'ಪಾಕ್ ವಿರುದ್ಧ ಭಾರತ ಸೋಲಿಗೆ ಕೊಹ್ಲಿ ಚಟವೇ ಕಾರಣ'
ಮುಂಬೈ, ಜುಲೈ 10 : ಬಾಲಿವುಡ್ ನ ಐಟಂ ಗರ್ಲ್, ವಿವಾದಿತ ನಟಿ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ರಾಖಿ ಕಣ್ಣು ವಿರಾಟ್ ಕೊಹ್ಲಿ ಮೇಲೆ ಬಿದ್ದಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದೇಕೆ? ವಿರಾಟ್ ಕೊಹ್ಲಿ ವಿಫಲರಾಗಿದ್ದೇಕೆ? ಎಂಬುದರ ಬಗ್ಗೆ ರಾಖಿ ಮಾತನಾಡಿದ್ದಾರೆ.

ಪಾಕಿಸ್ತಾನ ವಿರುದ್ಧದ ಸೋಲಿಗೆ ವಿರಾಟ್ ಕೊಹ್ಲಿ ಅವರ ಚಟವೇ ಕಾರಣ. ಅತಿಯಾದ ಧೂಮಪಾನ, ಮದ್ಯಪಾನ ಸೇವನೆ ಮಾಡಿದ್ದರಿಂದ ಪಂದ್ಯದ ದಿನ ಫಿಟ್ ಆಗಿ ಮೈದಾನದಲ್ಲಿರಲು ಸಾಧ್ಯವಾಗಲಿಲ್ಲ ಎಂದು ನಟಿ ರಾಖಿ ರಹಸ್ಯ ಕಂಡು ಹಿಡಿದಂತೆ ಹೇಳಿದ್ದಾರೆ.
ದೇಹಕ್ಕೆ ಒಗ್ಗುವುದಿಲ್ಲ, ಫಿಟ್ನೆಸ್ ಸರಿಯಾಗಿರಬೇಕು ಎಂಬ ಕಾರಣಕ್ಕೆ ಪೆಪ್ಸಿ ಜತೆಗಿನ ಬಹುಕೋಟಿ ಡೀಲ್ ಕ್ಯಾನ್ಸಲ್ ಮಾಡಿಕೊಂಡಿರುವ ಕೊಹ್ಲಿ ಅವರು ಮದ್ಯಪಾನ ಮಾಡುತ್ತಾರೆ ಅದು ಪಂದ್ಯದ ಹಿಂದಿನ ರಾತ್ರಿ ಎಂದರೆ ಯಾವ ಕ್ರಿಕೆಟ್ ಪ್ರೇಮಿಯೂ ನಂಬುವುದಿಲ್ಲ. ಆದರೆ, ರಾಖಿಗೆ ಮಾತ್ರ ಈ ಸತ್ಯ ಗೊತ್ತಾಗಿದೆಯಂತೆ.
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಿಂದ ಪಂದ್ಯಕ್ಕೂ ಹಿಂದಿನ ರಾತ್ರಿ ಪಾರ್ಟಿ ಮಾಡಿದ್ದರಿಂದಲೇ ಪಾಕಿಸ್ತಾನದ ಎದುರು 180 ರನ್‌ಗಳ ಹೀನಾಯ ಸೋಲು ಕಂಡಿತು. ಹೀಗಾಗಿಯೇ ಟೀಂ ಇಂಡಿಯಾದಿಂದ ಹಾಲಿ ಚಾಂಪಿಯನ್ ಪಟ್ಟವು ಕೈತಪ್ಪಿತು ಎಂದು ರಾಖಿ ಅಭಿಪ್ರಾಯಪಟ್ಟಿದ್ದಾರೆ.
ರಾತ್ರಿಯಿಡಿ ಮೋಜು ಮಸ್ತಿ ಮಾಡಿ, ಬೆಳಗ್ಗೆ ನಾಲಗೆ ತೊದಲುತ್ತಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅವರು ಉತ್ತಮ ರನ್ ಬಾರಿಸಲಿ ಎಂದು ನಿರೀಕ್ಷಿಸುವುದು ಎಷ್ಟು ಸರಿ? ವಿರಾಟ್ ಮೊದಲು ನೀವು ಸಿಗರೇಟ್ ಸೇದುವುದು, ಕುಡಿಯುವುದನ್ನು ಕಡಿಮೆ ಮಾಡಿ ಎಂದು ಹೇಳಿದ್ದಾರೆ. ಅನಿಲ್ ಕುಂಬ್ಳೆ ಜತೆ ಕೂಡಾ ಶಿಸ್ತು ಮೀರಿ ನಡೆದುಕೊಂಡಿದ್ದಕ್ಕೆ ಇಬ್ಬರಿಗೂ ಮನಸ್ತಾಪ, ಕಿತ್ತಾಟವಾಯಿತು ಎಂದು ರಾಖಿ ಹೇಳಿದ್ದಾರೆ.
Story first published: Wednesday, January 3, 2018, 10:05 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications