For Quick Alerts
ALLOW NOTIFICATIONS  
For Daily Alerts
 

IND vs WI: ಭಾರತದ ಪರ ತ್ರಿಮೂರ್ತಿಗಳ ಶತಕ: 286 ರನ್‌ ಮುನ್ನಡೆ

ಅಹಮದಾಬಾದ್: ಭರವಸೆಯ ಬ್ಯಾಟರ್‌ಗಳಾದ ಕರ್ನಾಟಕದ ಕೆಎಲ್ ರಾಹುಲ್‌, ವಿಕೆಟ್‌ ಕೀಪರ್ ಧ್ರುವ್ ಜುರೇಲ್‌, ಆಲ್‌ರೌಂಡರ‌ ರವೀಂದ್ರ ಜಡೇಜಾ ಬಾರಿಸಿದ ಅಬ್ಬರದ ಶತಕದ ನೆರವಿನಿಂದ ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದೆ.

ವೆಸ್ಟ್‌ ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಎರಡನೇ ದಿನ ಟೀಮ್ ಇಂಡಿಯಾ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಶುಕ್ರವಾರ ನಾಲ್ಕನೇ ದಿನದಾಟದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 121 ರನ್‌ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ, ದಿನದಾಟದ ಮುಕ್ತಾಯಕ್ಕೆ 5 ವಿಕೆಟ್‌ ನಷ್ಟಕ್ಕೆ 448 ರನ್‌ ಕಲೆ ಹಾಕಿದೆ. ಶನಿವಾರಕ್ಕೆ ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Rahul Jurel and Jadeja s Centuries Power India to Huge Lead Against West Indies in First Test

3ನೇ ವಿಕೆಟ್‌ಗೆ ಕೆಎಲ್ ರಾಹುಲ್‌ ಹಾಗೂ ಶುಭಮನ್‌ ಗಿಲ್‌ ಜೋಡಿ ದಿನದಾಟವನ್ನು ಮುಂದುವರೆಸಿ 193 ಎಸೆತಗಳಲ್ಲಿ 98 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ಶುಭಮನ್‌ ಗಿಲ್‌ ಅರ್ಧಶತಕ ಬಾರಿಸಿದ್ದಾಗ ಔಟ್ ಆದರು. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್‌ ಕಲಾತ್ಮಕ ಬ್ಯಾಟಿಂಗ್ ನಡೆಸಿದರು. ಇವರು 197 ಎಸೆತಗಳಲ್ಲಿ 12 ಬೌಂಡರಿ ನೆರವಿನಿಂದ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 11ನೇ ಶತಕವನ್ನು ಬಾರಿಸಿ ಆರ್ಭಟಿಸಿದರು.

ಜುರೇಲ್‌, ಜಡೇಜಾ ಅರ್ಭಟ

ಐದನೆ ವಿಕೆಟ್‌ಗೆ ಧ್ರುವ್ ಜುರೇಲ್‌ ಹಾಗೂ ಆಲ್‌ರೌಂಡರ್‌ ರವೀಂದ್ರ ಜಡೇಜಾ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ ತಂಡ ಅಂದುಕೊಂಡಂತೆ ಬ್ಯಾಟ್ ಮಾಡಿ ರನ್‌ಗಳನ್ನು ಹೆಚ್ಚಿಸಿತು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ವಿಂಡೀಸ್ ಬೌಲರ್‌ಗಳು ವಿಫಲರಾದರು. ಈ ಜೋಡಿ 5ನೇ ವಿಕೆಟ್‌ಗೆ 331 ಎಸೆತ ವಿಕೆಟ್‌ ಬೀಳದಂತೆ ಬ್ಯಾಟ್ ಮಾಡಿತು. ಈ ಅವಧಿಯಲ್ಲಿ ಈ ಜೋಡಿ 206 ರನ್‌ಗಳನ್ನು ಸೇರಿಸಿತು. ಟೀಮ್ ಇಂಡಿಯಾದ ವಿಕೆಟ್‌ ಕೀಪರ್‌ ಧ್ರುವ್ ಜುರೇಲ್ 15 ಬೌಂಡರಿ, 3 ಸಿಕ್ಸರ್ ಸಹಾಯದಿಂದ 125 ರನ್‌ ಸಿಡಿಸಿದರು.

Rahul Jurel and Jadeja s Centuries Power India to Huge Lead Against West Indies in First Test

ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ರವೀಂದ್ರ ಜಡೇಜಾ ತಮ್ಮ ಆಟವನ್ನು ಮುಂದುವರೆಸಿದರು. ತಮ್ಮ ತವರು ಅಂಗಳದಲ್ಲಿ ರವೀಂದ್ರ ಜಡೇಜಾ ತಮ್ಮ ಅಬ್ಬರದ ಆಟ ನಡೆಸಿದರು. ನೆರೆದ ಅಭಿಮಾನಿಗಳಿಗೆ ಹಬ್ಬದೂಟವನ್ನು ಉಣ ಬಡಿಸಿದ ಜಡ್ಡು 176 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ ಸಹಾಯದಿಂದ ಅಜೇಯ 104 ರನ್‌ ಬಾರಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ವಾಷಿಂಗ್ಟನ್‌ ಸುಂದರ್ ಉತ್ತಮ ಸಾಥ್ ನೀಡುವ ಅನಿವಾರ್ಯತೆ ಇದೆ.

ವಿಂಡೀಸ್ ತಂಡದ ಪರ ನಾಯಕ ರೋಸ್ಟನ್‌ ಚೇಸ್‌ 2 ವಿಕೆಟ್‌ ಪಡೆದು ಬೀಗಿದರು. ಟೀಮ್ ಇಂಡಿಯಾ ಮೂರನೇ ದಿನದಾಟ ಮೊದಲಾವಧಿಯಲ್ಲಿ ಎಚ್ಚರಿಕೆಯ ಆಟವನ್ನು ಆಡಿ ಮೊತ್ತವನ್ನು ಹಿಗ್ಗಿಸುವ ಪ್ಲ್ಯಾನ್ ಮಾಡಿಕೊಂಡಿದೆ.

Story first published: Friday, October 3, 2025, 16:52 [IST]
Other articles published on Oct 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+