Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಧೋನಿ-ರಾಯುಡು ಅರ್ಧಶತಕ, ರಾಜಸ್ಥಾನ್ ವಿರುದ್ಧ ಚೆನ್ನೈ ಜಯಭೇರಿ

Rajasthan vs Chennai, 25th Match - Live Cricket Score

ಜೈಪುರ್, ಏಪ್ರಿಲ್ 11: ಜೈಪುರ್‌ನ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ 4 ವಿಕೆಟ್ ರೋಚಕ ಜಯ ಸಾಧಿಸಿದೆ. ನಾಯಕ ಎಂಎಸ್ ಧೋನಿ ಮತ್ತು ರವೀಂದ್ರ ಜಡೇಜಾ ಅರ್ಧ ಶತಕದ ನೆರವಿನೊಂದಿಗೆ ಚೆನ್ನೈ ಗೆಲುವು ದಾಖಲಿಸಿತು.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
45901

ರಾಜಸ್ಥಾನ್ ತಂಡ 20 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 151 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಚೆನ್ನೈ ಅಂಬಾಟಿ ರಾಯುಡು 57 (47), ಧೋನಿ 58 (43) ರನ್ ಬೆಂಬಲದೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 155 ರನ್ ಬಾರಿಸಿತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್ ಆರಂಭಿಕ ಓವರ್‌ಗಳಲ್ಲಿ ವೇಗದ ರನ್ ಮಾಡಿತಾದರೂ ವಿಕೆಟ್ ಕಾವಲು ಕಾಯುವಲ್ಲಿ ಎಡವಿತು. ಅಜಿಂಕ್ಯ ರಹಾನೆ 14, ಜೋಸ್ ಬಟ್ಲರ್ 23, ಸ್ಟೀವನ್ ಸ್ಮಿತ್ 15, ಸಂಜು ಸ್ಯಾಮ್ಸನ್ 6, ರಾಹುಲ್ ತ್ರಿಪಾಠಿ 10, ಬೆನ್ ಸ್ಟೋಕ್ಸ್ 28, ರಿಯಾನ್ ಪರಾಗ್ 16, ಜೋಫ್ರ ಆರ್ಚರ್ ಅಜೇಯ 13, ಶ್ರೇಯಸ್ ಗೋಪಾಲ್ ಅಜೇಯ 19 (7 ಎಸೆತ) ರನ್ ಬಾರಿಸಿದರು.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಶೇನ್ ವ್ಯಾಟ್ಸನ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂಎಸ್ ಧೋನಿ (ಸಿ &ವಿ.ಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಇಮ್ರಾನ್ ತಾಹಿರ್.

ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜೋಸ್ ಬಟ್ಲರ್ (ವಿಕೆ), ಸ್ಟೀವನ್ ಸ್ಮಿತ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಬೆನ್ ಸ್ಟೋಕ್ಸ್, ರಿಯಾನ್ ಪ್ಯಾರಾಗ್, ಜೋಫ್ರ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಧವಲ್ ಕುಲಕರ್ಣಿ.

Story first published: Thursday, April 11, 2019, 23:58 [IST]
Other articles published on Apr 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+