ರಣಜಿ ಕ್ವಾ. ಫೈನಲ್: ಉ. ಪ್ರದೇಶ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮೊತ್ತಕ್ಕೆ ಕರ್ನಾಟಕ ಆಲೌಟ್

ಬೆಂಗಳೂರಿನ ಆಲೂರಿನಲ್ಲಿ ರಣಜಿ ಕ್ವಾರ್ಟರ್‌ಫೈನಲ್ ಪಂದ್ಯಗಳು ನಡೆಯುತ್ತಿದ್ದು ಕರ್ನಾಟಕ ತಂಡಕ್ಕೆ ಉತ್ತರ ಪ್ರದೇಶ ಎದುರಾಳಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿರುವ ಕರ್ನಾಟಕ ತಂಡ ದೊಡ್ಡ ಮೊತ್ತವನ್ನು ಪೇರಿಸಲು ವಿಫಲವಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ತಂಡ 253 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ. ಇದೀಗ ಉತ್ತರ ಪ್ರದೇಶ ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ ತಂಡದ ಬೌಲರ್‌ಗಳು ಕೂಡ ಮೇಲುಗೈ ಸಾಧಿಸುವ ಮುನ್ಸೂಚನೆ ನೀಡಿದ್ದಾರೆ.
ಕರ್ನಾಟಕದ ಪರವಾಗಿ ಆರಂಭಿಕ ಆಟಗಾರ ಸಮರ್ಥ್ ಹಾಗೂ ಶ್ರೇಯಸ್ ಗೋಪಾಲ್ ಮಾತ್ರವೇ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಯಶಸ್ವಿಯಾದರು. ಈ ಇಬ್ಬರು ಆಟಗಾರರು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಸಮರ್ಥ್ 57 ರನ್‌ಗಳ ಕೊಡುಗೆ ನೀಡಿದರೆ 7ನೇ ಕ್ರಮಾಂಕದಲ್ಲಿ ಇಳಿದ ಶ್ರೇಯಸ್ ಗೋಪಾಲ್ 56 ರನ್‌ಗಳ ಕೊಡುಗೆ ನೀಡಿದ್ದಾರೆ. ಮಯಾಂಕ್ ಅಗರ್ವಾಲ್, ಕರುಣ್ ನಾಯರ್ ಅವರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಸಿದ್ಧಾರ್ಥ್ 37 ರನ್‌ಗಳನ್ನು ಗಳಿಸಿದರೆ ನಾಯಕ ಮನೀಶ್ ಪಾಂಡೆ 27 ರನ್‌ಗಳ ಕೊಡುಗೆ ನೀಡಿದ್ದಾರೆ. ಅಂತಿಮವಾಗಿ ಕರ್ನಾಟಕ 253 ರನ್‌ಗಳನ್ನು ಗಳಿಸಿ ಮೊದಲ ಇನ್ನಿಂಗ್ಸ್ ಅಂತ್ಯಗೊಳಿಸಿದೆ.
ಇನ್ನು ಉತ್ತರ ಪ್ರದೇಶದ ಪರವಾಗಿ ಬೌಲಿಂಗ್‌ನಲ್ಲಿ ಸೌರಭ್ ಕುಮಾರ್ ಅದ್ಭುತ ಪ್ರದರ್ಶನ ನೀಡಿದರು. ಸೌರಭ್ ಈ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೊಂಚಲು ಪಡೆಯಲು ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಶಿವಂ ಮಾವಿ ಕೂಡ ಮೂರು ವಿಕೆಟ್ ಪಡೆದು ಕರ್ನಾಟಕ ಬ್ಯಾಟರ್‌ಗಳಿಗೆ ಕಂಠಕವಾದರು. ಯಶ್ ದಯಾಳ್ ಎರಡು ವಿಕೆಟ್ ಪಡೆದರೆ ರಾಜ್‌ಪೂತ್ ಒಂದು ವಿಕೆಟ್ ಸಂಪಾದಿಸಿದರು.
ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ರವಿಕುಮಾರ್ ಸಮರ್ಥ್, ಕರುಣ್ ನಾಯರ್, ಮನೀಶ್ ಪಾಂಡೆ (ನಾಯಕ), ಕೃಷ್ಣಮೂರ್ತಿ ಸಿದ್ಧಾರ್ಥ್, ಶ್ರೀನಿವಾಸ್ ಶರತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿಧ್ವತ್ ಕಾವೇರಪ್ಪ, ವಿಜಯ್ ಕುಮಾರ್ ವೈಶಾಕ್
ಬೆಂಚ್: ದೇಗಾ ನಿಶ್ಚಲ್, ಕೆ ಸಿ ಕಾರಿಯಪ್ಪ, ದೇವದತ್ತ್ ಪಡಿಕ್ಕಲ್, ವಿ ಕೌಶಿಕ್, ಮುರಳೀಧರ ವೆಂಕಟೇಶ್, ಜಗದೀಶ ಸುಚಿತ್, ಕಿಶನ್ ಬೇಡರೆ, ಶುಭಾಂಗ್ ಹೆಗ್ಡೆ, ಶರತ್ ಬಿಆರ್
ಉತ್ತರ ಪ್ರದೇಶ ಆಡುವ ಬಳಗ: ಸಮರ್ಥ್ ಸಿಂಗ್, ಪ್ರಿಯಂ ಗಾರ್ಗ್, ಪ್ರಿನ್ಸ್ ಯಾದವ್, ರಿಂಕು ಸಿಂಗ್, ಆರ್ಯನ್ ಜುಯಲ್, ಕರಣ್ ಶರ್ಮಾ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಶಿವಂ ಮಾವಿ, ಅಂಕಿತ್ ರಾಜ್‌ಪೂತ್, ಯಶ್ ದಯಾಳ್, ಸೌರಭ್ ಕುಮಾರ್
ಬೆಂಚ್: ಅಲ್ಮಾಸ್ ಶೌಕತ್, ಕುಲದೀಪ್ ಯಾದವ್, ಜೀಶನ್ ಅನ್ಸಾರಿ, ಶಾನು ಸೈನಿ, ಸಮೀರ್ ಚೌಧರಿ, ಮಾಧವ್ ಕೌಶಿಕ್, ಹರ್ದೀಪ್ ಸಿಂಗ್, ರಿಷಭ್ ಬನ್ಸಾಲ್, ಪಾರ್ಥ್ ಮಿಶ್ರಾ, ಆಕಿಬ್ ಖಾನ್, ಶಿವಂ ಶರ್ಮಾ, ಜಸ್ಮರ್ ಧಂಖರ್, ಅಕ್ಷದೀಪ್ ನಾಥ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications