For Quick Alerts
ALLOW NOTIFICATIONS  
For Daily Alerts
 

ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಬಗ್ಗುಬಡಿದ ರಾಜಸ್ಥಾನ್ ರಾಯಲ್ಸ್

Rajasthan vs Bangalore, 14th Match - Live Cricket Score

ಜೈಪುರ್, ಏಪ್ರಿಲ್ 2: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 2) ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಣ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ 7 ವಿಕೆಟ್ ಗೆಲುವು ದಾಖಲಿಸಿದೆ. ಟೂರ್ನಿಯಲ್ಲಿ ಆರ್‌ಆರ್‌ ಪಾಲಿನ ಮೊದಲ ಗೆಲುವಿದು. ಆದರೆ ಆರ್‌ಸಿಬಿಯ ಸೋಲು ಮುಂದುವರೆದಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45770

ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಎದುರಾಳಿಗೆ 159 ರನ್ ಗುರಿ ನೀಡಿತ್ತು. ಪಾರ್ಥಿವ್ ಪಟೇಲ್ ಅವರ ಅರ್ಧಶತಕದ (67) ಬೆಂಬಲದಿಂದ ತಂಡ ಸಾಧಾರಣ ರನ್ ಕಲೆ ಹಾಕಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ್, ಜಾಸ್ ಬಟ್ಲರ್ ಅರ್ಧಶತಕದ ಸಹಾಯದಿಂದ 19.5 ಓವರ್‌ಗೆ 3 ವಿಕೆಟ್ ಕಳೆದು 164 ರನ್ ಬಾರಿಸಿತು.

ಐಪಿಎಲ್ 2019 ಮೈಖೇಲ್ ಕನ್ನಡ 'ವಿಶೇಷ ಮುಖಪುಟ' (ಫಲಿತಾಂಶಗಳು, ಪಾಯಿಂಟ್ ಟೇಬಲ್, ಕುತೂಹಲಕಾರಿ ಅಂಶಗಳು ಇಲ್ಲಿವೆ!)

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ 23, ಎಬಿ ಡಿ ವಿಲಿಯರ್ಸ್ 13, ಶಿಮ್ರಾನ್ ಹೆಟ್ಮೇಯರ್ 1, ಪಾರ್ಥಿವ್ ಪಟೇಲ್ 67 (41 ಎಸೆತ), ಮಾರ್ಕಸ್ ಸ್ಟೋಯ್ನಿಸ್ ಅಜೇಯ 31, ಮೊಯೀನ್ ಆಲಿ ಅಜೇಯ 18 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 158 ರನ್ ಗಳಿಸಿತ್ತು.

ಆದರೆ ಟೂರ್ನಿಯಲ್ಲಿ ಒಂದೂ ಗೆಲುವು ಕಂಡಿರದ ರಾಜಸ್ಥಾನಕ್ಕೆ ಸವಾಲಿನ ರನ್ ಗುರಿ ನೀಡುವಲ್ಲಿ ಬೆಂಗಳೂರು ಎಡವಿತು. ಆರ್‌ಸಿಬಿ ತಂಡದ ಅಜಾಗರೂಕ ಬ್ಯಾಟಿಂಗ್, ಮಿಸ್ ಫೀಲ್ಡಿಂಗ್ ಕೊಹ್ಲಿ ಬಳಗವನ್ನು ಮತ್ತೆ ಮುಖಭಂಗಕ್ಕೀಡು ಮಾಡಿದೆ. ಇದು ಟೂರ್ನಿಯಲ್ಲಿ ಆರ್‌ಸಿಬಿಗೆ ಲಭಿಸಿದ ಸತತ 4ನೇ ಸೋಲು.

ರಾಯಲ್ ಚಾಲೆಂಜರ್ಸ್ ಇನ್ನಿಂಗ್ಸ್‌ ವೇಳೆ ರಾಜಸ್ಥಾನ್ ರಾಯಲ್ಸ್‌ ಶ್ರೇಯಸ್ ಗೋಪಾಲ್ 12 ರನ್ನಿಗೆ 3 ವಿಕೆಟ್ ಕಡೆವಿದರೆ, ರಾಜಸ್ಥಾನ್ ಇನ್ನಿಂಗ್ಸ್‌ ವೇಳೆ ಆರ್‌ಸಿಬಿಯ ಯುಜುವೇಂದ್ರ ಚಾಹಲ್ 17 ರನ್ನಿಗೆ 2 ವಿಕೆಟ್ ಪಡೆದು ಗಮನ ಸೆಳೆದರು. ವಿಶೇಷವೆಂದರೆ ಗೇಮ್ ಚೇಂಜರ್ ಪ್ರಶಸ್ತಿ ರಾಜಸ್ಥಾನ್ ತಂಡದಲ್ಲಿದ್ದ ಕನ್ನಡಿಗ ಶ್ರೇಯಸ್ ಗೋಪಾಲ್‌ಗೆ ಒಲಿಯಿತು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಶ್ರೇಯಸ್ ಬಾಚಿಕೊಂಡರು!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಪಾರ್ಥಿವ್ ಪಟೇಲ್ (ವಿಕೆ), ಮೊಯೆನ್ ಅಲಿ, ವಿರಾಟ್ ಕೊಹ್ಲಿ (ಸಿ), ಎಬಿ ಡಿ ವಿಲಿಯರ್ಸ್, ಶಿಮ್ರಾನ್ ಹೆಟ್‌ಮೇಯರ್, ಮಾರ್ಕಸ್ ಸ್ಟೊಯಿನಿಸ್, ಅಕ್ಷದೀಪ್ ನಾಥ್, ಉಮೇಶ್ ಯಾದವ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜಾಸ್ ಬಟ್ಲರ್ (ವಿಕೆ), ರಾಹುಲ್ ತ್ರಿಪಾಠಿ, ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಸ್ಟುವರ್ಟ್ ಬಿನ್ನಿ, ಕೃಷ್ಣಪ್ಪ ಗೌತಮ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಧವಳ್ ಕುಲಕರ್ಣಿ, ವರುಣ್ ಆ್ಯರನ್.

Story first published: Wednesday, April 3, 2019, 0:07 [IST]
Other articles published on Apr 3, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+