Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಯುನಿವರ್ಸ್ ಬಾಸ್‌ ಕ್ರಿಸ್‌ ಗೇಲ್‌ಗೆ ರಾಮ್‌ನರೇಶ್ ಸರವಣ್ ತಿರುಗೇಟು

Ramnaresh Sarwan breaks silence about Chris Gayles allegation

ಪೋರ್ಟ್ ಆಫ್‌ ಸ್ಪೇನ್, ಮೇ 1: ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಮಾಡಿದ್ದ ಆರೋಪಕ್ಕೆ ಅವರ ಮಾಜಿ ಟೀಮ್‌ಮೇಟ್ ರಾಮ್‌ನರೇಶ್ ಸರವಣ್ ಪ್ರತಿಕ್ರಿಯಿಸಿದ್ದಾರೆ. ತಾನು ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ತಂಡವಾದ ಜಮೈಕಾ ತಲೈವಾಸ್‌ ತೊರೆಯಲು ಸರವಣ್ ಕಾರಣ ಎಂದು ಗೇಲ್ ಹೇಳಿದ್ದರು. ಇದಕ್ಕೆ ಸರವಣ್ ಸ್ಪಷ್ಟನೆ ನೀಡಿದ್ದಾರೆ.

'2020ರ ಸಿಪಿಎಲ್ ಸೀಸನ್‌ನಲ್ಲಿ ಜಮೈಕಾ ತಲೈವಾಸ್ ತಂಡದಿಂದ ಕ್ರಿಸ್‌ ಗೇಲ್ ಅವರನ್ನು ತೆಗೆದಿದ್ದಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರದಲ್ಲಿ ನಾನು ಪಾಲ್ಗೊಂಡಿಲ್ಲ,' ಎಂದು ರಾಮ್‌ನರೇಶ್ ಸರವಣ್ ತನ್ನ ಫೇಸ್ಬುಕ್‌ ಪೇಜ್‌ನಲ್ಲಿ ಹೇಳಿಕೊಂಡಿದ್ದಾರೆ.

'ಆ ವೀಡಿಯೋದಲ್ಲಿ ಗೇಲ್ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ವ್ಯಕ್ತಿಗಳ ಒಳ್ಳೆಯ ಹೆಸರು ಮತ್ತು ಖ್ಯಾತಿಗೆ ಕಳಂಕ ತಂದಿದ್ದಾರೆ,' ಎಂದು ರಾಮ್‌ನರೇಶ್ ಹೇಳಿದ್ದಾರೆ. ಆವತ್ತು ಯೂ ಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದ ಗೇಲ್, ಸರವಣ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಸರವಣ್ ಅವರನ್ನು ವಿಷದ ಹಾವು, ಕೊರೊನಾಗಿಂತ ಕೆಟ್ಟ ವ್ಯಕ್ತಿ ಎಂದೆಲ್ಲ ಎಂದು ಕರೆದಿದ್ದರು.

'ನಾನು ಹೆಚ್ಚಿನ ಆಕ್ರಮಣಗಳ ಕೇಂದ್ರಬಿಂದುವಾಗಿದ್ದೆ. ಗೇಲ್ ಹೇಳಿದ್ದೆಲ್ಲ ಸರಿಯೆಂದು ನಾನಿವತ್ತು ಪ್ರತಿಕ್ರಿಯಿಸುತ್ತಿಲ್ಲ. ಆದರೆ ಒಬ್ಬ ವ್ಯಕ್ತಿ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಬಾರದು. ಗೇಲ್ ಜೊತೆಗೆ ನಾನು ಆಡಿದ್ದೇನೆ. ಎಲ್ಲದಕ್ಕಿಂತ ಮುಖ್ಯವಾಗಿ ಆತ ನನ್ನ ಕ್ಲೋಸ್ ಫ್ರೆಂಡ್. ಈ ಆರೋಪಗಳನ್ನು ಕೇಳಿ ನನಗೆ ಶಾಕ್ ಆಯ್ತು,' ಎಂದು ರಾಮ್‌ನರೇಶ್ ಹೇಳಿಕೊಂಡಿದ್ದಾರೆ.

Story first published: Friday, May 1, 2020, 15:21 [IST]
Other articles published on May 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+