Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಒಲಿಂಪಿಕ್ಸ್‌ನಲ್ಲಿ ಟಿ20 ಕ್ರಿಕೆಟ್‌ ಸೇರ್ಪಡೆಗೆ ರಾಹುಲ್ ದ್ರಾವಿಡ್ ಬ್ಯಾಟಿಂಗ್

Rahul Dravid supports for T20 cricket in Olympics

ಬೆಂಗಳೂರು: ಒಲಿಂಪಿಕ್ಸ್‌ ಗೇಮ್ಸ್‌ನಲ್ಲಿ ಟಿ20 ಕ್ರಿಕೆಟ್ ಸೇರಿಸಬೇಕು ಎನ್ನುವ ಯೋಚನೆಗೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಬೆಂಬಲ ಸೂಚಿಸಿದ್ದಾರೆ. ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್ ಸೇರ್ಪಡೆಯಾದರೆ ಅದು ಬಹಳಷ್ಟು ದೇಶಗಳ ಪಾಲಿಗೆ ಮತ್ತು ಕ್ರಿಕೆಟ್ ಪಾಲಿಗೆ ಹೆಮ್ಮೆಯ ವಿಚಾರ ಅನ್ನಿಸಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.

ಒಲಿಂಪಿಕ್ಸ್‌ಗೆ ಟಿ20 ಕ್ರಿಕೆಟ್‌ ಅನ್ನು ಸೇರಿಸುವ ಬಗ್ಗೆ 2018ರಲ್ಲಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಸಮೀಕ್ಷೆ ನಡೆಸಿತ್ತು. ಆಗ ಸುಮಾರು 87 ಶೇ. ಜನ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರಿಸಬೇಕು ಎಂದು ಹೇಳಿದ್ದರು. ಆದರೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರಲಿಲ್ಲ.

ವಿಶ್ವದ ಅತೀ ದೊಡ್ಡ ಮತ್ತು ಅತೀ ಶ್ರೀಮಂತ ಕ್ರಿಕೆಟ್ ಬೋರ್ಡ್ ಆಗಿರುವ ಬಿಸಿಸಿಐ ಒಲಿಂಪಿಕ್ಸ್‌ಗೆ ತಂಡವನ್ನು ಕಳುಹಿಸಿರಲಿಲ್ಲ. 2010 ಮತ್ತು 2014ರಲ್ಲಿ ಏಷ್ಯನ್ ಗೇಮ್ಸ್‌ನಲ್ಲೂ ಕ್ರಿಕೆಟ್‌ ಭಾಗವಾಗಿತ್ತು. ಅಂದೂ ಕೂಡ ಬಿಸಿಸಿಐ ಗೇಮ್ಸ್‌ಗೆ ತಂಡ ಕಳುಹಿಸಲು ನಿರಾಸಕ್ತಿ ತೋರಿತ್ತು.

'ಟಿ20 ಕ್ರಿಕೆಟ್ ಮಾದರಿ ಒಲಿಂಪಿಕ್ಸ್‌ನ ಭಾಗವಾದರೆ ಕ್ರಿಕೆಟ್‌ಗೆ ಅದೊಂದು ದೊಡ್ಡ ಹೆಮ್ಮೆ ಅನ್ನಿಸಲಿದೆ ಎಂದು ನನಗನ್ನಿಸುತ್ತದೆ. ಯಾಕೆಂದರೆ ಸುಮಾರು 75 ಟಿ20 ರಾಷ್ಟ್ರಗಳಿವೆ. ಹೀಗಾಗಿ ಬಹಳಷ್ಟು ದೇಶಗಳಲ್ಲಿ ಕ್ರಿಕೆಟ್ ನಡೆಯಲಿದೆ,' ಎಂದು ದ್ರಾವಿಡ್ ಹೇಳಿದ್ದಾರೆ. 164 ಟೆಸ್ಟ್ ಪಂದ್ಯಗಳನ್ನಾಡಿರುವ ದ್ರಾವಿಡ್ 13,288 ರನ್ ಗಳಿಸಿದ್ದಾರೆ.

Story first published: Saturday, November 14, 2020, 19:12 [IST]
Other articles published on Nov 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+