ಐಪಿಎಲ್ 2019: ಗೇಲ್ ಅಬ್ಬರ, ರಾಜಸ್ಥಾನ್‌ಗೆ ಸೋಲುಣಿಸಿದ ಪಂಜಾಬ್!

ಜೈಪುರ್, ಮಾರ್ಚ್ 25: ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಸೋಮವಾರ (ಮಾರ್ಚ್ 25) ನಡೆದ ಐಪಿಎಲ್ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ XI ಪಂಜಾಬ್ 14 ರನ್ ಜಯ ಗಳಿಸಿದೆ. ಕ್ರಿಸ್‌ಗೇಲ್ ಸ್ಫೋಟಕ ಬ್ಯಾಟಿಂಗ್ ಮತ್ತು ಕಿಂಗ್ಸ್ ಬೌಲರ್‌ಗಳ ಮಾರಕ ದಾಳಿ ತಂಡದ ಗೆಲುವಿಗೆ ಕಾರಣವಾಯ್ತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಕ್ರಿಸ್ ಗೇಲ್ ಅವರ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್‌ಗೆ 185 ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದು 170 ರನ್ ಬಾರಿಸಿ ಶರಣಾಯಿತು.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಪಂಜಾಬ್ ಪರ ಮಯಾಂಕ್ ಅಗರ್ವಾಲ್ 22, ಸರ್ಫರಾಜ್ ಖಾನ್ ಅಜೇಯ 46 ಮತ್ತು ಗೇಲ್ ಅರ್ಧಶತಕದ (47 ಎಸೆತಗಳಿಗೆ 79 ರನ್) ಕೊಡುಗೆ ನೀಡಿದ್ದು ತಂಡ ಉತ್ತಮ ರನ್ ಕಲೆ ಹಾಕಲು ನೆರವು ನೀಡಿತು. ಪಂಜಾಬ್ 20 ಓವರ್‌ಗೆ 4 ವಿಕೆಟ್ ಕಳೆದು 184 ರನ್ ಪೇರಿಸಿತು.
ಇನ್ನಿಂಗ್ಸ್‌ಗೆ ಇಳಿದ ರಾಜಸ್ಥಾನ್ ರಾಯಲ್ಸ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ನಾಯಕ ಅಜಿಂಕ್ಯ ರಹಾನೆ 27, ಜಾಸ್ ಬಟ್ಲರ್ 69, ಸಂಜು ಸ್ಯಾಮ್ಸನ್ 30, ಸ್ಟೀವ್ ಸ್ಮಿತ್ 20 ರನ್ ಸೇರಿಸಿ ತಂಡವನ್ನು ಗೆಲುವಿನೆಡೆಗೆ ಎಳೆಯುವ ಪ್ರಯತ್ನ ಮಾಡಿದರು. ಆದರೆ ಪಂಜಾಬ್ ಪರ ಸ್ಯಾಮ್ ಕರನ್, ಮುಜೀಬ್ ಉರ್ ರಹ್ಮಾನ್ ಮತ್ತು ಅಂಕಿತ್ ರಜಪೂತ್ ತಲಾ 2 ವಿಕೆಟ್ ಪಡೆದು ರಾಯಲ್ಸ್ ಸೋಲಿಸಿದರು. ಪಂದ್ಯದಲ್ಲಿ ವೇಗದ 4000 ರನ್‌ಗಾಗಿ ಗುರುತಿಸಿಕೊಂಡ ಪಂಜಾಬ್‌ನ ಗೇಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ರಾಜಸ್ಥಾನ್ ರಾಯಲ್ಸ್ ತಂಡ: ಅಜಿಂಕ್ಯ ರಹಾನೆ (ಸಿ), ಜೋಸ್ ಬಟ್ಲರ್ (ವಿಕೆ), ಸ್ಟೀವನ್ ಸ್ಮಿತ್, ಬೆನ್ ಸ್ಟೋಕ್ಸ್, ಸಂಜು ಸ್ಯಾಮ್ಸನ್, ಕೃಷ್ಣಪ್ಪ ಗೌತಮ್, ರಾಹುಲ್ ತ್ರಿಪಾಠಿ, ಶ್ರೀಯಸ್ ಗೋಪಾಲ್, ಜೋಫ್ರಾ ಆರ್ಚರ್, ಜಯದೇವ್ ಉನಾದ್ಕತ್, ಧವಾಲ್ ಕುಲಕರ್ಣಿ.
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ: ಕ್ರಿಸ್ ಗೇಲ್, ಲೋಕೇಶ್ ರಾಹುಲ್ (ವಿಕೆ), ಮಯಾಂಕ್ ಅಗರ್ವಾಲ್, ಸರ್ಫರಾಜ್ ಖಾನ್, ನಿಕೋಲಸ್ ಪೂರಾನ್, ಮನ್ದೀಪ್ ಸಿಂಗ್, ಸ್ಯಾಮ್ ಕರನ್, ರವಿಚಂದ್ರನ್ ಅಶ್ವಿನ್ (ಸಿ), ಮೊಹಮ್ಮದ್ ಶಮಿ, ಮುಜೀಬ್ ಉರ್ ರಹ್ಮಾನ್, ಅಂಕಿತ್ ರಜಪೂತ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications