ಜೈಪುರ್, ಸೆಪ್ಟೆಂಬರ್ 5: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಪ್ರಮುಖ ತಂಡವಾದ ರಾಜಸ್ಥಾನ್ ರಾಯಲ್ಸ್ (ಆರ್ಆರ್) ಯುನೈಟೆಡ್ ಕಿಂಗ್ಡಮ್ನಲ್ಲಿ ತನ್ನ ಬ್ರ್ಯಾಂಡ್ ಪ್ರಚಾರವನ್ನು ಮುಂದುವರೆಸುವ ಗುರಿ ಹೊಂದಿದೆ. ಆರ್ಆರ್ ಪ್ರಚಾರ ರಾಯಭಾರಿ ಶೇನ್ ವಾರ್ನ್ ಮತ್ತು ಮಾಲಕ ಮನೋಜ್ ಬದಾಳೆ ಯುಕೆಯಲ್ಲಿ ದೀರ್ಘ ಕಾಲದ ವ್ಯವಹಾರ ಮಹತ್ವಾಕಾಂಕ್ಷೆಯನ್ನು ವಿವರಿಸಿದರು.
ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್
ಸೌತ್ ಲಂಡನ್ನಲ್ಲಿರುವ ಕಿಯಾ ಓವಲ್ ಕ್ರಿಕೆಟ್ ಗ್ರೌಂಡ್ನಲ್ಲಿ ವ್ಯವಹಾರ ನಾಯಕರಿಗಾಗಿ ಕ್ರೀಡಾ ನಿರೂಪಕ ರಿಷಿ ಪೆರ್ಸಾದ್ ಆಯೋಜಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಶೇನ್ ವಾರ್ನ್ ಮತ್ತು ಮನೋಜ್ ಬದಾಳೆ ಮಾತನಾಡಿದರು. ಬ್ರ್ಯಾಂಡ್ ಪ್ರಚಾರಗೊಳಿಸುವ ಬಗ್ಗೆ ವಿಚಾರಗಳನ್ನು ಹಂಚಿಕೊಂಡರು.
ಆಟೋಗ್ರಾಫ್ ಕೊಡುವ ಬದಲು ತಾನೇ ಪಡೆದುಕೊಂಡ ವಿರಾಟ್ ಕೊಹ್ಲಿ!
ರಾಜಸ್ಥಾನ್ ರಾಯಲ್ಸ್ ತಂಡ ಯುಕೆ ಜೊತೆ ಹತ್ತಿರದ ಸಂಬಂಧ ಹೊಂದಿದೆ. ಮುಖ್ಯವಾಗಿ ಫ್ರಾಂಚೈಸಿಯ ಬ್ರಿಟಿಷ್ ಓನರ್ ಮನೋಜ್ ಇದ್ದಾರಲ್ಲದೆ, ರಾಜಸ್ಥಾನ್ ರಾಯಲ್ಸ್ನಲ್ಲಿ ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್ ಮತ್ತು ಜೋಫ್ರಾ ಆರ್ಚರ್ನಂತ ಇಂಗ್ಲೆಂಡ್ನ ಸ್ಟಾರ್ ಆಟಗಾರರೂ ಇದ್ದಾರೆ.
15 ವರ್ಷಗಳ ಹಿಂದಿನ ವಿಶ್ವದಾಖಲೆ ಮುರಿಯಲಿದ್ದಾರೆ ರಶೀದ್ ಖಾನ್
2019ರ ಮಾರ್ಚ್ನಲ್ಲಿ ಸರ್ರೆಯಲ್ಲಿರುವ ರೀಡ್ಸ್ ಸ್ಕೂಲ್ನಲ್ಲಿ ಯುಕೆ ಮೂಲದ ಅಕಾಡೆಮಿ ಸ್ಥಾಪಿಸಿದ ಮೊದಲ ಐಪಿಎಲ್ ತಂಡವಾಗಿ ರಾಜಸ್ಥಾನ್ ರಾಯಲ್ಸ್ ಗುರುತಿಸಿಕೊಂಡಿತ್ತು. ಯುಕೆಯಲ್ಲಿರುವ ರಾಜಸ್ಥಾನ್ ರಾಯಲ್ಸ್ ಅಕಾಡೆಮಿಯು ಭಾರತದಲ್ಲಿರುವ ರೋಯಲ್ಸ್ ಕೋಲ್ಟ್ಸ್ (ಹುಡುಗರಿಗೆ) ಮತ್ತು ರಾಯಲ್ ಸ್ಪಾರ್ಕ್ಸ್ (ಹುಡುಗಿಯರಿಗೆ) ಅಕಾಡೆಮಿಗಳಿಗೆ ಅನುಕೂಲಗಳನ್ನು ಒದಗಿಸಲಿದೆ.