ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚುಕ್ಕಾಣಿಯನ್ನು ಯಾರು ಹಿಡಿಯುತ್ತಾರೆ ಎಂಬ ಪ್ರಶ್ನೆ ಎಲ್ಲರ ತಲೆ ಕೆಡಿಸುತ್ತಿದೆ. ಈ ವೇಳೆ ಆರ್‌ಸಿಬಿ ಸಹ ಐಪಿಎಲ್ ಹರಾಜಿನಲ್ಲಿ ನಾಯಕನಿಗೆ ಬಿಡ್ ಸಹ ಮಾಡಲಿಲ್ಲ. ಆಗಲೇ ಅಭಿಮಾನಿಗಳ ಮನದಲ್ಲಿ ದೊಡ್ಡ ಪ್ರಶ್ನೆ ಉದ್ಭವಿಸಿತ್ತು. ಈ ಬಾರಿಯ ಕ್ಯಾಪ್ಟನ್ ಯಾರು? ಇದಕ್ಕೆ ಮೇಲ್ನೋಟಕ್ಕಂತೂ ವಿರಾಟ್ ಕೊಹ್ಲಿ ಆರ್‌ಸಿಬಿಯನ್ನು ಮತ್ತೊಮ್ಮೆ ಮುನ್ನಡೆಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಯುವ ಆಟಗಾರನಿಗೆ ದೊಡ್ಡ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.
ಐಪಿಎಲ್ 2025ರಲ್ಲಿ ಆರ್‌ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಟೀಮ್ ಮ್ಯಾನೆಜ್ಮೆಂಟ್ ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆರ್‌ಸಿಬಿ ಕ್ಯಾಪ್ಟನ್ ರೇಸ್‌ನಲ್ಲಿ ವಿರಾಟ್ ಕೊಹ್ಲಿ ಸೇರಿದಂತೆ ಇಬ್ಬರು ಭಾರತೀಯ ಆಟಗಾರರು ಸೇರಿದ್ದಾರೆ. ಈ ಇಬ್ಬರೂ ಆಟಗಾರರು ಈಗಾಗಲೇ ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ನಾಯಕತ್ವದ ಗುಣಗಳ ಮೂಲಕ ಗಮನ ಸೆಳೆದಿದ್ದಾರೆ.

ಆರ್‌ಸಿಬಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲು ಕೃಣಾಲ್ ಪಾಂಡ್ಯ ಸಿದ್ಧರಿದ್ದಾರೆ. ಇವರ ಮೂಲ ಬೆಲೆ 2 ಕೋಟಿ ರೂ. ಆಗಿತ್ತು. ಆರ್‌ಸಿಬಿ ಇವರಿಗೆ 5.75 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು. ಈ ವೇಳೆ ಕೃಣಾಲ್ ಬರೋಡಾ ತಂಡವನ್ನು ದೇಶೀಯ ಟೂರ್ನಿಯಲ್ಲಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಇವರಿಗೆ ನಾಯಕತ್ವ ಮಾಡಿದ ಅನುಭವ ಇದೆ. ಹೀಗಾಗಿ ಆರ್‌ಸಿಬಿ ಇವರಿಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಧ್ಯ ಪ್ರದೇಶ ತಂಡ ಮುಂಬೈ ತಂಡದ ವಿರುದ್ಧ ಸೋಲು ಕಂಡಿತು. ಮಧ್ಯ ಪ್ರದೇಶ ತಂಡವನ್ನು ಆರ್‌ಸಿಬಿ ತಂಡದ ರಜತ್ ಪಾಟಿದಾರ್ ಅವರು ಮುನ್ನಡೆಸಿದ್ದರು. ಆರ್‌ಸಿಬಿ ಇವರನ್ನು ಉಳಿಸಿಕೊಂಡಿತ್ತು. ಹೀಗಾಗಿ ಇವರ ಮೇಲೆ ಮ್ಯಾನೇಜ್ಮೆಂಟ್‌ಗೂ ತುಂಬ ಭರವಸೆ ಇದೆ. ಈ ವೇಳೆ ಆರ್‌ಸಿಬಿ ಇವರಿಗೆ ನಾಯಕತ್ವವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ. ಇನ್ನು ರಜತ್ ಪಾಟಿದಾರ್ ಮನಮೋಹಕ ಬ್ಯಾಟಿಂಗ್ ನಡೆಸಿಯೂ ಸೈ ಎನಿಸಿಕೊಂಡಿದ್ದಾರೆ.

ಒತ್ತಡದ ಸನ್ನಿವೇಶದಲ್ಲಿ ಬ್ಯಾಟಿಂಗ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರಜತ್, ಅಬ್ಬರಿಸಿದ್ದರು. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಮಧ್ಯ ಪ್ರದೇಶ ತಂಡದ ಪರ ಗರಿಷ್ಠ ರನ್ ಸಾಧಕರು. ಅಲ್ಲದೆ ರಜತ್ ಮಹತ್ವದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಬಲ್ಲ ಕ್ಷಮತೆಯನ್ನು ಹೊಂದಿದ್ದಾರೆ. ಅಲ್ಲದೆ ಪರಿಸ್ಥಿತಿಗೆ ಅನುಗುಣವಾಗಿ ಬೌಲಿಂಗ್ ಚೇಂಜ್ ಹಾಗೂ ಫೀಲ್ಡಿಂಗ್ ಅಡ್ಜ್‌ಸ್ಟಮೆಂಟ್ ಮಾಡುವುದರಲ್ಲೂ ನಿಪುಣರು.
ರಜತ್ ಪಾಟಿದಾರ್ ಅವರಲ್ಲಿನ ಈ ಎಲ್ಲ ಗುಣಗಳನ್ನು ಗಮನಿಸಿದ ಆರ್‌ಸಿಬಿ ಇವರಿಗೆ ತಂಡದ ಚುಕ್ಕಾಣಿ ನೀಡಬಹುದು. ಅಲ್ಲದೆ ಇವರು ದೇಶೀಯ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿದ ಧಾಟಿಗೆ ಅಭಿಮಾನಿಗಳು ಸಹ ಫುಲ್ ಮಾರ್ಕ್ಸ್ ನೀಡಿದ್ದಾರೆ. ಮುಂದಿನ ಬಾರಿಯ ಐಪಿಎಲ್‌ನಲ್ಲಿ ಇವರ ಹೆಗಲಿಗೆ ನಾಯಕತ್ವ ಸಿಗುತ್ತದಾ ಕಾದು ನೋಡಬೇಕಿದೆ.