ರಣಜಿ ಟ್ರೋಫಿ: ಮಿಂಚಿದ ಕರುಣ್, ಪ್ರಸಿದ್ಧ್ ಕೃಷ್ಣ: ಜಮ್ಮು ಕಾಶ್ಮೀರ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

ಈ ಬಾರಿಯ ರಣಜಿ ಟ್ರೋಫಿಯ ಎರಡನೇ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಗೆಲುವು ದಾಖಲಸಿದೆ. ಜಮ್ಮು ಕಾಶ್ಮೀರ ವಿರುದ್ಧ ನಡೆದ ಪಂದ್ಯದಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ್ದು ಈ ಮೂಲಕ ಅಮೋಘ ಗೆಲುವು ದಾಖಲಿಸಿದೆ. ಮೊದಲ ಇನ್ನಿಂಗ್ಸ್‌ನ ಬ್ಯಾಟಿಂಗ್ ವೇಳೆ ಅನುಭವಿ ಆಟಗಾರ ಕರುಣ್ ನಾಯರ್ ಏಕಾಂಗಿ ಹೋರಾಟ ನಡೆಸಿ ಉತ್ತಮ ಮೊತ್ತಕ್ಕೆ ಕಾರಣವಾದರೆ ನಂತರ ಬೌಲಿಂಗ್‌ನಲ್ಲಿ ಪ್ರಸಿದ್ಧ್ ಕೃಷ್ಣ ದಾಳಿಗೆ ಜಮ್ಮು ಕಾಶ್ಮೀರ ತಂಡ ತತ್ತರಿಸಿತ್ತು.
ಎರಡನೇ ಇನ್ನುಂಗ್ಸ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕ ತಂಡ ದೊಡ್ಡ ಮೊತ್ತದ ಗುರಿಯನ್ನು ಜಮ್ಮು ಕಾಶ್ಮೀರ ತಂಡಕ್ಕೆ ನಿಗದಿಪಡಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಜಮ್ಮು ಕಾಶ್ಮೀರ ದಿಡ್ಡ ಪ್ರದರ್ಶನದ ಹೊರತಾಗಿಯೂ ಕರ್ನಾಟಕದ ಮುಂದೆ ಮಂಡಿಯೂರಿದೆ. ಈ ಮೂಲಕ 117 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿದೆ ಕರ್ನಾಟಕ.

ಬ್ಯಾಟಿಂಗ್‌ನಲ್ಲಿ ಕರುಣ್ ನಾಯರ್ ಅಮೋಘ ಆಟ
ಇನ್ನು ಕರ್ನಾಟಕ ತಂಡದ ಬ್ಯಾಟಿಂಗ್‌ನಲ್ಲಿ ಅನುಭವಿ ಕರುಣ್ ಬ್ಯಾಟಿಂಗ್ ಪ್ರಮುಖ ಹೈಲೈಟ್ಸ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲಾ ಆಟಗಾರರು ಕೂಡ ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾದಾಗ ನೆಲಕಚ್ಚಿ ನಿಂತು ಆಡಿದ ಕರುಣ್ ನಾಯಕ ಅಮೋಘ 175 ರನ್‌ಗಳ ಕೊಡುಗೆ ನೀಡಿದರು. ಈ ಪ್ರದರ್ಶನದ ನೆರವಿನಿಂದಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 302 ರನ್‌ಗಳಿಸಲು ಸಾಧ್ಯವಾಯಿತು. ಇನ್ನು ಕರುಣ್ ನಾಯರ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಮತ್ತೊಮ್ಮೆ ಮಿಂಚಿದರು. ಈ ಇನ್ನಿಂಗ್ಸ್‌ನಲ್ಲಿ 71 ರನ್‌ಗಳಿಸಿ ಅಜೇಯವಾಗಿದ್ದಾಗ ನಾಯಕ ಮನೀಶ್ ಪಾಂಡೆ ಡಿಕ್ಲೇರ್ ಘೋಷಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡದ ಅಗ್ರ ಕ್ರಮಾಂಕದ ಎಲ್ಲಾ ಆಟಗಾರರಿಂದಲೂ ಉಪಯುಕ್ತ ಕೊಡುಗೆ ದೊರೆತಿತ್ತು.

ಪ್ರಸಿದ್ಧ್ ಕೃಷ್ಣ ಬೌಲಿಂಗ್ ದಾಳಿಗೆ ಜಮ್ಮು ಕಾಶ್ಮೀರ ದಾಂಡಿಗರು ನಿರುತ್ತರ
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದ ಜಮ್ಮು ಕಾಶ್ಮೀರ ತಂಡಕ್ಕೆ ಕರ್ನಾಟಕದ ಪ್ರಸಿದ್ಧ್ ಕೃಷ್ಣ ದೊಡ್ಡ ಆಘಾತ ನೀಡಿದರು. ಅಗ್ರ ಕ್ರಮಾಂಕ ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗರಲ್ಲಿ ಪ್ರಸಿದ್ಧ ಕೇಷ್ಣ ದಾಳಿಗೆ ಉತ್ತರ ನಿಡುವಲ್ಲಿ ಸಂಪೂರ್ಣ ವಿಫಲವಾಗಿದ್ದರು. ಈ ಇನ್ನಿಂಗ್ಸ್‌ನಲ್ಲಿ ಜಮ್ಮು ಕಾಶ್ಮೀರ ತಂಡ ಕೇವಲ 93 ರನ್‌ಗಳಿಗೆ ಆಲೌಟ್ ಆಯಿತು. ಬರೊಬ್ಬರಿ 6 ವಿಕೆಟ್‌ಗಳು ಪ್ರಸಿದ್ಧ್ ಕೃಷ್ಣ ಪಾಲಾದವು. ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪ್ರಸಿದ್ಧ ಕೃಷ್ಣ ಉತ್ತಮ ಯಶಸ್ಸು ಸಾಧಿಸಿದ್ದಾರೆ. ಕೃಷ್ಣ ಪಾಲಿಗೆ ನಾಲ್ಕು ವಿಕೆಟ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ದೊರೆಯಿತು. ಹೀಗಾಗಿ 10 ವಿಕೆಟ್‌ಗಳ ಗೊಂಚಲನ್ನು ಪ್ರಸಿದ್ಧ್ ಕೃಷ್ಣ ತಮ್ಮದಾಗಿಸಿದ್ದಾರೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಜಮ್ಮು ಕಾಶ್ಮೀರದಿಂದ ಉತ್ತಮ ಹೋರಾಟ
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 93 ರನ್‌ಗಳಿಗೆ ಆಲೌಟ್ ಆಗಿದ್ದ ಜಮ್ಮು ಕಾಶ್ಮೀರ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಹೋರಾಟವನ್ನು ಪ್ರದರ್ಶಿಸಿತು. 507 ರನ್‌ಗಳ ಗುರಿ ಬೆನ್ನಟ್ಟಿದ ಜಮ್ಮು ಕಾಶ್ಮೀರ ತಂಡ ಆರಂಭಿಕ ಆಘಾತದ ಹೊರತಾಗಿಯೂ ದಿಟ್ಟ ಪ್ರದರ್ಶನ ನೀಡಿತು. ನಾಯಕ ಇಯಾನ್ ದೇವ್ ಸಿಂಗ್ ಅದ್ಭುತ ಶತಕ ದಾಖಲಿಸಿದರೆ ವಿಕೆಟ್ ಕೀಪರ್ ಫಜಿಲ್ ರಶೀದ್ ಅಬ್ದುಲ್ ಸಮದ್ ಅರ್ಧ ಶತಕದ ಕೊಡುಗೆ ನೀಡಿದರು. ಅಂತಿಮವಾಗಿ ಜಮ್ಮು ಕಾಶ್ಮೀರ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 390 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕರ್ನಾಟಕ ತಂಡ ಭರ್ಜರಿ 117 ರನ್‌ಗಳ ಅಂತರದ ಗೆಲುವು ಸಾಧಿಸಿದೆ.

ಆಡುವ ಬಳಗ
ಕರ್ನಾಟಕ ಆಡುವ ಬಳಗ: ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ಧಾರ್ಥ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ
ಬೆಂಚ್: ವಿಜಯ್‌ಕುಮಾರ್ ವೈಶಾಕ್, ದೇಗಾ ನಿಶ್ಚಲ್, ಕೆಸಿ ಕಾರಿಯಪ್ಪ, ಜಗದೀಶ ಸುಚಿತ್, ಮುರಳೀಧರ ವೆಂಕಟೇಶ್, ಶುಭಾಂಗ್ ಹೆಗ್ಡೆ, ಅನೀಶ್ವರ್ ಗೌತಮ್, ಶ್ರೀನಿವಾಸ್ ಶರತ್
ಜಮ್ಮು ಕಾಶ್ಮೀರ ಆಡುವ ಬಳಗ: ಕಮ್ರಾನ್ ಇಕ್ಬಾಲ್, ಜತಿನ್ ವಾಧ್ವಾನ್, ಶುಭಂ ಪುಂಡೀರ್, ಇಯಾನ್ ದೇವ್ ಸಿಂಗ್ (ನಾಯಕ), ಅಬ್ದುಲ್ ಸಮದ್, ಪರ್ವೇಜ್ ರಸೂಲ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಮುಜ್ತಾಬಾ ಯೂಸುಫ್, ಅಬಿದ್ ಮುಷ್ತಾಕ್, ಔಕಿಬ್ ನಬಿ, ಉಮ್ರಾನ್ ಮಲಿಕ್
ಬೆಂಚ್: ರಾಮ್ ದಯಾಳ್, ಉಮರ್ ನಜೀರ್ ಮಿರ್, ಆಕಾಶ್ ಚೌಧರಿ, ಸೂರ್ಯಾಂಶ್ ರೈನಾ, ಯುದ್ವೀರ್ ಸಿಂಗ್ ಚರಕ್, ಹೆನಾನ್ ನಜೀರ್ ಮಲಿಕ್, ರೋಹಿತ್ ಶರ್ಮಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications