವಿ ಕೈರವ್ ರೆಡ್ಡಿ (ವಿಕೆ), ಸಮರ್ಥ್ ನಾಗರಾಜ್, ಕನಿಶ್ಕ್ ಎಂ (ವಿಕೆ), ರಾಹುಲ್ ಬೆಳ್ಳದ್, ಅನ್ಶ್ ಆಯ್ಮ, ಪ್ರಣವ್ ಅಶ್ವಥ್, ಹಾರ್ದಿಕ್ ರಾಜ್, ಶ್ರೀಧರ್ ಜೆ, ಪ್ರಣವ್ ಅಭಿಜಿತ್ ಭಟ್, ಆದೇಶ್ ಅರಸ್, ಆರ್ಯನ್ ಇಂಚಲ್.

Story first published: Friday, January 10, 2020, 23:31 [IST]
Other articles published on Jan 10, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+