ಮಿಥಾಲಿಯೊಂದಿಗೆ ಕಲಹ : ಕೋಚ್ ರಮೇಶ್ ಪೋವಾರ್ ತಲೆದಂಡ ಖಚಿತ

ನವದೆಹಲಿ, ನವೆಂಬರ್ 30 : ಭಾರತದ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪೋವಾರ್ ಅವರ ಕಾರ್ಯತಂತ್ರವನ್ನು ತಂಡದ ಆಟಗಾರ್ತಿಯರೇ ಶ್ಲಾಘಿಸಿದ್ದರೂ, ಮಿಥಾಲಿ ರಾಜ್ ಹಗರಣದಿಂದಾಗಿ ಅವರು ಬೆಲೆ ತೆರಬೇಕಾದ ಸಂದರ್ಭ ಬಂದಿದೆ.
ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿರುವ ಮಿಥಾಲಿ ರಾಜ್ ಅವರೊಂದಿಗೆ ಮಾಡಿಕೊಂಡಿರುವ ಸಂಘರ್ಷದಿಂದಾಗಿ, ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಮೇಶ್ ಪೋವಾರ್ ಅವರ ಅವಧಿ ಮುಂದುವರಿಯುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸುತ್ತಿವೆ.
ಕೆಲದಿನಗಳ ಹಿಂದೆ ವೆಸ್ಟ್ ಇಂಡೀಸ್ ನಲ್ಲಿ ನಡೆದ ವಿಶ್ವಕಪ್ ಟಿ20 ಕ್ರಿಕೆಟ್ ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯದಲ್ಲಿ ಮಿಥಾಲಿ ರಾಜ್ ಅವರನ್ನು ರಮೇಶ್ ಪೋವಾರ್ ಹೊರಗಿಟ್ಟಿದ್ದರು. ಇದು ವಿವಾದ ಭುಗಿಲೇಳುವಂತೆ ಮಾಡಿತ್ತು. ಆ ಪಂದ್ಯದಲ್ಲಿ ಭಾರತ ಸೋಲು ಫೈನಲ್ ಪ್ರವೇಶಿಸಲಿಲ್ಲ.
ರಮೇಶ್ ಪೋವಾರ್ ಅವರೊಂದಿನ ಒಪ್ಪಂದ ಇದೇ ಶುಕ್ರವಾರ ಮುಕ್ತಾಯವಾಗಲಿದೆ. ಆದರೆ, ಮಿಥಾಲಿ ರಾಜ್ ಅವರೊಂದಿಗೆ ಪೋವಾರ್ ಮಾಡಿಕೊಂಡಿರುವ ಕಲಹ ಮತ್ತು ಆರೋಪ ಪ್ರತ್ಯಾರೋಪಗಳಿಂದಾಗಿ ಭಾರತ ತಂಡದ ನೈತಿಕಮಟ್ಟ ಕುಸಿದಿರುವುದರಿಂದ ಅವರ ಅವಧಿ ಮುಂದುವರಿಯಲಾರದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪ್ರಭಾವಿ ವ್ಯಕ್ತಿಯ ನಿರ್ದೇಶನದಂತೆ ಮಿಥಾಲಿಗೆ ಕೊಕ್
ಬಲ್ಲ ಮೂಲಗಳ ಪ್ರಕಾರ, ಬಿಸಿಸಿಐನ ಮುಂಬೈ ಮೂಲದ ಅತ್ಯಂತ ಪ್ರಭಾವಿ ವ್ಯಕ್ತಿಯ ನಿರ್ದೇಶನದಂತೆ ಮಿಥಾಲಿ ರಾಜ್ ಅವರನ್ನು ರಮೇಶ್ ಪೋವಾರ್ ತಂಡದಿಂದ ಹೊರಗಿಟ್ಟಿದ್ದರು. ಮಿಥಾಲಿ ಅವರು ನಾಕೌಟ್ ಪಂದ್ಯಗಳಲ್ಲಿ ಎರಡು ಅರ್ಧ ಶತಕ ಗಳಿಸಿ ಎಕಡು ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದ್ದರೂ, ಅವರು ಫಾರಂನಲ್ಲಿ ಇಲ್ಲ ಎಂದು ಕಾರಣ ನೀಡಿ ರಮೇಶ್ ಅವರು ಮಿಥಾಲಿಯನ್ನು ಹೊರಗಿಟ್ಟಿದ್ದರು.
ಕೋಚ್ ರಮೇಶ್ ಹೇಳಿಕೆಯಿಂದ ಮಿಥಾಲಿ ಪ್ರಕರಣಕ್ಕೆ ಸಕತ್ ಟ್ವಿಸ್ಟ್

ರಮೇಶ್ ಮೇಲೆ ಒತ್ತಡವನ್ನು ನಿಭಾಯಿಸದ ಆರೋಪ
ಪ್ರಭಾವಿ ವ್ಯಕ್ತಿ ಒತ್ತಡ ಹೇರಿದ್ದರೂ ಅದನ್ನು ಕೋಚ್ ಆಗಿ ಅವರು ಸಮರ್ಥವಾಗಿ ನಿರ್ವಹಿಸಬೇಕಾಗಿತ್ತು ಎಂಬುದು ಬಿಸಿಸಿಐ ಅಧಿಕಾರಿಗಳ ಆರೋಪ. ಇದರ ಬೆನ್ನ ಹಿಂದೆಯೇ ಮಿಥಾಲಿ ರಾಜ್ ಅವರು ರಮೇಶ್ ಪೋವಾರ್ ಆಡುತ್ತಿರುವ ರಾಜಕೀಯವನ್ನು ವಿವರಿಸಿ ಭಾರತೀಯ ಕ್ರಿಕೆಟ್ ಮಂಡಳಿಗೆ ಸುದೀರ್ಘ ಪತ್ರ ಬರೆದು, ಪೋವಾರ್ ತಮ್ಮನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅದು ಮಾಧ್ಯಮಗಳಿಗೆ ಸೋರಿಕೆಯಾಗಿ ರಾದ್ಧಾಂತ ಎಬ್ಬಿಸಿತ್ತು. ಈ ಹಿನ್ನೆಲೆಯಲ್ಲಿ ಪೋವಾರ್ ತಲೆದಂಡ ಅನಿವಾರ್ಯವಾಗಿದೆ.
ಮಿಥಾಲಿ ರಾಜ್ ವಿವಾದ: ಶುರುವಾದಂದಿನಿಂದ ಈವರೆಗಿನ 'ಆಗು-ಹೋಗು'ಗಳು

ಚೆನ್ನಾಗಿ ಆಡುತ್ತಿದ್ದರೂ ಹೀಗೆ ಮಾಡಿದ್ದೇಕೆ?
ವೆಸ್ಟ್ ಇಂಡೀಸ್ ನಿಂದ ಭಾರತದ ಮರಳಿದ ಬಳಿಕ ಬಿಸಿಸಿಐ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ರಮೇಶ್ ಪೋವಾರ್ ಬಳಿ ಮಿಥಾಲಿ ರಾಜ್ ಅವರನ್ನು ಸೆಮಿಫೈನಲ್ ನಲ್ಲಿ ತಂಡದಿಂದ ಹೊರಗಿಟ್ಟಿದ್ದ ಬಗ್ಗೆ ಸೂಕ್ತ ಉತ್ತರವಿರಲಿಲ್ಲ. ಮಿಥಾಲಿ ರಾಜ್ ಅವರು ಆರಂಭಿಕ ಆಟಗಾರ್ತಿಯಾಗಿ ಆಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದರು. ಆ ಕ್ರಮಾಂಕದಲ್ಲಿ ಅವರು ಚೆನ್ನಾಗಿಯೂ ಆಡುತ್ತಿದ್ದರು. ಆದರೆ, ರಮೇಶ್ ಅವರು ಮಿಥಾಲಿಯನ್ನು ಆರಂಭಿಕ ಕ್ರಮಾಂಕದಿಂದ ಮಧ್ಯಮ ಕ್ರಮಾಂಕಕ್ಕೆ ತಳ್ಳಿದ್ದರು. ಇದೂ ಕೂಡ ಇಬ್ಬರ ನಡುವೆ ಮುನಿಸಿಗೆ ಕಾರಣವಾಗಿತ್ತು.

ಮಾತುಕತೆ ನಡೆಸದೆ ಏಕಪಕ್ಷೀಯ ನಿರ್ಧಾರ
ಅಲ್ಲದೆ, ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಭಾರತದ ಸ್ಟಾರ್ ಆಟಗಾರ್ತಿಯಾಗಿರುವ ಮಿಥಾಲಿ ರಾಜ್ ಅವರೊಂದಿಗೆ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿತ್ತು ಎಂಬುದು ಕ್ರಿಕೆಟ್ ಮಂಡಳಿಯ ವಾದ. ಅದನ್ನೂ ರಮೇಶ್ ಪೋವಾರ್ ಮಾಡಿರಲಿಲ್ಲ. ಪಂದ್ಯದ ದಿನವೇ ಮುಂಬೈನಿಂದ ಬಂದ ಕರೆಗೆ ಓಗೊಟ್ಟಿದ್ದ ರಮೇಶ್ ಪೋವಾರ್ ಅವರು ಪ್ರಮುಖ ಪಂದ್ಯದಲ್ಲಿ ಮಿಥಾಲಿಯನ್ನು ತಂಡದಿಂದ ಕೈಬಿಟ್ಟಿದ್ದರು. ಆ ಪಂದ್ಯವನ್ನು ಭಾರತ ಹೀನಾಯವಾಗಿ ಸೋತು ಮತ್ತೊಮ್ಮೆ ಇಂಗ್ಲೆಂಡ್ ವಿರುದ್ಧ ಮುಖಭಂಗ ಅನುಭವಿಸಿತು. ಕಳೆದ ವಿಶ್ವಕಪ್ ನಲ್ಲಿಯೂ ಭಾರತ ಇಂಗ್ಲೆಂಡ್ ವಿರುದ್ಧ ಫೈನಲ್ ನಲ್ಲಿಯೇ ಸೋತಿತ್ತು.

ರಮೇಶ್ ಅವರನ್ನು ಬೆಂಬಲಿಸಿರುವ ಡಯಾನಾ
ಸೆಮಿಫೈನಲ್ ಪಂದ್ಯಕ್ಕೂ ಮೊದಲು ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರು ರಮೇಶ್ ಪೋವಾರ್ ಅವರ ತಂತ್ರಗಾರಿಕೆ, ಸ್ಪರ್ಧಾತ್ಮಕ ಸಂಸ್ಕೃತಿಯನ್ನು ಅಳವಡಿಸಿದ್ದಾರೆ ಎಂದು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಉತ್ತಮ ಸಲಹೆಯಿಂದಾಗಿಯೇ ತಾವು ಗೆದ್ದಿರುವುದಾಗಿ ಶ್ಲಾಘಿಸಿದ್ದರು. ಅಲ್ಲದೆ, ಆಡಳಿತ ಮಂಡಳಿಯ ಸದಸ್ಯೆಯಾಗಿರುವ ಡಯಾನಾ ಎಡುಲ್ಜಿ ಅವರು ಕೂಡ ರಮೇಶ್ ಪೋವಾರ್ ಅವರನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಭಾರತದ ಮಾಜಿ ಕೋಚ್ ತುಷಾರ್ ಅರೋಠೆ ಅವರು ಕೂಡ ಮಿಥಾಲಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಡಯಾನಾರನ್ನು ತೀವ್ರವಾಗಿ ಟೀಕಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications