Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2019: ಸ್ಟೀವ್ ಸ್ಮಿತ್ ಅರ್ಧಶತಕ, ಮುಂಬೈ ಮಣಿಸಿದ ರಾಜಸ್ಥಾನ್

Rajasthan vs Mumbai, 36th Match - Live Cricket Score

ಜೈಪುರ್, ಏಪ್ರಿಲ್ 20: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶನಿವಾರ (ಏಪ್ರಿಲ್ 20) ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 5 ವಿಕೆಟ್ ಜಯಭೇರಿ ಬಾರಿಸಿತು. ಆರ್‌ಆರ್‌ ತಂಡದ ನೂತನ ನಾಯಕ ಸ್ಟೀವ್ ಸ್ಮಿತ್ ಅವರ ಸೊಗಸಾದ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ಐಪಿಎಲ್ 12ನೇ ಆವೃತ್ತಿಯಲ್ಲಿ 3ನೇ ಗೆಲುವು ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್‌ನಿಂದ ನಾಯಕ ರೋಹಿತ್ ಶರ್ಮಾ 5, ಸೂರ್ಯಕುಮಾರ್ ಯಾದವ್ 34, ಕ್ವಿಂಟನ್ ಡಿ ಕಾಕ್ 65 (47 ಎಸೆತ), ಹಾರ್ದಿಕ್ ಪಾಂಡ್ಯ 23, ಕೀರನ್ ಪೊಲಾರ್ಡ್ 10, ಬೆನ್ ಕಟಿಂಗ್ ಅಜೇಯ 13 ರನ್ ಕೊಡುಗೆಯಿತ್ತರು.

ಐಪಿಎಲ್ 2019: ರಾಜಸ್ಥಾನ್ vs ಮುಂಬೈ ಪಂದ್ಯ, Live Score ಕೆಳಗಿದೆ

1
45912

ಮುಂಬೈ 20 ಓವರ್‌ಗೆ 5 ವಿಕೆಟ್‌ ನಷ್ಟದಲ್ಲಿ 161 ರನ್ ಬಾರಿಸಿತು. ಇಂಡಿಯನ್ಸ್ ಇನ್ನಿಂಗ್ಸ್‌ ವೇಳೆ ಕನ್ನಡಿಗ ಶ್ರೇಯಸ್ ಗೋಪಾಲ್ 21 ರನ್‌ಗೆ 2, ಸ್ಟುವರ್ಟ್ ಬಿನ್ನಿ, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಆರ್‌ಆರ್ ತಂಡದ ನಾಯಕತ್ವವನ್ನು ಸ್ಟೀವ್ ಸ್ಮಿತ್ ವಹಿಸಿದ್ದರು. ಮುಂಬರಲಿರುವ ಪಂದ್ಯಗಳಲ್ಲೂ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ.

ಗುರಿ ಬೆನ್ನಟ್ಟಿದ ರಾಜಸ್ಥಾನ್‌ಗೆ ಸಂಜು ಸ್ಯಾಮ್ಸನ್ 35 (19), ಸ್ಟೀವ್ ಸ್ಮಿತ್ 59 (48), ರಿಯಾನ್ ಪರಾಗ್ 43 (29) ರನ್ ನೆರವು ನೀಡಿದ್ದರಿಂದ ಆರ್‌ಆರ್‌ 19.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 162 ರನ್ ಪೂರೈಸಿತು. ರಾಜಸ್ಥಾನ್ ಇನ್ನಿಂಗ್ಸ್‌ ವೇಳೆ ಮುಂಬೈಯ ರಾಹುಲ್ ಚಾಹರ್ 29 ರನ್‌ಗೆ 3 ವಿಕೆಟ್ ಪಡೆದು ಗಮನ ಸೆಳೆದರು.

ರಾಜಸ್ಥಾನ್ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ವಿಕೆ), ಅಜಿಂಕ್ಯಾ ರಹಾನೆ, ಸ್ಟೀವನ್ ಸ್ಮಿತ್ (ಸಿ), ಬೆನ್ ಸ್ಟೋಕ್ಸ್, ಆಷ್ಟನ್ ಟರ್ನರ್, ಸ್ಟುವರ್ಟ್ ಬಿನ್ನಿ, ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್, ಜಯದೇವ್ ಉನಾದ್ಕತ್, ಧವಳ್ ಕುಲಕರ್ಣಿ.

ಮುಂಬೈ ಇಂಡಿಯನ್ಸ್ ತಂಡ: ರೋಹಿತ್ ಶರ್ಮಾ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೂರ್ಯಕುಮಾರ್ ಯಾದವ್, ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಬೆನ್ ಕಟಿಂಗ್, ರಾಹುಲ್ ಚಾಹರ್, ಮಾಯಾಂಕ್ ಮಾರ್ಕಂಡೆ, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬೂಮ್ರಾ.

Story first published: Saturday, April 20, 2019, 19:54 [IST]
Other articles published on Apr 20, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+