
ಜೈಪುರ್, ಏಪ್ರಿಲ್ 7: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 7) ನಡೆದ ಐಪಿಎಲ್ 21ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 8 ವಿಕೆಟ್ ಸುಲಭ ಜಯ ಸಾಧಿಸಿದೆ. ಕ್ರಿಸ್ ಲಿನ್ ಮತ್ತು ಸುನಿಲ್ ನರೇನ್ ಉತ್ತಮ ಜೊತೆಯಾಟದಿಂದ ಕೋಲ್ಕತ್ತಾ ಜಯ ದಾಖಲಿಸಿತು. (ಚಿತ್ರಕೃಪೆ: ಬಿಸಿಸಿಐ).
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ಗೆ ಸ್ಟೀವ್ ಸ್ಮಿತ್ ಕೊಂಚ ರನ್ ಬಲ ತುಂಬಿದರು. ನಾಯಕ ಅಜಿಂಕ್ಯ ರಹಾನೆ 5, ಜೋಸ್ ಬಟ್ಲರ್ 37, ಸ್ಮಿತ್ 73 (59 ಎಸೆತ) ರನ್ ಸೇರಿಸಿದರು. ರಾಜಸ್ಥಾನ್ 20 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 139 ರನ್ ಪೇರಿಸಲಷ್ಟೇ ಶಕ್ತವಾಯ್ತು.
ಗುರಿ ಬೆನ್ನಟ್ಟಿದ ಕೋಲ್ಕತ್ತಾಗೆ ಲಿನ್-ನರೇನ್ ಉತ್ತಮ ಜೊತೆಯಾಟದ ಆರಂಭ ನೀಡಿದರು. ಲಿನ್ 50, ನರೇನ್ 47, ರಾಬಿನ್ ಉತ್ತಪ್ಪ 26 ರನ್ ನೆರವಿನೊಂದಿಗೆ ಕೆಕೆಆರ್ 13.5 ಓವರ್‌ಗೆ 2 ವಿಕೆಟ್ ಕಳೆದು 140 ರನ್ ಬಾರಿಸಿತು. ಕೆಕೆಆರ್ ಇನ್ನಿಂಗ್ಸ್ ವೇಳೆ ಆರ್‌ಆರ್ ಆಟಗಾರ, ಕರ್ನಾಟಕದ ಶ್ರೇಯಸ್ ಗೋಪಾಲ್ 2 ವಿಕೆಟ್ ಪಡೆದು ಗಮನ ಸೆಳೆದರು.
ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜೋಸ್ ಬಟ್ಲರ್ (ವಿಕೆ), ಸ್ಟೀವನ್ ಸ್ಮಿತ್, ರಾಹುಲ್ ತ್ರಿಪಾಠಿ, ಬೆನ್ ಸ್ಟೋಕ್ಸ್, ಪ್ರಶಾಂತ್ ಚೋಪ್ರಾ, ಕೃಷ್ಣಪ್ಪ ಗೌತಮ್, ಜೋಫ್ರ ಆರ್ಚರ್, ಶ್ರೀಯಸ್ ಗೋಪಾಲ್, ಧವಳ್ ಕುಲಕರ್ಣಿ, ಸುಧೇಸನ್ ಮಿಧನ್.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ನಿತೀಶ್ ರಾಣಾ, ದಿನೇಶ್ ಕಾರ್ತಿಕ್ (ಸಿ & ವಿ.ಕೆ), ಶುಭ್‌ಮಾನ್ ಗಿಲ್, ಆಂಡ್ರೆ ರಸೆಲ್, ಪಿಯೂಶ್ ಚಾವ್ಲಾ, ಕುಲದೀಪ್ ಯಾದವ್, ಹ್ಯಾರಿ ಗರ್ನಿ, ಪ್ರಸಿದ್ಧ್ ಕೃಷ್ಣ.